More

    ರಣರಂಗವಾಗಿರುವ ಇಸ್ರೇಲ್​ನಲ್ಲಿ ಸಿಲುಕಿಕೊಂಡಿದ್ದಾರೆ ಕುಂದಾಪುರದ 30 ಮಂದಿ!

    ಕುಂದಾಪುರ: ಯುದ್ಧಪೀಡಿತ ಇಸ್ರೇಲ್​ನಲ್ಲಿ ಕರಾವಳಿಯ ಆರುನೂರು ಮಂದಿ ಇದ್ದಾರೆ ಎನ್ನಲಾಗಿದ್ದು, ಅವರೂ ಸೇರಿದಂತೆ ಕುಂದಾಪುರದ ಮೂವತ್ತು ಮಂದಿ ಅಲ್ಲಿ ಸಿಲುಕಿಕೊಂಡಿದ್ದಾರೆ. ಕುಂದಾಪುರ, ಬೈಂದೂರು ತಾಲೂಕುಗಳ 30 ಜನರು ಇಸ್ರೇಲ್​ನಲ್ಲಿದ್ದು, ಸದ್ಯ ಎಲ್ಲರೂ ಸುರಕ್ಷಿತರಾಗಿದ್ದಾರೆ.

    ಕರಾವಳಿ ಜಿಲ್ಲೆಯವರು ಇರುವ ಪ್ರದೇಶ ಕಡಿಮೆ ಯುದ್ಧಪೀಡಿತವಾಗಿದ್ದು ಎಲ್ಲರೂ ಬಂಕರಲ್ಲಿ ರಕ್ಷಣೆ ಪಡೆದಿದ್ದಾರೆ ಎಂಬುದಾಗಿ ಅವರಲ್ಲೊಬ್ಬರಾಗಿರುವ ಕ್ಲಾರೆನ್ಸ್ ಉಪ್ಪುಂದ ತಿಳಿಸಿದ್ದಾರೆ. ಅವರು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಜತೆ ಸಂಪರ್ಕದಲ್ಲಿದ್ದು, ಕರಾವಳಿಗರು ಸುರಕ್ಷಿತರಾಗಿರುವ ವಿಷಯ ಖಚಿತ ಪಡಿಸಿದ್ದಾರೆ. ಶಾಸಕರೂ ಇಸ್ರೇಲ್​ನಲ್ಲಿ ಸಿಲುಕಿರುವ ಕರಾವಳಿಗರೊಂದಿಗೆ ಸಂರ್ಕದಲ್ಲಿದ್ದಾರೆ.

    ಇದನ್ನೂ ಓದಿ: ಈ ‘ಹರೆಯ’ಕ್ಕಿಲ್ಲ ಜಾತಿ ಮಾನ್ಯತೆ; ಇಲ್ಲಿದೆ ಒಂದು ಅಪರೂಪದ ಜನಾಂಗ..

    ಕರಾವಳಿಗರು ಇರುವ ಜಾಗ ಸ್ವಲ್ಪ ಸುರಕ್ಷಿತವಾಗಿದ್ದು ಸೋಮವಾರ ಸೈರನ್ ಶಬ್ದ ಮಾಡಿದ್ದು ಬಿಟ್ಟರೆ ಸಾರ್ವಜನಿಕರಿಗೆ ಯಾವುದೇ ಸಂದೇಶ ರವಾನಿಸಿಲ್ಲ. ಹಾಗೇನಾದರೂ ಅಪಾಯದ ಸಂಧರ್ಭ ಬಂದರೆ ಈಗಿರುವ ಜಾಗ ಬಿಟ್ಟು ಸುರಕ್ಷಿತ ಸ್ಥಳಕ್ಕೆ ತೆರಳಿ ಎಂದು ಇಸ್ರೇಲ್ ಸರ್ಕಾರ ಸೂಚನೆ ಕೊಡುತ್ತದೆ. ಸದ್ಯ ಅಂಥ ಯಾವುದೇ ಮುನ್ಸೂಚನೆ ಸರ್ಕಾರ ಕೊಟ್ಟಿಲ್ಲ. ನಾವೆಲ್ಲ ಬಂಕರಲ್ಲಿ ಸುರಕ್ಷಿತವಾಗಿದ್ದೇವೆ. ಶನಿವಾರ ಒಮ್ಮೆ ರಾಕೆಟ್ ದಾಳಿ ಆಗಿದ್ದು ಹೊರತುಪಡಿಸಿದರೆ ಉಳಿದಂತೆ ಅಂಥ ಯಾವ ದುರ್ಘಟನೆ ಸಂಭವಿಸಿಲ್ಲ ಎಂದು ಕ್ಲಾರೆನ್ಸ್ ತಿಳಿಸಿದ್ದಾರೆ.

    ಇದನ್ನೂ ಓದಿ: ಖಿನ್ನತೆ ತಲೆಯ ಸಮಸ್ಯೆ, ಅದಾಗ್ಯೂ ಪರಿಹಾರ ಕಾಲುಗಳಲ್ಲಿದೆ!; ಅಧ್ಯಯನದಲ್ಲಿ ಬಹಿರಂಗ

    ಸಚಿವೆ ಶೋಭಾ ಕರಂದ್ಲಾಜೆ ಮತ್ತು ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಇಸ್ರೇಲ್ ದೇಶದಲ್ಲಿರುವ ಕರಾವಳಿಗರ ಕುರಿತಂತೆ ಮಾಹಿತಿ ನೀಡಿದ್ದು, ಅವರಿಬ್ಬರೂ ರಾಯಭಾರ ಕಚೇರಿಯವರ ಸಂಪರ್ಕದಲ್ಲಿ ಇದ್ದಾರೆ ಎಂದು ಶಾಸಕ ಗುರುರಾಜ್ ಗಂಟಿಹೊಳೆ ವಿಜಯವಾಣಿಗೆ ತಿಳಿಸಿದ್ದಾರೆ.

    ಮತ್ತೊಂದೆಡೆ ಇಸ್ರೇಲ್​ನಲ್ಲಿ ಸಿಲುಕಿರುವ ಕನ್ನಡಿಗರ ನೆರವಿಗೆಂದೇ ಕರ್ನಾಟಕ ಸರ್ಕಾರ ಸಹಾಯವಾಣಿ ಆರಂಭಿಸಿದೆ. ಇಸ್ರೇಲ್‌ನಲ್ಲಿರುವ ಕುಟುಂಬ ಸದಸ್ಯರು ನಿಮ್ಮ ಸಂಪರ್ಕಕ್ಕೆ ಸಿಗದಿದ್ದರೆ ಅಥವಾ ಯುದ್ಧದಿಂದಾಗಿ ಸಂಕಷ್ಟದಲ್ಲಿರುವ ನಿಮ್ಮವರಿಗೆ ತಕ್ಷಣದ ನೆರವಿನ ಅಗತ್ಯವಿದ್ದಲ್ಲಿ ಕೂಡಲೇ ಈ ಸಹಾಯವಾಣಿ (080 22340676, 080 22253707) ಸಂಖ್ಯೆಗಳಿಗೆ ಕರೆಮಾಡಿ, ಅಗತ್ಯ ನೆರವು ಪಡೆಯಬಹುದು ಎಂದು ಸಿಎಂ ತಿಳಿಸಿದ್ದಾರೆ.

    ‘ಇಂಡಿಯಾ’ಗೇ ಗುಡ್​​ಬೈ ಹೇಳಿ ‘ಡಿಜಿಟಲ್ ಯುದ್ಧ’ಕ್ಕಿಳಿದ ಇಸ್ರೇಲಿಗ!

    ಶಾಲಾ ಸಮಯ ಬದಲಾವಣೆ ಕುರಿತಂತೆ ಇಂದು ಮಹತ್ವದ ಬೆಳವಣಿಗೆ; ಇಂದೇನಾಯ್ತು? ನಾಳೆ ಏನಾಗಬಹುದು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts