More

    ಲಡಾಖ್​ನಲ್ಲಿರುವ ಯೋಧರ ಕೈಗಳನ್ನು ಅಲಂಕರಿಸಲಿವೆ ವಿದ್ಯಾರ್ಥಿಗಳು ತಯಾರಿಸಿದ ರಾಖಿಗಳು

    ನವದೆಹಲಿ: ದೇಶದ ವಿವಿಧ ಪ್ರದೇಶಗಳ ವಿದ್ಯಾರ್ಥಿಗಳು ಕೈಯಾರೆ ತಯಾರಿಸಿದ 26,000 ರಾಖಿಗಳು ಈ ಸಲ ಲಡಾಖ್​ ಮತ್ತು ಇತರೆ ಗಡಿ ಪ್ರದೇಶಗಳಲ್ಲಿ ಇರುವ ಯೋಧರ ಕೈಗಳನ್ನು ಅಲಂಕರಿಸಲಿವೆ. ಈ ರಾಖಿಗಳನ್ನು ಸ್ಟೂಡೆಂಟ್ಸ್​ ಆ್ಯಂಡ್ ಯೂತ್ ಫಾರ್​ ತಿರುವಳ್ಳುವರ್(ಎಸ್​ವೈಟಿ)​ ಸಂಘಟನೆಯ ಅಧ್ಯಕ್ಷರೂ ಆಗಿರುವ ಮಾಜಿ ಸಂಸದ ತರುಣ್ ವಿಜಯ್ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಹಸ್ತಾಂತರಿಸಿದ್ದಾರೆ. ಅವರು ಅವುಗಳನ್ನು ಯೋಧರಿಗೆ ಕಳುಹಿಸಿಕೊಡಲಿದ್ದಾರೆ.

    ತಮಿಳುನಾಡಿನ ಕರೂರಿನಲ್ಲಿರುವ ಭರಣಿ ವಿದ್ಯಾಲಯದ ವಿದ್ಯಾರ್ಥಿಗಳು ಕೈಯಿಂದಲೇ ತಯಾರಿಸಿದ 13,000 ರಾಖಿಗಳು ಕೂಡ ಇದರಲ್ಲಿ ಸೇರಿವೆ. ತಮಿಳುನಾಡಿನಲ್ಲಿ ರಕ್ಷಾ ಬಂಧನದ ಪರಿಕಲ್ಪನೆ ಇಲ್ಲ. ಆದರೂ, ಸ್ಟೂಡೆಂಟ್ಸ್​ ಆ್ಯಂಡ್ ಯೂತ್ ಫಾರ್​ ತಿರುವಳ್ಳುವರ್​ ಸಂಘಟನೆಯ ಒಡನಾಟದಲ್ಲಿ ಇರುವ ಭರಣಿ ವಿದ್ಯಾಲಯದ ಪ್ರಾಂಶುಪಾಲ ರಾಮ್ ಸುಬ್ರಮಣ್ಯಂ ಅವರು ಮುತುವರ್ಜಿಯಲ್ಲಿ ವಿದ್ಯಾರ್ಥಿಗಳು ರಾಖಿ ತಯಾರಿಸಿದ್ದಾರೆ. ಇನ್ನೊಂದಷ್ಟು ರಾಖಿಗಳನ್ನು ಸೇವಾ ಭಾರತಿಯ ಅಧೀನ ಇರುವ ಡೆಹ್ರಾಡೂನ್​ನ ಆರ್ಯನ್ ಶಾಲೆಯ ವಿದ್ಯಾರ್ಥಿಗಳು ತಯಾರಿಸಿದ್ದಾರೆ. ಯೂತ್ ಫಾರ್ ಭಾರತ್ ಸಂಘಟನೆಯ ವೃಂದಾ ನೇತೃತ್ವದಲ್ಲಿ ವಿವಿಧ ಸೇವಾ ಬಸ್ತಿ ಮತ್ತು ಕೊಳಚೆ ಪ್ರದೇಶದ ಬಾಲಕಿಯರು ಒಂದಷ್ಟು ರಾಖಿಗಳನ್ನು ತಯಾರಿಸಿಕೊಟ್ಟಿದ್ದಾರೆ.

    ಇದನ್ನೂ ಓದಿ: ತ್ರಿಪುರಾದಲ್ಲಿ ಮರುಸಂಘಟನೆಗೆ ಬಂಡುಕೋರರ ಪ್ರಯತ್ನ: ಮಾಣಿಕ್ ಸರ್ಕಾರ್ ಹೊಸ ರಾಜಕೀಯ ವರಸೆ

    ಯೋಧರು ಮತ್ತು ಅವರ ಕೆಲಸ ಕಾರ್ಯಗಳ ಬಗ್ಗೆ ಜಾಗೃತಿ ಮೂಡಿಸುವುದು, ಯುವಜನರಲ್ಲಿ ಅವರ ಬಗ್ಗೆ ಪ್ರೀತಿ ಮತ್ತು ಗೌರವ ಭಾವನೆ ಮೂಡಿಸುವುದು ಈ ಅಭಿಯಾನದ ಉದ್ದೇಶ. ಕಳೆದ ನಾಲ್ಕು ವರ್ಷಗಳಿಂದ ಎಸ್​ವೈಟಿ ಇಂತಹ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು ಎಂದು ಎಸ್​ವೈಟಿ ಅಧ್ಯಕ್ಷ ತರುಣ್ ವಿಜಯ್ ಹೇಳಿದ್ದಾರೆ.

    ಇದನ್ನೂ ಓದಿ: ಶಿಶುಗಳಿಗೇಕೆ ಸ್ತನ್ಯಪಾನಮಾಡಿಸಬೇಕು- ಅದರ ಮಹತ್ವ ಏನು?

    ರಾಖಿಗಳನ್ನು ಸ್ವೀಕರಿಸಿದ ರಕ್ಷಣಾ ಸಚಿವ ರಾಜನಾಥ್​ ಸಿಂಗ್, ರಾಖಿಗಳೆಂದರೆ ಬರಿಯ ದಾರವಲ್ಲ. ಅದರಲ್ಲಿ ಯೋಧರಿಗೆ ಸೋದರಿಯರ ಹಾರೈಕೆ, ಆಶೀರ್ವಾದಗಳಿವೆ. ಗಡಿ ಭಾಗದಲ್ಲಿ ಕಷ್ಟಮಯ ಸನ್ನಿವೇಶಗಳಲ್ಲಿ ಹೋರಾಡುತ್ತಿರುವ ಯೋಧರಿಗೆ ಈ ರಾಖಿಗಳೇ ಶ್ರೀರಕ್ಷೆ ಎಂದು ಹೇಳಿದರು.
    ರಕ್ಷಣಾ ಸಚಿವರಿಗೆ ಸಾಂಕೇತಿಕವಾಗಿ ರಾಖಿಗಳನ್ನು ಹಸ್ತಾಂತರಿಸುವ ಸಂದರ್ಭದಲ್ಲಿ ಸೇವಾ ಭಾರತಿಯ ಸೋದರಿ ವೃಂದಾ ಅವರೂ ಜತೆಗಿದ್ದರು. ಹಲವು ರಾಖಿಗಳಲ್ಲಿ ಯೋಧರು ವಿಜಯ ಸಂಕೇತ ತೋರಿಸುತ್ತಿರುವ ಚಿತ್ರದ ಜತೆಗೆ ತಿರುಕ್ಕುರಲ್​ನ ಕುರಲ್​ಗಳಿವೆ. (ಏಜೆನ್ಸೀಸ್​)

    ರಾಷ್ಟ್ರೀಯ ಶಿಕ್ಷಣ ನೀತಿಯ ತಿರಳು ಎಲ್​ಆರ್​ಐ : ಪ್ರಧಾನಿ ನರೇಂದ್ರ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts