

ನವದೆಹಲಿ: ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯುತನ್ನ ಮಿತ್ರಪಕ್ಷಗಳಿಗೆ ಜಾರಿ ನಿರ್ದೇಶನಾಲಯದಿಂದ ದಾಳಿ ಮಾಡಿಸುವುದಾಗಿ ಬೆದರಿಸುವ ಮೂಲಕ ಒಗ್ಗೂಡಿಸಿದೆ ಎಂದು ಎನ್ಡಿಎ ಮೃತ್ರಿಕೂಟದ ಸಭೆ ಕುರಿತು ಎಎಪಿ ನಾಯಕ ರಾಘವ್ ಚಡ್ಡಾ ವ್ಯಂಗ್ಯವಾಡಿದ್ದಾರೆ.
ಎನ್ಡಿಎ ಸಭೆಗೆ 38 ಪಕ್ಷಗಳ ನಾಯಕರು ಹಾಜರಾಗುವುದಾಗಿ ಖಚಿತಪಡಿಸಿರುವುದಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿಕೆಗೆ ರಾಘವ್ ಚಡ್ಡಾ ತಿರುಗೇಟು ನೀಡಿದ್ದು, 38 ಪಕ್ಷಗಳ ಎನ್ಡಿಎ ಅದನ್ನು ನಿಮಗೆ ತಂದುಕೊಟ್ಟಿದ್ದು, ಇಡಿ ಎಂದು ಕುಟುಕಿದ್ದಾರೆ.
2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ರಾಷ್ಟ್ರೀಯ ವಿಪಕ್ಷಗಳ ಎರಡನೇ ಸಭೆ ನಡೆಯುತ್ತಿರುವ ಬೆನ್ನಲ್ಲೇ ಎನ್ಡಿಎ ಮೃತ್ರಿಕೂಟದ ಮೀಟಿಂಗ್ ಕರೆದಿರುವುದು ಟೀಕೆಗೆ ಗುರಿಯಾಗಿದೆ.
ಸಭೆಯಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಹಾಗೂ ಸಂಜಯ್ ಸಿಂಗ್ ಜೊತೆ ಭಾಗಿಯಾಗಿದ್ದಾರೆ.