More

    ಬೆಸ್ಕಾಂ ನಿರ್ಲಕ್ಷ್ಯಕ್ಕೆ ತಾಯಿ, ಮಗು ಬಲಿ

    ಬೆಂಗಳೂರು: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ತಾಯಿ-ಮಗು ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾಗಿದ್ದಾರೆ. ಕಣ್ಣೆದುರೇ ಪತ್ನಿ ಮತ್ತು ಮಗಳ ಸಾವಿನ ದೃಶ್ಯ ಕಂಡ ಪತಿಯ ಆಕ್ರಂದನ ಮುಗಿಲು ಮುಟ್ಟಿತ್ತು. ರಸ್ತೆಯಲ್ಲಿ ಶವಗಳನ್ನು ಇಟ್ಟು ಬೆಸ್ಕಾಂ ಅಧಿಕಾರಿಗಳ ವಿರುದ್ಧ ಸ್ಥಳೀಯರು ಮತ್ತು ಮೃತರ ಕುಟುಂಬಸ್ಥರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

    ಕಾಡುಗೋಡಿಯ ಎ.ಕೆ.ಗೋಪಾಲ್ ಕಾಲನಿ ನಿವಾಸಿ ಸೌಂದರ್ಯ (23), 9 ತಿಂಗಳ ಮಗು ಸುವಿಕ್ಷಾ ಮೃತರು. ಸೌಂದರ್ಯ ಪತಿ ಸಂತೋಷ್ ಕುಮಾರ್‌ಗೂ ಸುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈಟ್‌ಫೀಲ್ಡ್ ವಿಭಾಗ ಡಿಸಿಪಿ ಡಾ. ಶಿವಕುಮಾರ್ ತಿಳಿಸಿದ್ದಾರೆ.
    ತಮಿಳುನಾಡಿನಲ್ಲಿ ಸಂತೋಷ್ ಕುಮಾರ್, ರ್ನಿಚರ್ ಅಂಗಡಿಯಲ್ಲಿ ಸೇಲ್ಸ್‌ಮ್ಯಾನ್ ಆಗಿದ್ದು, ಅಲ್ಲಿಯೇ ನೆಲೆಸಿದ್ದ. ಇತ್ತ ಎ.ಕೆ.ಗೋಪಾಲ ಕಾಲನಿಯಲ್ಲಿ ತಾಯಿ ಮನೆಯಲ್ಲಿದ್ದ ಸೌಂದರ್ಯ, ಮದುವೆ ಬಳಿಕ ತವರು ಮನೆಯಲ್ಲಿಯೇ ಉಳಿದುಕೊಂಡು ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಇದರ ನಡುವೆ ಪತಿ ಮನೆಗೆ ಸೌಂದರ್ಯ ಹೋಗಿ ಬರುತ್ತಿದ್ದಳು.

    ಸಂತೋಷ್ ಸಹ ಆಗಾಗ್ಗೆ ಅತ್ತೆ ಮನೆಗೆ ಬಂದು ಹೋಗುತ್ತಿದ್ದು, ಈ ದಂಪತಿಗೆ ಸುವಿಕ್ಷಾ ಮಗಳು ಇದ್ದಳು.
    ದೀಪಾವಳಿ ಹಬ್ಬದ ಪ್ರಯುಕ್ತ ಸೌಂದರ್ಯ, ತನ್ನ ಪುತ್ರಿ ಜೊತೆಗೆ ತಮಿಳುನಾಡಿನ ಪತಿಯ ಮನೆಗೆ ಹೋಗಿದ್ದಳು. ಹಬ್ಬ ಮುಗಿದ ಹಿನ್ನೆಲೆಯಲ್ಲಿ ಪತ್ನಿ ಮತ್ತು ಮಗಳನ್ನು ತವರು ಮನೆಗೆ ಬಿಟ್ಟು ಹೋಗಲು ಸಂತೋಷ್, ತಮಿಳುನಾಡಿನಿಂದ ಬಸ್‌ನಲ್ಲಿ ಭಾನುವಾರ ಬೆಳಗಿನ ಜಾವ 4.30ರಲ್ಲಿ ಸಿಲ್ಕ್ ಬೋರ್ಡ್‌ಗೆ ಬಂದಿದ್ದಾರೆ. ಅಲ್ಲಿಂದ ಬಿಎಂಟಿಸಿ ಬಸ್‌ನಲ್ಲಿ ವೈಟ್‌ಫೀಲ್ಡ್ ಹೋಪ್ ಾರಂಗೆ ಬಂದು ಇಳಿದಿದ್ದರು. ಸೌಂದರ್ಯ, ಮಗುವನ್ನು ಎತ್ತಿಕೊಂಡು ಪಾದಚಾರಿ ಮಾರ್ಗದಲ್ಲಿ ನಡೆದು ಕೊಂಡು ಬರುತ್ತಿದ್ದರೇ ರಸ್ತೆಯಲ್ಲಿ ಬ್ಯಾಗ್ ಎತ್ತಿಕೊಂಡು ಸಂತೋಷ್ ಸಾಗುತ್ತಿದ್ದ.

    ಬೆಳಗ್ಗೆ 6 ಗಂಟೆಯಲ್ಲಿ ಪಾದಚಾರಿ ಮಾರ್ಗದಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿರುವುದು ಗಮನಿಸದೆ ಸೌಂದರ್ಯ ತುಳಿದಾಗ ವಿದ್ಯುತ್ ಪ್ರವಹಿಸಿ ತಾಯಿ, ಮಗಳಿಗೆ ಬೆಂಕಿ ಹೊತ್ತಿಕೊಂಡಿದೆ.
    ಸಂತೋಷ್, ಪತ್ನಿ ಮತ್ತು ಮಗುವನ್ನು ರಕ್ಷಣೆ ಮಾಡಲು ಮುಂದಾದಾಗ ವಿದ್ಯುತ್ ಪ್ರವಹಿಸಿ ದೂರಕ್ಕೆ ಬಿದ್ದಿದ್ದಾನೆ. ಸ್ಥಳೀಯರು ತಕ್ಷಣ ಸಂತೋಷ್‌ನ್ನು ಹಿಡಿದುಕೊಂಡಿದ್ದಾರೆ. ಪತಿಯ ಕಣ್ಣು ಎದುರೇ ಪತ್ನಿ ಮತ್ತು ಮಗು ಸುಟ್ಟು ಸ್ಥಳದಲ್ಲಿಯೇ ಅಸುನೀಗಿದರು. ವಿಷಯ ತಿಳಿದ ಕಾಡುಗೋಡಿ ಪೊಲೀಸರು ಮತ್ತು ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದರು. ಬೆಸ್ಕಾಂ ಹೆಲ್ಪ್‌ಲೈನ್‌ಗೆ ಕರೆ ಮಾಡಿದರೂ ಅಧಿಕಾರಿಗಳು ಸ್ಥಳಕ್ಕೆ ಬಾರದೆ ನಿರ್ಲಕ್ಷ್ಯ ತೋರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts