More

    ತಮಿಳುನಾಡು: ಜೂನಿಯರ್​ ವಿದ್ಯಾರ್ಥಿಗೆ ಮೂತ್ರ ಮಿಶ್ರಿತ ಜ್ಯೂಸ್​ ಕುಡಿಸಿದ ಸೀನಿಯರ್ಸ್​

    ಚೆನ್ನೈ: ತಮಿಳುನಾಡಿನಲ್ಲಿ ಮತ್ತೆ ರ‍್ಯಾಗಿಂಗ್ ವಿಷಯ ಮುನ್ನೆಲೆಗೆ ಬಂದಿದೆ. ಇಬ್ಬರು ವಿದ್ಯಾರ್ಥಿಗಳು ತಮ್ಮ ಸಹಪಾಠಿಗೆ ಜ್ಯೂಸ್​ನಲ್ಲಿ ಮೂತ್ರ ಬೆರೆಸಿ ಕುಡಿಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

    ಇದನ್ನೂ ಓದಿ:ಆರು ಸಹೋದ್ಯೋಗಿಗಳ ಮೇಲೆ ಗುಂಡಿನ ದಾಳಿ ನಡೆಸಿ ಆತ್ಮಹತ್ಯೆ ಮಾಡಿಕೊಂಡ ಯೋಧ

    ತಿರುಚಿರಾಪಳ್ಳಿಯಲ್ಲಿರುವ ತಮಿಳುನಾಡು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯದ ಅಂತಿಮ ವರ್ಷದ ಇಬ್ಬರು ವಿದ್ಯಾರ್ಥಿಗಳು ತಮ್ಮ ಸಹಪಾಠಿಗೆ ಮೂತ್ರದಲ್ಲಿ ಜ್ಯೂಸ್ ಬೆರೆಸಿ, ಕುಡಿಸಿದ ಆರೋಪದ ಎದುರಿಸುತ್ತಿದ್ದು. ಇವರನ್ನು ವಿವಿ ಒಂದು ವರ್ಷ ಅಮಾನತುಗೊಳಿಸಿದೆ.

    ತಮಿಳುನಾಡು: ಜೂನಿಯರ್​ ವಿದ್ಯಾರ್ಥಿಗೆ ಮೂತ್ರ ಮಿಶ್ರಿತ ಜ್ಯೂಸ್​ ಕುಡಿಸಿದ ಸೀನಿಯರ್ಸ್​

    ನೊಂದ ವಿದ್ಯಾರ್ಥಿ ನೀಡಿದ ದೂರಿನ ಪ್ರಕಾರ, ಜನವರಿ 6 ರಂದು ಸಹಪಾಠಿಗಳು ನೀಡಿದ ಜ್ಯೂಸ್ ಸೇವಿಸಿದ ಘಟನೆ ನಡೆದಿದೆ. ಮರುದಿನ ತರಗತಿಯೊಳಗೆ ಸಹಪಾಠಿಗಳು ಗೇಲಿ ಮಾಡಲು ಆರಂಭಿಸಿದ್ದರಿಂದ ಮೂತ್ರದಲ್ಲಿ ಜ್ಯೂಸ್ ಬೆರೆಸಿರುವುದು ತಿಳಿಯಿತು. ನಂತರ ಉಪಕುಲಪತಿ ವಿ ನಾಗರಾಜ್ ಅವರಿಗೆ ದೂರು ಸಲ್ಲಿಸಿದ್ದಾನೆ.

    ವಿಶ್ವವಿದ್ಯಾನಿಲಯವು ಮೂವರು ಪ್ರಾಧ್ಯಾಪಕರನ್ನು ಒಳಗೊಂಡ ಸಮಿತಿಯನ್ನು ರಚಿಸಿತು. ಸಮಿತಿಯು ಜನವರಿ 18ರಂದು ತನ್ನ ವರದಿಯನ್ನು ಸಲ್ಲಿಸಿತ್ತು. ವರದಿಯ ಆಧಾರದ ಮೇಲೆ, ಪ್ರಸಕ್ತ ವರ್ಷ 10ನೇ ಸೆಮಿಸ್ಟರ್ ಪರೀಕ್ಷೆಗೆ ಹಾಜರಾಗದಂತೆ ಇಬ್ಬರು ವಿದ್ಯಾರ್ಥಿಗಳನ್ನು ಒಂದು ವರ್ಷದವರೆಗೆ ಅಮಾನತುಗೊಳಿಸಲಾಗಿದೆ.ಈ ಕುರಿತು ಕಾನೂನು ಕ್ರಮ ಕೈಗೊಳ್ಳುವಂತೆ ರಾಮ್‌ಜಿ ನಗರ ಪೊಲೀಸರಿಗೆ ದೂರು ನೀಡಲಾಗಿದೆ.

    ಸಭೆಯಲ್ಲಿ ಎರಡು ನಿರ್ಣಯಗಳನ್ನು ಅಂಗೀಕರಿಸಲಾಗಿದೆ ಎಂದು ವಿಶ್ವವಿದ್ಯಾಲಯದ ಕುಲಸಚಿವ ಬಾಲಕೃಷ್ಣನ್ ತಿಳಿಸಿದ್ದಾರೆ. ನಿರ್ಣಯಗಳ ಪ್ರಕಾರ, ನಾವು ಜನವರಿ 18 ರಂದು ಪೊಲೀಸರಿಗೆ ದೂರು ನೀಡಿದ್ದೇವೆ ಮತ್ತು ಜನವರಿ 2025 ರವರೆಗೆ ವಿದ್ಯಾರ್ಥಿಗಳನ್ನು ವಜಾಗೊಳಿಸಿದ್ದೇವೆ. ಜನವರಿ 30 ರಂದು ಕಾರ್ಯಕಾರಿ ಸಮಿತಿ ಸಭೆ ಕರೆದಿದ್ದು, ಈ ವಿಷಯದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಕುಲಸಚಿವರು ಹೇಳಿದ್ದಾರೆ.

    ಕ್ಯಾಂಪಸ್ ದೃಷ್ಟಿಕೋನ ಮತ್ತು ಕಾಲೇಜು ಸಂಪ್ರದಾಯ ವೇಷದಲ್ಲಿ ಹೊಸ ವಿದ್ಯಾರ್ಥಿಗಳಿಗೆ ಚಿತ್ರಹಿಂಸೆ ನೀಡುವುದನ್ನು ರ‍್ಯಾಗಿಂಗ್ ಎಂದು ಕರೆಯಲಾಗುತ್ತದೆ. ಇದು ವಿಪರೀತ ಕಿರುಕುಳ ನೀಡುವುದರ ಜೊತೆಗೆ ಮನಸ್ಸಿನಲ್ಲಿ ಭಯವನ್ನು ಸಹ ಉಂಟುಮಾಡುತ್ತದೆ. ಇದರಿಂದ ಹೊಸ ವಿದ್ಯಾರ್ಥಿಗಳ ಶಿಕ್ಷಣದ ಮೇಲೆಯೂ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಈ ಬಗ್ಗೆ ಯುಜಿಸಿಯ ಅನುದಾನ ಆಯೋಗವು ನೋಟಿಸ್ ಜಾರಿ ಮಾಡಿದ್ದು, ರ‍್ಯಾಗಿಂಗ್ ಒಂದು ಕ್ರಿಮಿನಲ್ ಅಪರಾಧ, ರ‍್ಯಾಗಿಂಗ್ ಹಾವಳಿ ತಡೆಯಲು ನಿಯಮಾವಳಿಗಳನ್ನು ರೂಪಿಸಲಾಗಿದೆ ಎಂದು ಮತ್ತೆ ಹೇಳಿದೆ.

    ಲಂಗ-ದಾವಣಿಯಲ್ಲಿ ಮಿಂಚಿದ ಪೂಜಾ ಹೆಗ್ಡೆ: ವಾವ್ ಎಂದ ಅಭಿಮಾನಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts