More

    ಅಪ್ಪ, ಅಮ್ಮ, ಅಜ್ಜಿ, ತಂಗಿಯನ್ನು ಕೊಂದು ವಾಟರ್​ ಟ್ಯಾಂಕ್​ನಲ್ಲಿ ಮುಚ್ಚಿಟ್ಟ ಪಾಪಿ ಯುವಕ!

    ಕೋಲ್ಕತ: ಹೆತ್ತು ಹೊತ್ತು ಸಾಕಿದ್ದ ಅಪ್ಪ-ಅಮ್ಮ, ಮುದ್ದಾಡಿದ್ದ ಅಜ್ಜಿ, ಪ್ರೀತಿಯ ತಂಗಿಯನ್ನು ಯುವಕನೋರ್ವ ಕೊಲೆ ಮಾಡಿ ವಾಟರ್​ ಟ್ಯಾಂಕ್​ನಲ್ಲಿ ಮುಚ್ಚಿಟ್ಟಿರುವ ಘಟನೆ ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ನಡೆದಿದೆ. ಘಟನೆ ನಡೆದು ಹಲವು ತಿಂಗಳ ನಂತರ ಬೆಳಕಿಗೆ ಬಂದಿದೆ.

    ಮಾಲ್ಡಾ ಜಿಲ್ಲೆಯ ಕಲಿಯಾಚಕ್​ ಗ್ರಾಮದಲ್ಲಿ ಇಂತಹ ಘಟನೆ ನಡೆದಿದೆ. ಆಸಿಫ್ (19) ಹೆಸರಿನ ಯುವಕ ತನ್ನ ತಂದೆ ಜವಾದ್ ಅಲಿ, ತಾಯಿ ಇರಾ ಬೀಬಿ, ತಂಗಿ ಆರಿಫಾ ಹಾಗೂ ಅಜ್ಜಿ ಅಲೆಕ್ಜಾನ್​ರನ್ನು ಕೊಲೆ ಮಾಡಿದ್ದಾನೆ. ನಂತರ ಅವರ ದೇಹಗಳನ್ನು ವಾಟರ್​ ಟ್ಯಾಂಕ್​ನಲ್ಲಿ ಮುಚ್ಚಿಟ್ಟಿದ್ದಾನೆ. ಕಳೆದ ಫೆಬ್ರವರಿ ತಿಂಗಳಲ್ಲೇ ಈ ಘಟನೆ. ನಡೆದಿದೆ. ಆಸಿಫ್​ನ ಅಣ್ಣ ತನ್ನ ಕುಟುಂಬದ ನಾಲ್ವರು ಸದಸ್ಯರು ಕಾಣೆಯಾಗಿದ್ದಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ತಮ್ಮನ ಮೇಲೆ ಅನುಮಾನ ಇರುವುದಾಗಿಯೂ ಹೇಳಿದ್ದಾನೆ.

    ಮೊದಲಿಗೆ ಈ ಪ್ರಕರಣದಲ್ಲಿ ತನ್ನ ಪಾಲಿಲ್ಲವೆಂದು ಪೊಲೀಸರಿಗೆ ಆಸಿಫ್​ ಚಳ್ಳೆಹಣ್ಣು ತಿನ್ನಿಸಿದ್ದ. ನಂತರ ತನಿಖೆ ಚುರುಕುಗೊಳಿಸಿದ ಪೊಲೀಸರು ಆಸಿಫ್ ಮೇಲೆ ಕಣ್ಣಿಟ್ಟಿದ್ದರು. ಆತನ ಮೇಲೆ ಅನುಮಾನ ಬಂದು, ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ಕೊಲೆಯ ವಿಚಾರ ಬಾಯಿ ಬಿಟ್ಟಿದ್ದಾನೆ. ಶವಗಳನ್ನು ಬಚ್ಚಿಟ್ಟಿರುವ ಜಾಗ ತೋರಿಸಿದ್ದಾನೆ. ಆಸಿಫ್​ ಜತೆ ಅನೇಕರು ಡಾರ್ಕ್​ ವೆಬ್​ನಲ್ಲಿ ಸಕ್ರಿಯರಿದ್ದು, ಕೊಲೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. (ಏಜೆನ್ಸೀಸ್)

    ಗಂಡ ಗಂಡಸಲ್ಲ ಎಂದು ಹನಿಮೂನ್​ನಲ್ಲಿ ಗೊತ್ತಾಯ್ತು! ಇದೀಗ ಗಂಡನ ಸ್ತ್ರೀ ರೂಪವನ್ನೇ ಮದುವೆಯಾಗಲು ಮುಂದಾದ ಹೆಂಡತಿ

    ಗಂಡನೊಂದಿಗೆ ಫೋನ್​ನಲ್ಲಿ ಮಾತನಾಡುತ್ತಾ ಹೊರಹೋದವಳು ದೂರದ ರೈಲ್ವೆ ಹಳಿ ಬಳಿ ಮಾಂಸವಾಗಿ ಪತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts