More

    ಪಾಕಿಸ್ತಾನದಲ್ಲಿ ಡಜನ್​ ಮೊಟ್ಟೆಗೆ ನೀಡುವ ಹಣದಲ್ಲಿ ಭಾರತದಲ್ಲಿ 2 ಕೋಳಿ ಖರೀದಿಸಬಹುದು!!

    ಇಸ್ಲಾಮಾಬಾದ್: ಪಾಕಿಸ್ತಾನ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಗ್ರಾಹಕ ಬೆಲೆ ಸೂಚ್ಯಂಕದಿಂದ ಅಳೆಯಲಾದ ಮಾಸಿಕ ಹಣದುಬ್ಬರವು (ಬೆಲೆ ಏರಿಕೆಯು) ಸೆಪ್ಟೆಂಬರ್​ನಲ್ಲಿ ನಾಲ್ಕು ತಿಂಗಳ ಗರಿಷ್ಠ ಮಟ್ಟವಾದ ಶೇಕಡಾ 31.4ಕ್ಕೆ ತಲುಪಿತು. ಮೇ ತಿಂಗಳಲ್ಲಿ ಮಾಸಿಕ ಹಣದುಬ್ಬರವು ಶೇಕಡಾ 38 ರಷ್ಟು ಹೆಚ್ಚಾಗಿತ್ತು.

    ಈಗ ಪಾಕ್​ನಲ್ಲಿ ಮೊಟ್ಟೆಯ ಬೆಲೆಯಲ್ಲಿ ಅಪಾರ ಏರಿಕೆ ಕಂಡುಬಂದಿದೆ. ಒಂದು ಡಜನ್​ ಮೊಟ್ಟೆಯ ಬೆಲೆ ಅಲ್ಲಿ ಎಷ್ಟು ಗೊತ್ತೆ? ಬರೋಬ್ಬರಿ 360 ರೂಪಾಯಿ. ಅಂದರೆ, ಒಂದು ಮೊಟ್ಟೆ ಕೊಂಡುಕೊಳ್ಳಲು 30 ರೂಪಾಯಿ ಕೊಡಬೇಕು.

    30 ಡಜನ್ ಮೊಟ್ಟೆಗಳ ಬೆಲೆಯು 10,500 ರೂಪಾಯಿಯಿಂದ 12,500 ರೂಪಾಯಿಗೆ ಏರಿಕೆಯಾಗಿದೆ ಎಂದು ಪಾಕಿಸ್ತಾನದ ಮಾಧ್ಯಮ ವರದಿಗಳು ಮಾಡಿವೆ.

    ಬೆಲೆ ಏರಿಕೆಗೆ ಕಾರಣ?:

    ಪಾಕಿಸ್ತಾನದಲ್ಲಿ ಮೊಟ್ಟೆ ಉತ್ಪಾದನೆಯಲ್ಲಿ ಪ್ರಮುಖ ಪದಾರ್ಥ ಸೋಯಾಬೀನ್. ಇದನ್ನು ಆಮದು ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಿದ್ದರೂ, ಅಧಿಕೃತ ಅಧಿಸೂಚನೆ ಇನ್ನೂ ಹೊರಡಿಸಬೇಕಾಗಿದೆ. ಹವಾಮಾನ ಸಚಿವಾಲಯವು ಅಧಿಸೂಚನೆಗಳನ್ನು ಹೊರಡಿಸುವಲ್ಲಿ ವಿಳಂಬ ಮಾಡುತ್ತಿರುವ ಕಾರಣ ಸೋಯಾಬೀನ್ ಆಮದಿಗೆ ತೊಂದರೆಯಾಗಿದೆ.

    ಮೊಟ್ಟೆ ಉತ್ಪಾದನೆಗಾಗಿ ಸಾಕುವ ಕೋಳಿಗಳ ಆಹಾರದಲ್ಲಿ ಪ್ರಮುಖವಾಗಿ ಸೋಯಾಬೀನ್ ಅತ್ಯಗತ್ಯ. ಸೋಯಾಬೀನ್‌ ಆಮದು ಮಾಡಿಕೊಳ್ಳುವಲ್ಲಿನ ವಿಳಂಬವು ಸಾಕಷ್ಟು ಮೊಟ್ಟೆ ಉತ್ಪಾದನೆಯನ್ನು ಕಾಪಾಡಿಕೊಳ್ಳುವಲ್ಲಿ ಸವಾಲನ್ನು ಸೃಷ್ಟಿಸಿದೆ.

    ಮಹೀಂದ್ರಾ ಥಾರ್​ ಕಾರನ್ನು ನದಿಯಲ್ಲಿಯೇ ಓಡಿಸಿದ ಪ್ರವಾಸಿಗರು: ಅಪಾಯಕಾರಿ ಸಾಹಸಕ್ಕೆ ಕೈಹಾಕಿದ್ದೇಕೆ?

    ಈ ವರ್ಷ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದ್ದು ರೂ 49 ಲಕ್ಷ ಕೋಟಿ: ಜನ ಮುಗಿಬಿದ್ದು ಹಣ ತೊಡಗಿಸುತ್ತಿರುವುದೇಕೆ?

    ಮುಂದಿನ ವರ್ಷ ದೇಶಾದ್ಯಂತ 24x 27 ವಿದ್ಯುತ್​ ಪೂರೈಕೆ; ಈಗ ದಿನಕ್ಕೆ ಎಷ್ಟು ಸಮಯ ಸರಬರಾಜು ಇದೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts