More

    ಕಿಸಾನ್ ಸಮ್ಮಾನ್ ನಿಧಿ ದುರ್ಬಳಕೆ – 245 ನಕಲಿ ರೈತರಿಂದ 54.48 ಲಕ್ಷ ರೂಪಾಯಿ ಹಿಂಪಡೆಯಲು ಕ್ರಮ

    ಪಟಣಾ(ಬಿಹಾರ): ಪ್ರಧಾನ ಮಂತ್ರಿಯವರ ಕಿಸಾನ್ ಸಮ್ಮಾನ್ ನಿಧಿ ದುರ್ಬಳಕೆ ಹಿನ್ನೆಲೆಯಲ್ಲಿ 245 ನಕಲಿ ರೈತರಿಂದ 54.48 ಲಕ್ಷ ರೂಪಾಯಿ ಹಿಂದಿರುಗಿಸುವ ಬಗ್ಗೆ ಮಾಹಿತಿ ಪಡೆಯಲಾಗಿದೆ.

    ಇದನ್ನೂ ಓದಿ: ನೀವು ಮೊಬೈಲ್​ ಬಳಸುತ್ತೀರಾ? ಇಂದಿನಿಂದ ಬದಲಾಗಿದೆ ಸಿಮ್ ಕಾರ್ಡ್ ನಿಯಮ – ತಪ್ಪೆಸಗಿದರೆ ಜೈಲೇ ಗತಿ…ಮಾಹಿತಿ ಇಲ್ಲಿದೆ ನೋಡಿ…  
    ಬಗಹಾ ದೋ ಬ್ಲಾಕ್‌ನ 245 ನಕಲಿ ರೈತರು ಯೋಜನೆಗೆ ಅನರ್ಹರಾಗಿದ್ದರೂ ಕಿಸಾನ್ ಸಮ್ಮಾನ್ ನಿಧಿ ಲಾಭ ಪಡೆದುಕೊಂಡಿದ್ದಾರೆ. ಇದು ಬೆಳಕಿಗೆ ಬರುತ್ತಿದ್ದಂತೆ ಬಿಎಒ ರಾಜಕುಮಾರ್, ಪಂಚಾಯಿತಿವಾರು ಪಟ್ಟಿ ನೀಡಿದ್ದು, ವಿಳಂಬ ಮಾಡದೆ ಹಣ ವಾಪಸ್ ನೀಡಲು ಸೂಚಿಸಿದ್ದಾರೆ. ಮರುಪಾವತಿ ಮಾಡದವರಿಂದ ವಸೂಲಿ ಮಾಡಲು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
    ನಗರಸಭೆ ವ್ಯಾಪ್ತಿಯವರು!: ಬಿಎಒ ರಾಜಕುಮಾರ್ ಮಾತನಾಡಿ, ಈ ಪಟ್ಟಿಯಲ್ಲಿರುವವರು ಹೆಚ್ಚಿನ ಸಂಖ್ಯೆಯಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ, ಕೃಷಿ ಭೂಮಿ ಹೊಂದದವರಾಗಿದ್ದಾರೆ. ಇವರ ಸಂಖ್ಯೆ 86. ವಾಲ್ಮೀಕಿ ನಗರ ಪಂಚಾಯತ್‌ನಿಂದ 19 ಮಂದಿ, ಸಂತಪುರ ಸೊಹರಿಯಾ ಮತ್ತು ಲಕ್ಷ್ಮೀಪುರ ರಾಮಪುರದಿಂದ ತಲಾ 15, ಚಂಪಾಪುರ ಗೋನೌಲಿ ಮತ್ತು ನರ್ವಾಲ್ ಬರ್ವಾಲ್ ಬ್ಲಾಕ್‌ನಿಂದ ತಲಾ 11 ಮಂದಿ ಸೇರಿದಂತೆ ಇತರೆ ಬ್ಲಾಕ್‌ಗಳ ಎರಡರಿಂದ ಒಂಬತ್ತು ನಕಲಿ ರೈತರು ಇದ್ದಾರೆ ಎಂದು ತಿಳಿಸಿದ್ದಾರೆ.

    10ಕ್ಕಿಂತ ಹೆಚ್ಚು ಪಂಚಾಯಿತಿಗಳಲ್ಲಿ ವಾಲ್ಮೀಕಿನಗರದವರು 2 ಲಕ್ಷ 12 ಸಾವಿರ ರೂ,, ನರ್ವಾಲ್ ಬರ್ವಾಲ್ 1 ಲಕ್ಷ 64 ಸಾವಿರ ರೂ., ಲಕ್ಷ್ಮೀಪುರ ರಾಮಪುರ 2 ಲಕ್ಷ 36 ಸಾವಿರ ರೂ., ಚಂಪಾಪುರ ಗೋನೌಲಿ 1 ಲಕ್ಷ 24 ಸಾವಿರ ರೂ. ರೈತರ ಹೆಸರಲ್ಲಿ ಅಕ್ರಮವಾಗಿ ಪಡೆದುಕೊಂಡಿದ್ದಾರೆ ಎಂದು ಅವರು ತಿಳಿಸಿದರು.

    ಈ ಮೊತ್ತವನ್ನು ಕೂಡಲೇ ಹಿಂತಿರುಗಿಸಬೇಕು. ಗುರುತಿಸಲಾದ ನಕಲಿ ರೈತರನ್ನು ಸಂಪರ್ಕಿಸಿ ಕೂಡಲೇ ಮೊತ್ತವನ್ನು ಹಿಂದಿರುಗಿಸುವಂತೆ ಕೃಷಿ ಸಂಯೋಜಕರು ಹಾಗೂ ರೈತ ಸಲಹೆಗಾರರಿಗೆ ಸೂಚನೆ ನೀಡಲಾಗಿದೆ ಎಂದು ಅವರು ವಿವರಿಸಿದ್ದಾರೆ.

    ನಿತ್ಯಾನಂದನ ‘ಕೈಲಾಸ’ದೊಂದಿಗೆ ಒಪ್ಪಂದ – ಅಧಿಕಾರಿ ವಜಾ – ಯಡವಟ್ಟಿಗೆ ವಿಷಾದ ವ್ಯಕ್ತಪಡಿಸಿದ ಪೆರಗ್ವೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts