More

    ಕೋವಿಡ್ ಪೀಡಿತರ ಚಿಕಿತ್ಸೆಗೆ ಜಿಲ್ಲಾಡಳಿತ ಸನ್ನದ್ಧ

    ವಿಜಯವಾಣಿ ವಿಶೇಷ ಧಾರವಾಡ
    ಜಿಲ್ಲೆಯಲ್ಲಿ ಕರೊನಾ ಸೋಂಕು ದಿನೇದಿನೇ ಏರಿಕೆಯಾಗುತ್ತಿದೆ. ಪ್ರಕರಣಗಳ ಸಂಖ್ಯೆ ಎರಡಂಕಿ ದಾಟಿದೆ. ಇದು ಸಂಭವನೀಯ 3ನೇ ಅಲೆಯ ಮುನ್ಸೂಚನೆ ಎನ್ನಲಾಗಿದ್ದು, ಜತೆಗೆ ರೂಪಾಂತರಿ ತಳಿ ಒಮಿಕ್ರಾನ್​ನ ಭೀತಿಯೂ ಹೆಚ್ಚಾಗಿದೆ. ಕೋವಿಡ್ ಹತೋಟಿ ಮತ್ತು ಪೀಡಿತರ ಚಿಕಿತ್ಸೆಗೆ ಜಿಲ್ಲಾಡಳಿತ ಅಗತ್ಯ ತಯಾರಿ ಮಾಡಿಕೊಂಡಿದೆ.
    ಕೋವಿಡ್ ಬಾಧಿತರ ಚಿಕಿತ್ಸೆ ಮತ್ತು ಕರೊನಾ ಹರಡುವಿಕೆ ತಡೆಗಾಗಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಈಗಾಗಲೇ ಟಾಸ್ಕ್​ಫೋರ್ಸ್ ಸಭೆಗಳನ್ನು ಜರುಗಿಸಿದ್ದಾರೆ. ಜಿಲ್ಲಾಡಳಿತ ಕೈಗೊಂಡ ಕ್ರಮಗಳ ಬಗ್ಗೆ ವಿಜಯವಾಣಿ ತಂಡ ರಿಯಾಲಿಟಿ ಚೆಕ್ ನಡೆಸಿದ್ದು, ಪೂರ್ವಸಿದ್ಧತೆಗಳು ಕಂಡುಬಂದವು.
    ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ ಬಾಧಿತರ ಚಿಕಿತ್ಸೆಗಾಗಿ 165 ಬೆಡ್​ಗಳನ್ನು ಮೀಸಲಿಡಲಾಗಿದೆ. ಈ ಪೈಕಿ 125 ವಯಸ್ಕರಿಗೆ ಹಾಗೂ 40 ಬೆಡ್​ಗಳನ್ನು ಮಕ್ಕಳಿಗಾಗಿ ಸಿದ್ಧಪಡಿಸಲಾಗಿದೆ. 125ರಲ್ಲಿ ವಯಸ್ಕರಿಗಾಗಿ 25 ಐಸಿಯು ಬೆಡ್ ಹಾಗೂ 100 ಆಕ್ಸಿಜನ್ ಸಹಿತ ಬೆಡ್​ಗಳು ಮೀಸಲಿವೆ. ಮಕ್ಕಳಿಗಾಗಿ ಮೀಸಲಿರುವ 40 ಬೆಡ್​ಗಳಲ್ಲಿ 10 ಐಸಿಯು, 10 ಎಚ್​ಡಿಯು ಹಾಗೂ 20 ಆಕ್ಸಿಜನ್ ಸಹಿತ ಬೆಡ್​ಗಳನ್ನು ಮೀಸಲಿಡಲಾಗಿದೆ.
    ಜಿಲ್ಲಾ ಆಸ್ಪತ್ರೆಯಲ್ಲಿ 30 ವೆಂಟಿಲೇಟರ್​ಗಳು, 15 ಎಚ್​ಎಫ್​ಎನ್ ಮಶೀನ್​ಗಳು ಹಾಗೂ 165 ಬೆಡ್​ಗಳಿಗೂ ಆಕ್ಸಿಜನ್ ವ್ಯವಸ್ಥೆ ಮಾಡಲಾಗಿದೆ.
    ಜಿಲ್ಲೆಯಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಒಟ್ಟು 2,832 ಬೆಡ್​ಗಳ ವ್ಯವಸ್ಥೆ ಮಾಡಲಾಗಿದೆ. ಈ ಪೈಕಿ ಸಾಮಾನ್ಯ ವಾರ್ಡ್​ನಲ್ಲಿ 586, ಆಕ್ಸಿಜನ್ ಸಹಿತ ಎಚ್​ಡಿಯು 1,871 ಬೆಡ್, ಐಸಿಯು 156 ಹಾಗೂ ವೆಂಟಿಲೇಟರ್​ವುಳ್ಳ ಐಸಿಯು 219 ಬೆಡ್​ಗಳ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ ಮಕ್ಕಳಿಗೆ ಸೋಂಕು ತಗುಲಿದರೆ ಅವರಿಗೆ ಪ್ರತ್ಯೇಕ ಚಿಕಿತ್ಸೆ ನೀಡಲು ಸಹ ಬೆಡ್ ವ್ಯವಸ್ಥೆ ಮಾಡಲಾಗಿದೆ. ಮಕ್ಕಳ ವಿಭಾಗದಲ್ಲಿ 69 ಸಾಮಾನ್ಯ, 26 ಎನ್​ಐಸಿಯು, 14 ವೆಂಟಿಲೇಟರ್ ಎನ್​ಐಸಿಯು, 15 ಪಿಐಸಿಯು, 4 ವೆಂಟಿಲೇಟರ್ ಪಿಐಸಿಯು ಬೆಡ್​ಗಳ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ 1,000 ಎಲ್​ಪಿಎಂ ಸಾಮರ್ಥ್ಯದ ಆಮ್ಲಜನಕ ಉತ್ಪಾದನಾ ಘಟಕವಿದ್ದು, ಆಕ್ಸಿಜನ್ ಸಮಸ್ಯೆ ಎದುರಾಗದಂತೆ ಎಚ್ಚರಿಕೆ ಕ್ರಮಗಳನ್ನು ವಹಿಸಲಾಗಿದೆ. ಅಗತ್ಯ ಕಾನ್ಸಂಟ್ರೇಟರ್​ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
    ಬೆಂಗಳೂರಿನಲ್ಲಿ ಈಗಾಗಲೇ 1ರಿಂದ 8ನೇ ತರಗತಿಗಳನ್ನು ಬಂದ್ ಮಾಡಲಾಗಿದೆ. ರಾಜ್ಯಾದ್ಯಂತ ಶನಿವಾರ, ಭಾನುವಾರ ವೀಕೆಂಡ್ ಕರ್ಫ್ಯೂ ಘೋಷಿಸಲಾಗಿದೆ. ವಾರಾಂತ್ಯ ಕರ್ಫ್ಯೂ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಜಿಲ್ಲಾಡಳಿತ ಆದೇಶಿಸಿದೆ. ಆದಾಗ್ಯೂ ಮಾಸ್ಕ್ ಧಾರಣೆಯ ಗಂಭೀರತೆ ಕಂಡುಬರುತ್ತಿಲ್ಲ.
    ಟೆಸ್ಟಿಂಗ್ ಪ್ರಮಾಣ ಹೆಚ್ಚಳ: ಜಿಲ್ಲೆಯಲ್ಲಿ ಕೋವಿಡ್​ನಿಂದ ಇದುವರೆಗೆ 1,325 ಮೃತಪಟ್ಟಿದ್ದಾರೆ. ಜಿಲ್ಲಾ ಆಸ್ಪತ್ರೆ, ಹುಬ್ಬಳ್ಳಿಯ ಕಿಮ್್ಸ, ಕುಂದಗೋಳ, ಕಲಘಟಗಿ ಹಾಗೂ ನವಲಗುಂದ ತಾಲೂಕು ಆಸ್ಪತ್ರೆಗಳಲ್ಲಿ ಕೋವಿಡ್ ಟೆಸ್ಟ್ ನಡೆಯುತ್ತಿದೆ. ಸೋಂಕಿತರು ವೈದ್ಯರ ಸಲಹೆಯಂತೆ ತಪಾಸಣೆಗೊಳಪಡುತ್ತಿದ್ದಾರೆ. ಆದರೆ, ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್ ಟೆಸ್ಟಿಂಗ್ ಪ್ರಕ್ರಿಯೆ ನಡೆಯುತ್ತಿಲ್ಲ.
    ಕಿಮ್ಸ್​ನಲ್ಲಿ ಸಕಲ ಸಿದ್ಧತೆ: ರೂಪಾಂತರಿ ಒಮಿಕ್ರಾನ್ ವೈರಸ್ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿಯ ಕಿಮ್್ಸ ಸಕಲ ಸಿದ್ಧತೆ ಮಾಡಿಕೊಂಡಿದೆ.
    ವೇದಾಂತ ಗ್ರುಪ್ ವತಿಯಿಂದ 100 ಹಾಸಿಗೆಗಳ ತಾತ್ಕಾಲಿಕ ಆಸ್ಪತ್ರೆ, 66 ಬೆಡ್​ಗಳ ಮೇಕ್​ಶಿಫ್ಟ್ ಆಸ್ಪತ್ರೆ ಇವೆ. ಜತೆಗೆ ಕಿಮ್ಸ್​ನ ಸೂಪರ್ ಸ್ಪೆಷಾಲಿಟಿಯಲ್ಲಿ ಹೆಚ್ಚುವರಿಯಾಗಿ 400 ಬೆಡ್​ಗಳ ವ್ಯವಸ್ಥೆ ಮಾಡಲಾಗಿದೆ.
    ತಾಯಿ ಮತ್ತು ಮಗುವಿನ ಚಿಕಿತ್ಸೆಗೆ ಪ್ರತ್ಯೇಕ ಆಸ್ಪತ್ರೆಯನ್ನೂ ಮೀಸಲಿರಿಸಲಾಗಿದೆ. ಕೋವಿಡ್ ಹಾಗೂ ತೀವ್ರ ಉಸಿರಾಟದ ತೊಂದರೆ (ಸಾರಿ) ಹೊಂದಿದ್ದ ಇದುವರೆಗೆ 14 ಸಾವಿರ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಕಿಮ್್ಸ ಆವರಣದಲ್ಲಿ ತಲಾ 20 ಕಿಲೋ ಲೀಟರ್ ಸಾಮರ್ಥ್ಯದ 2 ಘಟಕಗಳನ್ನು ಸ್ಥಾಪಿಸಲಾಗಿದೆ. ಐಸಿಯು ಬೆಡ್, ವೆಂಟಿಲೇಟರ್​ಗಳೂ ಇವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts