More

    ಬಾಂಗ್ಲಾದಲ್ಲಿ 2ರೈಲುಗಳ ನಡುವೆ ಡಿಕ್ಕಿ: 15 ಸಾವು,100ಕ್ಕೂ ಹೆಚ್ಚು ಮಂದಿ ಗಾಯ

    ಢಾಕಾ: ಬಾಂಗ್ಲಾದೇಶದಲ್ಲಿ ಸೋಮವಾರ ಎರಡು ರೈಲುಗಳು ಡಿಕ್ಕಿ ಹೊಡೆದು ಕನಿಷ್ಠ 15 ಜನರು ಮೃತಪಟ್ಟಿದ್ದು, 100 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಇದನ್ನೂ ಓದಿ: ಬೆಂಗಳೂರಿನಲ್ಲಿ ಖಾಸಗಿ ವಾಹನಗಳ ಬಳಕೆ ಹೆಚ್ಚಳ; 1 ಕೋಟಿ ಖಾಸಗಿ ವಾಹನಗಳು ಗಡಿ ದಾಟುವ ನಿರೀಕ್ಷೆ!
    ರಾಜಧಾನಿ ಢಾಕಾದಿಂದ ಈಶಾನ್ಯಕ್ಕೆ 60 ಕಿಲೋಮೀಟರ್ ದೂರದಲ್ಲಿರುವ ಭೈರಬ್‌ ನಗರ ಸಮೀಪ ಅಪಘಾತ ಸಂಭವಿಸಿದೆ. ಸರಕು ಸಾಗಣೆ ರೈಲು, ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿದ್ದ ಪ್ಯಾಸೆಂಜರ್ ರೈಲಿಗೆ ಡಿಕ್ಕಿ ಹೊಡೆದು ಪ್ಯಾಸೆಂಜರ್ ಗಾಡಿಯು ಹಳಿತಪ್ಪುವಂತೆ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    “ನಾವು 15 ಶವಗಳನ್ನು ವಶಪಡಿಸಿಕೊಂಡಿದ್ದೇವೆ, ಹಲವರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಬೋಗಿಗಳಡಿ ಇನ್ನೂ ಮೃತದೇಹಗಳು ಪತ್ತೆಯಾಗುತ್ತಲೇ ಇವೆ. ಇವುಗಳನ್ನು ಹೊರತೆಗೆಯಲಾಗುತ್ತದೆ ಎಂದು ಎಂದು ಭೈರಬ್‌ನ ಆಡಳಿತಾಧಿಕಾರಿ ಸಾದಿಕುರ್ ರೆಹಮಾನ್ ತಿಳಿಸಿದರು,
    ಸಂಜೆ 4 ಗಂಟೆಗೆ ಅಪಘಾತ ಸಂಭವಿಸಿದ ಈ ಅಪಘಾತವು ಒಂದು ರೈಲು ಇನ್ನೊಂದು ಮಾರ್ಗವನ್ನು ಪ್ರವೇಶಿಸಿದಾಗ ಸಂಭವಿಸಿದೆ ಎಂದು ರೆಹಮಾನ್ ಹೇಳಿದರು.

    ರೈಲು ಅಪಘಾತಗಳು ಬಾಂಗ್ಲಾದೇಶದಲ್ಲಿ ಸಾಮಾನ್ಯವಾಗಿದೆ. ಸಾಮಾನ್ಯವಾಗಿ ಕಳಪೆ ಸಿಗ್ನಲಿಂಗ್, ನಿರ್ಲಕ್ಷ್ಯ, ಹಳೆಯ ಟ್ರ್ಯಾಕ್‌ಗಳು ಅಥವಾ ಇತರ ಕಡಿಮೆ ಮೂಲಸೌಕರ್ಯಗಳಿಂದ ಉಂಟಾಗುತ್ತವೆ.

    ಗಾಜಾ ಮೇಲೆ ದಾಳಿ ತೀವ್ರಗೊಳಿಸಿದ ಇಸ್ರೇಲ್​: ಹಮಾಸ್‌ ಹಿರಿಯ ಕಮಾಂಡರ್ ಮುಹಮ್ಮದ್ ಕಟಮಾಶ್, 70 ಪ್ಯಾಲೆಸ್ತೇನಿಯನ್ನರು ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts