More

    ಮಹೀಂದ್ರಾ ಥಾರ್​ ಕಾರನ್ನು ನದಿಯಲ್ಲಿಯೇ ಓಡಿಸಿದ ಪ್ರವಾಸಿಗರು: ಅಪಾಯಕಾರಿ ಸಾಹಸಕ್ಕೆ ಕೈಹಾಕಿದ್ದೇಕೆ?

    ಚಂಡೀಗಢ: ಕ್ರಿಸ್‌ಮಸ್ ಮತ್ತು ಹೊಸ ವರ್ಷಾಚರಣೆಗಾಗಿ ಹಿಮಾಚಲ ಪ್ರದೇಶದ ಗಿರಿಧಾಮಗಳಿಗೆ ಅಪಾರ ಸಂಖ್ಯೆಯ ಪ್ರವಾಸಿಗರು ದಾಂಗುಡಿ ಇಟ್ಟಿದ್ದಾರೆ. ಹೀಗಾಗಿ, ಹಿಮಾಚಲ ಪ್ರದೇಶದ ರಸ್ತೆಗಳಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗಿದೆ.

    ಟ್ರಾಫಿಕ್​ ಜಾಮ್​ನಿಂದ ಪಾರಾಗಲು ಕೆಲ ಪ್ರವಾಸಿಗರು ಅಡ್ಡ ಮಾರ್ಗ ಶೋಧಿಸಿದ್ದಾರೆ. ಮುಂದೆ ಸಾಗಲು ತಮ್ಮ ವಾಹನಗಳನ್ನು ನದಿಯಲ್ಲಿಯೇ ಓಡಿಸುವ ಅಪಾಯಕಾರಿ ಸಾಹಸಕ್ಕೆ ಕೈಹಾಕಿದ್ದಾರೆ.

    ಲಾಹೌಲ್ ಕಣಿವೆಯ ಚಂದ್ರ ನದಿಯ ಮೂಲಕ ಮಹೀಂದ್ರಾ ಥಾರ್ ಎಸ್‌ಯುವಿ ಓಡಿಸಿಕೊಂಡು ಪ್ರವಾಸಿಗರು ಮುಂದೆ ಸಾಗುತ್ತಿರುವ ವಿಡಿಯೋ ವೈರಲ್​ ಆಗಿದೆ. ಅದೃಷ್ಟವಶಾತ್, ನದಿಯಲ್ಲಿನ ನೀರಿನ ಮಟ್ಟವು ಹೆಚ್ಚಿರಲಿಲ್ಲ, ಇಲ್ಲದಿದ್ದರೆ ಈ ಚಾಲನೆಯು ಮಾರಣಾಂತಿಕವಾಗಬಹುದಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಸ್ಥಳೀಯರಿಂದ ಇದಕ್ಕೆ ಟೀಕೆ ವ್ಯಕ್ತವಾಗಿದೆ.

    ಪ್ರವಾಸಿಗರು ಕ್ರಿಸ್ಮಸ್ ಆಚರಿಸಲು ಮತ್ತು ಲಾಹೌಲ್ ಕಣಿವೆಯಲ್ಲಿ ಹಿಮ ವೀಕ್ಷಿಸಲು ಕುಲು ಜಿಲ್ಲೆಯ ಪ್ರವಾಸಿ ಪಟ್ಟಣವಾದ ಮನಾಲಿಗೆ ಬರುತ್ತಿದ್ದಾರೆ.

    ಕಳೆದ ಮೂರು ದಿನಗಳಲ್ಲಿ ಅಂದಾಜು 55,000 ವಾಹನಗಳು ರೋಹ್ಟಾಂಗ್‌ನ ಅಟಲ್ ಸುರಂಗವನ್ನು ದಾಟಿವೆ. ಇದು ಕುಲು, ಲಾಹೌಲ್ ಮತ್ತು ಸ್ಪಿತಿಯನ್ನು ಸಂಪರ್ಕಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಸ್ತೆಗಳಲ್ಲಿ ವಾಹನಗಳ ಉದ್ದನೆಯ ಸರದಿಯನ್ನು ತೋರಿಸುವ ಹಲವಾರು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿವೆ.

    ಪ್ರವಾಸಿಗರು ಬರುತ್ತಿರುವುದು ಆತಿಥ್ಯ ಕ್ಷೇತ್ರಕ್ಕೆ ಉತ್ತೇಜನ ನೀಡಿದ್ದರೂ, ಇದನ್ನು ನಿರ್ವಹಿಸುವುದು ಆಡಳಿತಕ್ಕೆ ಸವಾಲಾಗಿದೆ. ಈ ಪ್ರವಾಸಿಗರ ಒತ್ತಡವು ದುರ್ಬಲವಾದ ಮತ್ತು ನೈಸರ್ಗಿಕ ವಿಕೋಪಗಳಿಗೆ ಒಳಗಾಗುವ ಪ್ರದೇಶದ ಪರಿಸರ ವಿಜ್ಞಾನದ ಮೇಲೆ ಭಾರಿ ಪರಿಣಾಮ ಬೀರಬಹುದು ಎಂಬ ಆತಂಕವೂ ತಲೆದೋರಿದೆ.

    ಪ್ರವಾಸಿಗರು ಸುರಕ್ಷಿತ ಪ್ರಯಾಣದ ಅಭ್ಯಾಸಗಳಿಗೆ ಆದ್ಯತೆ ನೀಡಬೇಕು ಮತ್ತು ಸಂಚಾರ ನಿಯಮಗಳನ್ನು ಪಾಲಿಸಬೇಕು ಎಂದು ಶಿಮ್ಲಾದ ಪೊಲೀಸ್ ಮಹಾನಿರ್ದೇಶಕ ಸಂಜಯ್ ಕುಂದು ಮನವಿ ಮಾಡಿದ್ದಾರೆ.

    ಹೊಸ ವರ್ಷದ ಆಚರಣೆಗಾಗಿ ಈ ವಾರ 1 ಲಕ್ಷಕ್ಕೂ ಹೆಚ್ಚು ವಾಹನಗಳು ಶಿಮ್ಲಾ ಪ್ರವೇಶಿಸುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈ ವರ್ಷ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದ್ದು ರೂ 49 ಲಕ್ಷ ಕೋಟಿ: ಜನ ಮುಗಿಬಿದ್ದು ಹಣ ತೊಡಗಿಸುತ್ತಿರುವುದೇಕೆ?

    ಮುಂದಿನ ವರ್ಷ ದೇಶಾದ್ಯಂತ 24x 27 ವಿದ್ಯುತ್​ ಪೂರೈಕೆ; ಈಗ ದಿನಕ್ಕೆ ಎಷ್ಟು ಸಮಯ ಸರಬರಾಜು ಇದೆ?

    ಹೊಸ ವರ್ಷದಲ್ಲಿ ಷೇರು ಮಾರುಕಟ್ಟೆ ಏನಾಗಲಿದೆ? 10 ಷೇರುಗಳ ಖರೀದಿಗೆ ಶಿಫಾರಸು ಮಾಡಿದ ಮೋತಿಲಾಲ್​ ಓಸ್ವಾಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts