More

    ಭಾರತದ ಸೇನಾ ದಾಳಿಗೆ 15 ಪಾಕ್​ ಯೋಧರು, 8 ಭಯೋತ್ಪಾದಕರು ಫಿನಿಷ್​

    ಶ್ರೀನಗರ: ಗಡಿ ನಿಯಂತ್ರಣ ರೇಖೆಯಲ್ಲಿ ಭಾರತದ ಸೇನಾ ದಾಳಿಗೆ 15 ಪಾಕಿಸ್ತಾನ ಯೋಧರು ಹಾಗೂ 8 ಭಯೋತ್ಪಾದಕರು ಹತ್ಯೆಯಾಗಿದ್ದಾರೆ ಎಂದು ಭದ್ರತಾ ಪಡೆಯ ಇಬ್ಬರು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಗಡಿ ನಿಯಂತ್ರಣ ರೇಖೆಯಲ್ಲಿರುವ ಪಾಕಿಸ್ತಾನದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿತ್ತು. ಯಾವುದೇ ಕೃತ್ಯವನ್ನು ಶಿಕ್ಷಿಸದೆ ಬಿಡುವುದಿಲ್ಲ ಎಂದು ಪಾಕ್​ಗೆ ರವಾನಿಸಿದ ಸಂದೇಶ ಇದಾಗಿತ್ತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಯುದ್ಧ ವಿರಾಮವನ್ನು ಉಲ್ಲಂಘಿಸುತ್ತಿರುವ ಹಿನ್ನೆಲೆಯಲ್ಲಿ ಕಿಶನ್​ಗಂಗಾ ನದಿಪಾತ್ರದಲ್ಲಿರುವ ದುಧನಿಯಾಲ್​ ಪ್ರದೇಶದ ಮೇಲೆ ಸೇನಾಪಡೆಗಳು ದಾಳಿ ನಡೆಸಿದ್ದವು. ಪರ್ವತದ ಮೇಲಿರುವ ಈ ಪ್ರದೇಶದ ಐವರು ಭಯೋತ್ಪಾದಕರನ್ನು ಏಪ್ರಿಲ್​ 5ರಂದು ಸೇನೆಯ ವಿಶೇಷ ಪಡೆಗಳು ಹೊಡೆದುರುಳಿಸಿದ್ದವು. ಈ ಪೈಕಿ ಮೂವರು ಜಮ್ಮು ಕಾಶ್ಮೀರದವರಾಗಿದ್ದರೆ, ಇಬ್ಬರು ಜೈಶ್​-ಎ- ಮೊಹಮ್ಮದ್​ನಿಂದ ತರಬೇತಿ ಪಡೆದವರಾಗಿದ್ದರು ಎಂದು ಸೇನಾಧಿಕಾರಿಗಳು ತಿಳಿಸಿದ್ದರು.

    ಭಾರತೀಯ ಸೇನೆ ದಾಳಿ ನಡೆಸಿದ್ದನ್ನು ಪಾಕ್​ ಸೇನೆ ಕೂಡ ಖಚಿತಪಡಿಸಿದೆ. ಆದರೆ, 15 ವರ್ಷದ ಬಾಲಕಿ ಸೇರಿ ನಾಲ್ವರು ಗಾಯಗೊಂಡಿದ್ದಾರೆ ಎಂದು ಹೇಳಿದೆ. ಭಾರತ ಕೂಡ ಇದೇ ವರ್ಷ 708 ಬಾರಿ ಯುದ್ಧ ವಿರಾಮವನ್ನು ಉಲ್ಲಂಘಿಸಿದೆ ಎಂದು ಪಾಕ್​ ಆರೋಪಿಸಿದೆ.

    ಭಾರತದ ದಾಳಿಗೆ ಪಾಕ್​ ಪ್ರತ್ಯುತ್ತರ ನೀಡಿದೆ. ಭಾರತೀಯ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿದೆ. ಭಾರತದಷ್ಟೇ ಪ್ರಮಾಣದಲ್ಲಿ ಮದ್ದುಗುಂಡಗಳನ್ನು ಪ್ರತಿಯಾಗಿ ಪ್ರಯೋಗಿಸಿದೆ ಎಂದು ಪಾಕ್​ ಸೇನೆ ಹೇಳಿಕೊಂಡಿದೆ. ಭಾರತದ ದಾಳಿಯನ್ನು ಮರೆಮಾಚಲು ಈ ದಾಳಿ ನಡೆಸಿದೆ ಗುಪ್ರಚರ ಇಲಾಖೆ ಮೂಲಗಳು ತಿಳಿಸಿವೆ. ದಾಳಿ ವೇಳೆ ಕೆಲ ಅಂಗಡಿಗಳಿಗೂ ಹಾನಿಯಾಗಿದೆ ಎಂದು ತಿಳಿದುಬಂದಿದೆ.

    ಗಡಿ ನಿಯಂತ್ರಣ ರೇಖೆ ಬಳಿ 160ಕ್ಕೂ ಅಧಿಕ ಭಯೋತ್ಪಾದಕರು ಭಾರತದ ಗಡಿಯತ್ತ ನುಸುಳಲು ಕಾದು ಕುಳಿತಿರುವುದರಿಂದ ಈ ದಾಳಿ ನಡೆಸುವುದು ಭಾರತಕ್ಕೆ ಅನಿವಾರ್ಯವಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.

    ಲಾಕ್​ಡೌನ್​ ಪರಿಶೀಲಿಸಲು ಸಿಎಂ ಯಡಿಯೂರಪ್ಪರಿಂದ ನಗರ ಪ್ರದಕ್ಷಿಣೆ: ಧೈರ್ಯ ತುಂಬಿದ ಬಿಎಸ್​ವೈಗೆ ಬೆಸ್ಟ್​ ಸಿಎಂ ಎಂದ ಸ್ಥಳೀಯರು

    ಕರೊನಾ ಪಿಡುಗಿನಿಂದ ಆರ್ಥಿಕ ಹಿಂಜರಿತ; ಚೇತರಿಕೆಗೆ ಕೇಂದ್ರ ಸರ್ಕಾರ ಸುರಿಸುವುದೇ ಹೆಲಿಕಾಪ್ಟರ್​ನಲ್ಲಿ ಹಣ…!?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts