More

    ಗುಜರಾತ್​ನ ಕಚ್​ನಲ್ಲಿ 24 ಗಂಟೆಗಳಲ್ಲಿ 2ನೇ ಬಾರಿ ನಡುಗಿದ ಭೂಮಿ

    ಅಹಮದಾಬಾದ್​: ದಕ್ಷಿಣ ಗುಜರಾತ್​ನ ಕಚ್​ನಲ್ಲಿ 24 ಗಂಟೆಗಳಲ್ಲಿ 2ನೇ ಬಾರಿ ಭೂಮಿ ಕಂಪಿಸಿದೆ. ರಿಕ್ಟರ್​ ಮಾಪಕದಲ್ಲಿ 4.4ರ ತೀವ್ರೆ ದಾಖಲಾಗಿರುವುದಾಗಿ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್​ಸಿಎಸ್​) ತಿಳಿಸಿದೆ.

    ಮಧ್ಯಾಹ್ನ 12.27ರಲ್ಲಿ ಭೂಮಿ ಕಂಪಿಸಿತು. ರಾಜ್​ಕೋಟ್​ನಿಂದ ಈಶಾನ್ಯ ದಿಕ್ಕಿನಲ್ಲಿ 82 ಕಿ.ಮೀ. ದೂರದಲ್ಲಿ ಕಂಪನ ಕೇಂದ್ರೀಕೃತವಾಗಿತ್ತು ಎಂದು ಹೇಳಿದೆ.

    ಇದನ್ನೂ ಓದಿ: ಸುಶಾಂತ್​ ಆತ್ಮಹತ್ಯೆ ಮಾಡಿಕೊಂಡಿಲ್ಲ, ಆತನದ್ದು ಕೊಲೆ; ತನಿಖೆಯಾಗಬೇಕು ಎಂದ ಕುಟುಂಬ

    ಇದಕ್ಕೂ ಮುನ್ನ ಭಾನುವಾರ ರಾತ್ರಿ 8.13ರಲ್ಲಿ ಕಚ್​ ವಲಯದಲ್ಲಿ 5.5 ತೀವ್ರತೆಯ ಕಂಪನ ಸಂಭವಿಸಿತ್ತು. ಈ ಕಂಪನವು ರಾಜ್​ಕೋಟ್​ನಿಂದ 118 ಕಿ.ಮೀ. ದೂರದಲ್ಲಿ ವಾಯವ್ಯ ದಿಕ್ಕಿನಲ್ಲಿ ಕೇಂದ್ರೀಕೃತವಾಗಿತ್ತು.

    ಭಾನುವಾರ ಭೂಮಿ ಪ್ರಬಲವಾಗಿ ಕಂಪಿಸಿದರೂ ಯಾವುದೇ ಆಸ್ತಿಪಾಸ್ತಿಗಾಗಲಿ ಅಥವಾ ಪ್ರಾಣಹಾನಿಯಾಗಲಿ ಸಂಭವಿಸಿಲ್ಲ ಎಂದು ಸರ್ಕಾರ ಹೇಳಿದೆ.

    2001ರಲ್ಲಿ ಕಚ್​ ಮತ್ತು ಭುಜ್​ನಲ್ಲಿ 7.7 ತೀವ್ರತೆಯ ಕಂಪನ ಸಂಭವಿಸಿ, ಸಹಸ್ರಾರು ಜನರು ಮೃತಪಟ್ಟಿದ್ದರು. ಸಹಸ್ರಾರು ಕಟ್ಟಡಗಳು ನಾಶವಾಗಿದ್ದವು.

    ಮಯಾನ್​ ಕ್ಯಾಲೆಂಡರ್​ ಪ್ರಕಾರ ಜೂನ್​ 21ಕ್ಕೆ ಪ್ರಪಂಚವೇ ಕೊನೆಯಾಗುತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts