More

    VIDEO| 100 ಅಡಿ ಆಳದ ತೆರೆದ ಬೋರ್‌ವೆಲ್‌ಗೆ ಬಿದ್ದ 3 ವರ್ಷದ ಮಗು, ಪೈಪ್​ ಮೂಲಕ ಆಮ್ಲಜನಕ ಪೂರೈಕೆ

    ನಳಂದ: ಮೂರು ವರ್ಷದ ಮಗುವೊಂದು 100 ಅಡಿ ಆಳದ ತೆರೆದ ಬೋರ್‌ವೆಲ್‌ಗೆ ಬಿದ್ದಿರುವ ಘಟನೆ ಬಿಹಾರದ ನಳಂದದ ಕುಲ್ ಗ್ರಾಮದಲ್ಲಿ ನಡೆದಿದೆ.

    ಇದನ್ನೂ ಓದಿ: ಕೆಲಸದ ಸಮಯದಲ್ಲಿ ಫೋನ್​ ಬಳಸಿದ ಯುವತಿ: ವಜಾ ಮಾಡಿ ಮನೆಗೆ ಕಳುಹಿಸಿದ ಮಾಲೀಕ

    ಮಗುವನ್ನು ಶಿವಂ ಕುಮಾರ್ ಎಂದು ಗುರುತಿಸಲಾಗಿದ್ದು, ಮಗುವಿನ ತಾಯಿ ಹೊಲದ ಕೆಲಸಕ್ಕೆ ಬಂದಿದ್ದ ವೇಳೆ ಮಗವಿನ ಜತೆಗೆ ಬಂದಿದ್ದಳು. ಈ ಸಮಯದಲ್ಲಿ ಮಗು ತೆರೆದ ಬೋರ್‌ವೆಲ್‌ಗೆ ಬಿದ್ದು ಈ ದುರಂತ ಘಟನೆ ಸಂಭವಿಸಿದೆ.

    ಸುದ್ದಿ ತಿಳಿದು ಸ್ಥಳಕ್ಕಾಗಿಮಿಸಿದ NDRF ಮತ್ತು ಇತರ ರಕ್ಷಣಾ ತಂಡಗಳು ಮಗುವನ್ನು ರಕ್ಷಿಸಲು ಮುಂದಾಗಿದ್ದು, 100 ಅಡಿ ಆಳ ತೆರೆದ ಬೋರ್‌ವೆಲ್‌ಗೆ ಬಿದ್ದು ಸುಮಾರು 40-50 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದನ್ನು ಪತ್ತೆ ಹಚ್ಚಿವೆ. ಮಗುವಿಗೆ ಪೈಪ್​ ಮೂಲಕ ಆಮ್ಲಜನಕ ಪೂರೈಕೆ ಮಾಡುತ್ತಿದ್ದು, ಮಗು ಇನ್ನೂ ಜೀವಂತವಾಗಿದ್ದು ಆತನ ಧ್ವನಿಯನ್ನು ಕೇಳುತ್ತಿದೆ. ರೈತನೊಬ್ಬರು ಬೋರ್‌ವೆಲ್ ಕೊರೆಸಿ ಅದನ್ನು ಮುಚ್ಚದೇ ಹಾಗೆಯೇ ಬಿಟ್ಟಿದ್ದರಿಂದ ಈ ದುರಂತ ಘಟನೆ ಸಂಭವಿಸಿದೆ ಎಂದು ಹೇಳಲಾಗಿದ್ದು, ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts