More

    ಹಳಿಗಳ ಮೇಲೆ ಮಲಗಿದ್ದ ವಲಸೆ ಕಾರ್ಮಿಕರ ಮೇಲೆ ಹರಿದ ಗೂಡ್ಸ್​ ರೈಲು: 15 ಮಂದಿ ದುರ್ಮರಣ

    ಮುಂಬೈ: ಆಂಧ್ರ ಪ್ರದೇಶದ ವಿಶಾಖಪಟ್ಟಣಂದಲ್ಲಿ ನಡೆದ ವಿಷಾನಿಲ ದುರಂತ ಮಾಸುವ ಮುನ್ನವೇ ದೇಶದಲ್ಲಿ ಮತ್ತೊಂದು ಘನ ಘೋರ ದುರಂತ ನಡೆದಿದೆ. ಮಹಾರಾಷ್ಟ್ರದಲ್ಲಿ ಭೀಕರ ರೈಲು ಅಪಘಾತ ಸಂಭವಿಸಿ 15 ಮಂದಿ ವಲಸೆ ಕಾರ್ಮಿಕರು ಸಾವಿಗೀಡಾಗಿದ್ದಾರೆ.

    ಇಂದು (ಶುಕ್ರವಾರ) ಬೆಳಗ್ಗೆ ಔರಂಗಬಾದ್​​ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಮಧ್ಯಪ್ರದೇಶಕ್ಕೆ ತೆರಳುತ್ತಿದ್ದ ವಲಸೆ ಕಾರ್ಮಿಕರ ಮೇಲೆ ಕಾರ್ಗೋ ಗೂಡ್ಸ್​ ರೈಲು ಹರಿದು ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: VIDEO| ಭಾರತದಲ್ಲಿ ಪತ್ತೆಯಾಯ್ತು ಎರಡು ತಲೆ: ಇದರ ವಿಶೇಷತೆ ಕೇಳಿದ್ರೆ ಅಚ್ಚರಿಗೊಳ್ತಿರಾ…!

    ರೈಲು ಹಳಿಗಳ ಮೇಲೆ ನಡೆದು ಹೋಗುತ್ತಿದ್ದ ಕಾರ್ಮಿಕರು ಮಹಾರಾಷ್ಟ್ರದ ಕಾರ್ಮಾಡ್​ ಬಳಿ ರೈಲು ಹಳಿಗಳ ಮೇಲೆ ಮಲಗಿದ್ದರು. ಇಂದು ಬೆಳಗ್ಗೆ 5:15ರ ಸುಮಾರಿಗೆ ಮಲಗಿದ್ದವರ ಮೇಲೆ ರೈಲು ಹರಿದಿದೆ. ಘಟನೆ ನಡೆದ ಸ್ಥಳಕ್ಕೂ ಮುಂಬೈಗೂ 360 ಕಿ.ಮೀ ಅಂತರವಿದೆ.

    ವಲಸೆ ಕಾರ್ಮಿಕರಲ್ಲಿ ತುಂಬಾ ತುರ್ತಿನ ಅವಶ್ಯ ಇರುವವರಿಗಾಗಿಯೇ ಅನೇಕ ರಾಜ್ಯಗಳು ವಿಶೇಷ ಶ್ರಮಿಕ್​ ಎಕ್ಸ್​ಪ್ರೆಸ್ ರೈಲಿನ ಮೂಲಕ ತವರಿಗೆ ಕರೆಸಿಕೊಳ್ಳುತ್ತಿವೆ.​ ಆದರೆ, ಕೆಲವರು ಕಾಲ್ನಡಿಗೆಯಲ್ಲೇ ತವರಿಗೆ ಮರಳುವ ನಿರ್ಧಾರ ಮಾಡಿ ಅನೇಕ ದಿನಗಳಿಂದ ನಡೆದುಕೊಂಡೇ ಸಾಗುತ್ತಿದ್ದಾರೆ.

    ಇದನ್ನೂ ಓದಿ: ಸಕ್ಕರೆ ನಾಡಿನ ಜನರೇ ಹುಷಾರು… ಇಲ್ಲದಿದ್ರೆ ಬೆಲೆ ತೆರಬೇಕಾದೀತು…!

    ಇನ್ನು ಘಟನಾ ಸ್ಥಳಕ್ಕೆ ರೈಲ್ವೆ ರಕ್ಷಣಾ ಪಡೆ ಮತ್ತು ಪೊಲೀಸ್​ ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿದೆ ಎಂದು ಸೌಥ್​ ಸೆಂಟ್ರಲ್​ ರೈಲ್ವೆಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ. (ಏಜೆನ್ಸೀಸ್​)

    ಸಾ.ರಾ. ಗೋವಿಂದುಗೆ ನಿಂದಿಸಿದ ಆರೋಪ: ನಟ ಜೈಜಗದೀಶ್​ ನೀಡಿದ ಸ್ಪಷ್ಟನೆ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts