More

    ಕಾಶ್ಮೀರ ಭಾರತದ ಭಾಗ ಎಂದು ತೋರಿಸಿದರು, ಕೆಲಸ ಕಳೆದುಕೊಂಡರು!

    ಇಸ್ಲಾಮಾಬಾದ್​: ಪಾಕಿಸ್ತಾನದ ರಾಷ್ಟ್ರೀಯ ಸುದ್ದಿವಾಹಿನಿ ಪಿಟಿವಿ ನ್ಯೂಸ್​ನಲ್ಲಿ ಸುದ್ದಿ ಪ್ರಸಾರ ಮಾಡುವ ವೇಳೆ ಕಾಶ್ಮೀರ ಭಾರತದ್ದು ಎಂಬ ತಪ್ಪಾದ ನಕ್ಷೆ ತೋರಿಸಿದ ಆರೋಪದಲ್ಲಿ ಇಬ್ಬರು ಪತ್ರಕರ್ತರಿಗೆ ಗೇಟ್​ಪಾಸ್​ ನೀಡಲಾಗಿದೆ.

    ಜೂನ್​ 6ರಂದು ಪಿಟಿವಿಯಲ್ಲಿ ಕಾಶ್ಮೀರಕ್ಕೆ ಸಂಬಂಧಿಸಿದ ಸುದ್ದಿ ಪ್ರಸಾರ ಮಾಡುವಾಗ ಪಾಕ್​ ಆಕ್ರಮಿತ ಕಾಶ್ಮೀರ ಕೂಡ ಭಾರತದ ಭಾಗ ಎಂಬರ್ಥದ ನಕ್ಷೆಯನ್ನು ತೋರಿಸಲಾಗಿತ್ತು. ತಪ್ಪಾದ ನಕ್ಷೆ ತೋರಿ ತಮ್ಮ ದೇಶದ ಜನತೆಯನ್ನು ತಪ್ಪುದಾರಿಗೆ ಎಳೆದ ಆರೋಪದಲ್ಲಿ ಇವರಿಬ್ಬರನ್ನೂ ತಕ್ಷಣದಿಂದಲೇ ಕೆಲಸದಿಂದ ತೆಗೆದುಹಾಕಲಾಗಿದೆ.

    ಇದನ್ನೂ ಓದಿ: ನಾವಲ್​ ಕರೊನಾ ವೈರಾಣುವಿನ ಪ್ರತಿರೋಧಕ ಅಣು ಪತ್ತೆ

    ಜೂನ್​ 8ರಂದು ನಡೆದ ಪಾಕಿಸ್ತಾನದ ಸಂಸತ್​ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪವಾಗಿದ್ದು, ಈ ಘಟನೆಯ ಕುರಿತು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕೆಳಮನೆಯ ಅಧ್ಯಕ್ಷ ಸಾದಿಕ್​ ಸಂಜ್ರಾಣಿ ವಾರ್ತಾ ಮತ್ತು ಪ್ರಚಾರ ಇಲಾಖೆಯ ಸ್ಥಾಯಿ ಸಮಿತಿಗೆ ಸೂಚಿಸಿದ್ದಾರೆ.

    ಪಿಟಿವಿಯ ಮುಖ್ಯಸ್ಥರು ಕೂಡ ಜೂನ್​ 7ರಂದು ಸಾಮಾಜಿಕ ಜಾಲತಾಣ ಟ್ವಿಟರ್​ನಲ್ಲಿ ಹೇಳಿಕೆ ನೀಡಿ ಘಟನೆಯ ಕುರಿತು ತನಿಖೆ ನಡೆಸುತ್ತಿರುವುದಾಗಿಯೂ, ಇಂಥ ಅಚಾತುರ್ಯಕ್ಕೆ ಕಾರಣೀಭೂತರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿಯೂ ಹೇಳಿದ್ದರು.
    ತಪ್ಪು ಮಾಹಿತಿ ನೀಡುವ ಮೂಲಕ ವೃತ್ತಿಯ ಪಾವಿತ್ರ್ಯಕ್ಕೆ ಧಕ್ಕೆಯನ್ನುಂಟು ಮಾಡಿದ ಕಾರಣಕ್ಕಾಗಿ ಸದ್ಯ ಇಬ್ಬರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಇನ್ನುಳಿದಂತೆ ತನಿಖೆ ಮುಂದುವರಿದಿದ್ದು, ಇನ್ನೂ ಹೆಚ್ಚಿನವರು ಈ ಅಚಾತುರ್ಯದ ಭಾಗವಾಗಿದ್ದರೆ, ಅವರ ವಿರುದ್ಧವೂ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು.

    VIDEO| ಮದುವೆ ಬೆನ್ನಲ್ಲೇ ಮಯೂರಿ ಮೊದಲ ಪ್ರತಿಕ್ರಿಯೆ: ಅಭಿಮಾನಿಗಳಿಗೆ ಸಿಹಿ ಸುದ್ದಿ​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts