More

    ತಾಲ್ಲೂಕು-ಜಿಲ್ಲಾ ಆಸ್ಪತ್ರೆಗಳಲ್ಲಿ ಐಸಿಯು ಬೆಡ್ ಸೌಲಭ್ಯ : ಮೇಲ್ದರ್ಜೆ ಕಾರ್ಯಕ್ಕೆ 1,500 ಕೋಟಿ ರೂ. ಮಂಜೂರು

    ಬೆಂಗಳೂರು : ಮೂರು ತಿಂಗಳೊಳಗೆ ರಾಜ್ಯದ 19 ಜಿಲ್ಲಾ ಆಸ್ಪತ್ರೆಗಳನ್ನು ಮತ್ತು 146 ತಾಲ್ಲೂಕು ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಎಲ್ಲಾ ಸರ್ಕಾರಿ ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಐಸಿಯು ಬೆಡ್ ಸೌಲಭ್ಯ ಇರಬೇಕೆಂದು ಸರ್ಕಾರ ನಿರ್ಧರಿಸಿದ್ದು, ಹೆಚ್ಚುವರಿ ಸೌಲಭ್ಯ ಸೃಷ್ಟಿಗಾಗಿ 1500 ಕೋಟಿ ರೂ. ಹಣ ಮಂಜೂರು ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿ ಸಿ.ಎನ್​.ಅಶ್ವಥನಾರಾಯಣ ಹೇಳಿದ್ದಾರೆ.

    ಸಚಿವ ಸಿ.ಸಿ.ಪಾಟೀಲ್ ಅವರೊಂದಿಗೆ ಇಂದು ಬೆಂಗಳೂರಿನಲ್ಲಿ ನಡೆಸಿದ ಜಂಟಿ ಸುದ್ದಿ ಗೋಷ್ಠಿಯಲ್ಲಿ, ಡಿಸಿಎಂ ಅಶ್ವಥ್ ನಾರಾಯಣ, ಈ ಬಗ್ಗೆ ಮಾಹಿತಿ ನೀಡಿದರು. ಕರೊನಾ 3ನೇ ಅಲೆಗೆ ಸಿದ್ಧವಾಗಲು ರಾಜ್ಯದ ಆರೋಗ್ಯ ಸೌಲಭ್ಯಗಳ ಕುರಿತು  ನಡೆದ ಸಭೆಯಲ್ಲಿ ಹಲವು ನಿರ್ಣಯಗಳನ್ನು ತೆಗೆದುಕೊಂಡಿದ್ದೇವೆ ಎಂದರು. ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ 50 ಬೆಡ್ ಆಕ್ಸಿಜನ್ ಇರಬೇಕು. 25 ಬೆಡ್ ಐಸಿಯು ಬೆಡ್ ಇರಬೇಕು. ಇದರಿಂದ ಕನಿಷ್ಠ ನಾಲ್ಕು ಸಾವಿರ ಜನ ವೈದ್ಯರು ಬೇಕಾಗುತ್ತಾರೆ. ಗ್ರೂಪ್ ಡಿ ನರ್ಸ್​ಗಳು ಬೇಕಾಗುತ್ತಾರೆ. ಎಲ್ಲಾ ಅಗತ್ಯ ಕ್ರಮಗಳ ಬಗ್ಗೆ ಚಿಂತನೆ ನಡೆದಿದೆ ಎಂದರು.

    ಇದನ್ನೂ ಓದಿ: ಹಗಲಲ್ಲಿ ಕೂಲಿಗಾರರು, ರಾತ್ರಿ ಕಳ್ಳರು! ಲಕ್ಷಾಂತರ ರೂಪಾಯಿ ಕಳ್ಳತನ ಮಾಡಿದ್ದ ನೇಪಾಳಿ ಗ್ಯಾಂಗ್

    ಕರೊನಾ ಮೂರನೇ ಅಲೆಗೆ ಬೇಕಾದ ತಯಾರಿ ನಡೆಸಿರುವುದಾಗಿ ಹೇಳಿದ ಡಿಸಿಎಂ, ಈ ಕಾರ್ಯದ ಖರ್ಚುವೆಚ್ಚದ ಬಗ್ಗೆ ಸಬ್ ಕಮಿಟಿ ವರದಿ ನೀಡಿದೆ. ಇದಕ್ಕಾಗಿ 1500 ಕೋಟಿ ರೂ. ಗಳ ಬೇಡಿಕೆಗೆ ಟಾಸ್ಕ್ ಫೋರ್ಸ್ ಅನುಮೋದನೆ ನೀಡಿದೆ. ಇದು ಬೆಂಗಳೂರು ಹೊರತುಪಡಿಸಿದ ಆಸ್ಪತ್ರೆಗಳಿಗೆ ಮೀಸಲಿಟ್ಟ ಹಣವಾಗಿದ್ದು, 146 ತಾಲ್ಲೂಕು ಆಸ್ಪತ್ರೆ ಮತ್ತು 19 ಜಿಲ್ಲಾ ಆಸ್ಪತ್ರೆಗಳಲ್ಲಿ ಎಲ್ಲ ಸೌಕರ್ಯ ಹೆಚ್ಚಿಸಲು ವಿನಿಯೋಗಿಸಲ್ಪಡುವುದು ಎಂದಿದ್ದಾರೆ.

    ಬೆಂಗಳೂರು ನಗರದಲ್ಲಿ ಸೆಕೆಂಡರಿ ಆಸ್ಪತ್ರೆಗಳ ಕೊರತೆಯಿದೆ. ಆದ್ದರಿಂದ ಬಡವರಿಗೆ ಅನುಕೂಲವಾಗಲು ನಗರದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ನೂರು ಬೆಡ್ ಆಸ್ಪತ್ರೆ ನಿರ್ಮಿಸಲು ನಿರ್ಧರಿಸಲಾಗಿದೆ. ನಾಲ್ಕು ಕ್ಷೇತ್ರಗಳಿಗೆ ಸೂಪರ್ ಸ್ಪೇಷಲಿಟಿ ಆಸ್ಪತ್ರೆ ನಿರ್ಮಾಣ ಮಾಡುವ ಯೋಜನೆಯೂ ಇದೆ. ಇದಕ್ಕಾಗಿ ಸ್ಥಳ ಗುರುತಿಸಲು ನಿರ್ಧಾರ ಮಾಡಲಾಗಿದೆ. ಜಾಗದ ಸಮಸ್ಯೆ ಬಗೆಹರಿಸಲು ಬಿಬಿಎಂಪಿ ವಲಯದಲ್ಲಿ ಆಯುಕ್ತರಿಗೆ ಸೂಚಿಸಿದ್ದೇವೆ ಎಂದು ಡಿಸಿಎಂ ಅಶ್ವಥ್ ನಾರಾಯಣ ಹೇಳಿದರು.

    ಹಣಕ್ಕಾಗಿ ಪಾಲಕರನ್ನು ದೊಣ್ಣೆಯಿಂದ ಥಳಿಸಿದ ಮಾದಕ ವ್ಯಸನಿಯ ಬಂಧನ

    ಬ್ಯಾಕ್​ಪ್ಯಾಕಲ್ಲಿ ವಿದೇಶಕ್ಕೆ ಹ್ಯಾಶಿಶ್​ ಆಯಿಲ್ ಸಾಗಣೆ ! ಇಬ್ಬರ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts