More

    ವಿಶ್ವಕಪ್ ಕ್ರಿಕೆಟ್​: 1999ರ ಸೆಮಿಫೈನಲ್​ನಲ್ಲೂ ಇವೇ ತಂಡಗಳು, ಇದೇ ನಂಬರ್; ಈ ಸಲವೂ ಅದೇ ಫಲಿತಾಂಶ?

    ಕೋಲ್ಕತ: ಏಕದಿನ ವಿಶ್ವಕಪ್ ಕ್ರಿಕೆಟ್​ನ ಎರಡನೇ ಸೆಮಿಫೈನಲ್ ಇಂದು ಕೋಲ್ಕತದ ಈಡನ್​ ಗಾರ್ಡನ್ ಮೈದಾನದಲ್ಲಿ ದಕ್ಷಿಣ ಆಫ್ರಿಕ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ನಡೆಯುತ್ತಿದ್ದು, ಯಾರು ಗೆಲ್ಲುತ್ತಾರೆ ಎಂಬ ಕುತೂಹಲದ ಜತೆಗೇ ಫಲಿತಾಂಶದ ಕುರಿತು ಇನ್ನೊಂದು ಸಂಗತಿಯೂ ಕೇಳಿ ಬರುತ್ತಿದೆ.

    ಈ ಪಂದ್ಯದಲ್ಲಿ 24 ವರ್ಷಗಳ ಹಿಂದಿನ ಫಲಿತಾಂಶವೇ ಮರುಕಳಿಸಬಹುದಾ ಎಂಬ ಚರ್ಚೆಯೊಂದು ಕ್ರಿಕೆಟ್ ಅಭಿಮಾನಿಗಳ ನಡುವೆ ಕಂಡುಬಂದಿದೆ. ಅಷ್ಟಕ್ಕೂ 24 ವರ್ಷಗಳ ಹಿಂದಿನ ಆಟ-ತಂಡಗಳಿಗೂ ಇರುವ ಸಾಮ್ಯತೆ ಈ ಸೆಮಿಫೈನಲ್ಸ್​ನಲ್ಲಿ ಕಂಡುಬಂದಿರುವುದೇ ಇಂಥದ್ದೊಂದು ಚರ್ಚೆಗೆ ಕಾರಣ.

    ಇದನ್ನೂ ಓದಿ: ‘ದೇವ್ರು’ ಮೆಚ್ಚೋ ಆಟ ಆಡಿದ ವಿರಾಟ್​: ‘ಆ ದಿನ ನನಗೆ ನಗು ತಡೆಯಲು ಆಗಲಿಲ್ಲ’ ಎಂದ ಸಚಿನ್

    ಇಂದಿನಂತೆ 1999ರ ವಿಶ್ವಕಪ್ ಕ್ರಿಕೆಟ್​ನ ಸೆಮಿಫೈನಲ್​ನಲ್ಲೂ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕ ತಂಡಗಳು ಸೆಣಸಾಡಿದ್ದವು. ಅಂದು ಆಸ್ಟ್ರೇಲಿಯಾ 49.2 ಓವರ್​ಗಳಲ್ಲಿ 213 ರನ್ ಗಳಿಸಿತ್ತು. ಬಳಿಕ ದಕ್ಷಿಣ ಆಫ್ರಿಕ ತಂಡ 49.4 ಓವರ್​ಗಳಲ್ಲಿ 213ಕ್ಕೆ ಆಲೌಟ್​ ಆಗಿದ್ದರಿಂದ ಆ ಪಂದ್ಯ ಟೈ ಆಗಿತ್ತು.

    ಇದನ್ನೂ ಓದಿ: ವಿಶ್ವಕಪ್​ ಕ್ರಿಕೆಟ್​: ಫೈನಲ್​ ಪಂದ್ಯ ವೀಕ್ಷಿಸಲಿದ್ದಾರಾ ಪ್ರಧಾನಿ ಮೋದಿ?; ಭಾರತದ ಎದುರಾಳಿ ಯಾರು?

    ಇಂದು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಆಡಿರುವ ದಕ್ಷಿಣ ಆಫ್ರಿಕ ತಂಡ 212 ರನ್​ಗಳಿಗೆ ಆಲೌಟ್​ ಆಗಿದೆ. ಅಂದರೆ ಆಸ್ಟ್ರೇಲಿಯಾ ತಂಡ ಈ ಪಂದ್ಯದಲ್ಲಿ ಜಯ ಗಳಿಸಲು 213 ರನ್ ಗುರಿ ಸಾಧಿಸಬೇಕಿದೆ. 1999ರಲ್ಲಿ ಆಡಿದ್ದ ಇವೇ ತಂಡಗಳು ಇಂದೂ ಈ ಆಟದಲ್ಲೂ 213 ಗುರಿ ಹೊಂದಿರುವುದೇ ಕ್ರೀಡಾಭಿಮಾನಿಗಳಲ್ಲಿ ಇಂಥದ್ದೊಂದು ಲೆಕ್ಕಾಚಾರ ಹೊರಹೊಮ್ಮಲು ಕಾರಣ ಎನಿಸಿಕೊಂಡಿದೆ.

    ವಿಶ್ವಕಪ್ ಕ್ರಿಕೆಟ್​, ಇಂದು ಗೆಲುವು ಯಾರಿಗೆ?: ಇಲ್ಲಿದೆ ಮಾಹಿತಿ; ಈತ ನಿನ್ನೆಯ ಸೆಮಿಫೈನಲ್ ಬಗ್ಗೆ ಮೊನ್ನೆ ಹೇಳಿದ್ದೂ ನಿಜವಾಗಿತ್ತು!

    ಶಮಿಗೆ ಏಳು ವಿಕೆಟ್: ಏನಿದು ಅಚ್ಚರಿ.. ಆತನೊಬ್ಬ ನಿನ್ನೆ ಕಂಡ ಕನಸು ಇಂದು ನಿಜವಾಯ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts