More

    ಕರೊನಾ ಟೆಸ್ಟ್​ ನಿರ್ಲಕ್ಷ್ಯ: 19 ವೈದ್ಯಾಧಿಕಾರಿಗಳ ವಿರುದ್ಧ ಶಿಸ್ತು ಕ್ರಮ

    ಚಾಮರಾಜನಗರ: ಕರೊನಾ ಸೋಂಕಿನ ಪರಿಸ್ಥಿತಿಯನ್ನು ನಿಯಂತ್ರಿಸಲು ನಿಗದಿತ ಮಟ್ಟದಲ್ಲಿ ಕರೊನಾ ಟೆಸ್ಟ್​ಗಳನ್ನು ನಡೆಸುವಲ್ಲಿ ವಿಫಲರಾದ ಜಿಲ್ಲೆಯ 19 ವೈದ್ಯಾಧಿಕಾರಿಗಳ ಮೇಲೆ ಶಿಸ್ತು ಕ್ರಮ ಮತ್ತು ಇಲಾಖಾ ವಿಚಾರಣೆಗೆ ಶಿಫಾರಸು ಮಾಡಲಾಗಿದೆ.

    ಚಾಮರಾಜನಗರ ಜಿಲ್ಲೆಯ 15 ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಇಬ್ಬರು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಇಬ್ಬರು ತಾಲೂಕು ವೈದ್ಯಾಧಿಕಾರಿಗಳು ಕರೊನಾ ಟೆಸ್ಟ್ ನಡೆಸುವ ನಿಗದಿತ ಗುರಿ ಸಾಧಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಕರೊನಾ ಟೆಸ್ಟ್​ ಪ್ರಗತಿ ಕುಂಠಿತವಾಗಿದ್ದು, ಈ ವೈದ್ಯಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಚಾಮರಾಜನಗರ ಉಪವಿಭಾಗಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಶಿಫಾರಸು ಮಾಡಿದ್ದಾರೆ.

    ಜಿಲ್ಲೆಯಲ್ಲಿ ಪ್ರತಿ ದಿನ 3,200 ಟೆಸ್ಟ್ ಮಾಡಬೇಕೆಂಬ ಗುರಿ ಇದೆ. ಆದರೆ ಹಲವು ಬಾರಿ ಎಚ್ಚರಿಕೆ ನೀಡಿದರೂ ಕೆಲವು ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ನಿಗದಿತ ಗುರಿಯಂತೆ ಗಂಟಲುದ್ರವ ಮಾದರಿ ಸಂಗ್ರಹಿಸುವಲ್ಲಿ ವಿಫಲರಾಗಿದ್ದಾರೆ ಎಂದು ಬೇಜವಾಬ್ದಾರಿತನ ಮತ್ತು ಕರ್ತವ್ಯಚ್ಯುತಿಯ ಆರೋಪಗಳಡಿ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿದೆ ಎನ್ನಲಾಗಿದೆ.

    ಖಾತೆ ಬಗ್ಗೆ ಕ್ಯಾತೆ ತೆಗೆದವರಿಗೆ ಚಾಟಿ ಬೀಸಿದ ಅರುಣ್ ಸಿಂಗ್

    ಪ್ರತಿದಿನ 5 ಲಕ್ಷ ಲಸಿಕೆ ನೀಡಲು ತೀರ್ಮಾನ; ವಾರಕ್ಕೊಮ್ಮೆ ಲಸಿಕೆ ಉತ್ಸವ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts