More

    ಗಾಜಾ ಮೇಲೆ ದಾಳಿ ತೀವ್ರಗೊಳಿಸಿದ ಇಸ್ರೇಲ್​: ಹಮಾಸ್‌ ಹಿರಿಯ ಕಮಾಂಡರ್ ಮುಹಮ್ಮದ್ ಕಟಮಾಶ್, 70 ಪ್ಯಾಲೆಸ್ತೇನಿಯನ್ನರು ಸಾವು

    ಟೆಲ್ ಅವೀವ್(ಇಸ್ರೇಲ್​): ಇಸ್ರೇಲ್ ಮತ್ತು ಹಮಾಸ್ ಉಗ್ರಗಾಮಿ ಗುಂಪಿನ ನಡುವೆ ನಡೆಯುತ್ತಿರುವ ಸಂಘರ್ಷ 17 ನೇ ದಿನಕ್ಕೆ ಕಾಲಿಟ್ಟಿದ್ದು, ಗಾಜಾದ ಮೇಲೆ ಇಸ್ರೇಲ್ ಸೇನೆ ದಾಳಿ ತೀವ್ರಗೊಳಿಸಿದೆ. ಈ ನಡುವೆ ಹಿಂಸಾಚಾರ ನಿಯಂತ್ರಣ ತಪ್ಪಿದೆ ಎಂದು ಇಸ್ರೇಲ್​ ವಿರುದ್ಧ ಇರಾನ್ ಕಿಡಿಕಾರಿದೆ.

    ಇದನ್ನೂ ಓದಿ: ಅವಘಡವೊಂದು ನಡೆದು ಹೋಯ್ತು ಎಂದಿತು ಇಸ್ರೇಲ್ ಸೇನೆ: ಆಗಿದ್ದಾದರೂ ಏನು?
    ಭಾನುವಾರ ರಾತ್ರಿ ಬಾಂಬ್ ದಾಳಿಯಲ್ಲಿ ಕನಿಷ್ಠ 70 ಪ್ಯಾಲೆಸ್ತೇನಿಯನ್ನರು ಮೃತಪಟ್ಟಿದ್ದಾರೆ. ಇಸ್ರೇಲ್​ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ತಡರಾತ್ರಿ ಸಚಿವ ಸಂಪುಟ ಸಭೆ ನಡೆಸಿದ್ದು, ಹಿರಿಯ ಅಧಿಕಾರಿಗಳು ಸಹ ಭಾಗವಹಿಸಿದ್ದು, ಗಾಜಾವನ್ನು ವಶಕ್ಕೆ ತೆಗೆದುಕೊಳ್ಳಬೇಕಿರುವ ತ್ವರಿತ ಕ್ರಮಗಳ ಕುರಿತು ಚರ್ಚಿಸಿದ್ದಾರೆ. ಇಸ್ರೇಲಿ ಪಡೆಗಳು ಗಾಜಾದ ಗಡಿಯಲ್ಲಿ ಕಟ್ಟೆಚ್ಚರದಿಂದ ಇರಬೇಕು ಎಂದು ಸೂಚನೆ ನೀಡಲಾಗಿದೆ. ಕಳೆದ 24 ಗಂಟೆಗಳಲ್ಲಿ ಸುಮಾರು 320 ಮಿಸೈಲ್​ ದಾಳಿಗಳನ್ನು ಮಾಡಲಾಗಿದೆ ಎಂದು ಸೇನಾ ಮೂಲಗಳು ಹೇಳಿವೆ.

    ಇನ್ನು ಲೆಬನಾನ್‌ನೊಂದಿಗಿನ ಇಸ್ರೇಲ್‌ನ ಉತ್ತರದ ಗಡಿಯಲ್ಲಿ ಎರಡೂ ಕಡೆಯಿಂದ ಹೊಸದಾಗಿ ಗುಂಡಿನ ದಾಳಿ ನಡೆದಿದೆ. ಹಮಾಸ್‌ನ ಮಿತ್ರರಾಷ್ಟ್ರ ಇರಾನ್ ಮತ್ತು ಹಿಜ್ಬುಲ್ಲಾ ಸಂಘಟನೆ ಇಸ್ರೇಲ್​ ಮೇಲೆ ಮುಗಿಬೀಳಬಹುದು ಎಂದು ಹೇಳಲಾಗುತ್ತಿದೆ. ಇಸ್ರೇಲಿ ಸೇನಾ ವಕ್ತಾರ ಜೊನಾಥನ್ ಕಾನ್ರಿಕಸ್ ಅವರು, ಹಿಜ್ಬುಲ್ಲಾ ಅತ್ಯಂತ ಅಪಾಯಕಾರಿ ಆಟ ಆಡುತ್ತಿದೆ. ಅವರು ಪರಿಸ್ಥಿತಿಯನ್ನು ಮತ್ತಷ್ಟು ಉದ್ವಿಗ್ನಗೊಳಿಸುತ್ತಿದ್ದಾರೆ. ನಾವು ಪ್ರತಿದಿನ ಹೆಚ್ಚು ಹೆಚ್ಚು ದಾಳಿಗಳನ್ನು ಕಾಣಬೇಕಾಗಿದೆ ಎಂದು ಅವರು ಹೇಳಿದರು.

    ಯುಎಸ್ ಮತ್ತು ಇಸ್ರೇಲ್ “ಗಾಜಾದಲ್ಲಿ ನರಮೇಧವನ್ನು ತಕ್ಷಣವೇ ನಿಲ್ಲಿಸದಿದ್ದರೆ ಈ ಪ್ರದೇಶದಲ್ಲಿ ಹಿಂಸಾಚಾರ ನಿಯಂತ್ರಣ ತಪ್ಪುತ್ತದೆ ಎಂದು ಇರಾನ್‌ನ ಉನ್ನತ ರಾಜತಾಂತ್ರಿಕ ಹೊಸೈನ್ ಅಮೀರ್ ಅಬ್ದೊಲ್ಲಾಹಿಯಾನ್ ಎಚ್ಚರಿಸಿದ್ದಾರೆ.

    ಇನ್ನು ಪೆಂಟಗನ್ ಈ ಪ್ರದೇಶದಲ್ಲಿ ಮಿಲಿಟರಿ ಸನ್ನದ್ಧತೆಯನ್ನು ಹೆಚ್ಚಿಸಲು ಹಿಂಜರಿಯುವುದಿಲ್ಲ ಈ ಕ್ಷಣದ ಲಾಭವನ್ನು ಯಾರೂ ಪಡೆಯಬಾರದು ಎಂದು ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಎಚ್ಚರಿಸಿದ್ದಾರೆ.

    ಹಮಾಸ್‌ನ ಹಿರಿಯ ಕಮಾಂಡರ್ ಮುಹಮ್ಮದ್ ಕಟಮಾಶ್ ಭಾನುವಾರ ಸಂಜೆ ಇಸ್ರೇಲಿ ವಾಯುದಾಳಿಯಲ್ಲಿ ಹತನಾಗಿದ್ದಾನೆ. ಇಸ್ರೇಲ್ ವಿರುದ್ಧ ದಾಳಿಗಳನ್ನು ಕಾರ್ಯಗತಗೊಳಿಸುವಲ್ಲಿ ಕಟಮಾಶ್ ಮಹತ್ವದ ಪಾತ್ರ ವಹಿಸಿದ್ದ ಎನ್ನಲಾಗಿದೆ. ಈ ನಡುವೆ ಯುಎಸ್​, ಯುಕೆ, ಫ್ರಾನ್ಸ್, ಕೆನಡಾ ಮತ್ತು ಇಟಲಿಗಳು ಇಸ್ರೇಲ್‌ಗೆ ತಮ್ಮ ಬೆಂಬಲ ಮತ್ತು ಆ ದೇಶ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕು ಇದೆ ಎಂದು ಪುನರುಚ್ಚರಿಸಿದವು

    ಗಾಜಾ-ಲೆಬನಾನ್ ಮೇಲೆ ವೈಮಾನಿಕ ದಾಳಿ ನಡೆಸಿದ ಇಸ್ರೇಲ್; ಉನ್ನತ ಮಟ್ಟದ ಸಭೆ ಕರೆದ ನೆತನ್ಯಾಹು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts