More

    ಎಂಟು ಗಂಟೆ ಆಟೋ ಓಡಿಸಿ ಮಹಿಳೆಯೊಬ್ಬರ ನೆರವಿಗೆ ಧಾವಿಸಿದ ಚಾಲಕಿ ಕಥೆಯಿದು…

    ಇಂಫಾಲ್‌: ಕರೊನಾ ವೈರಸ್‌ನಿಂದ ಗುಣಮುಖರಾದ ಮಹಿಳೆಯೊಬ್ಬರನ್ನು ಮನೆಗೆ ತಲುಪಿಸಲು ಯಾರೂ ತಯಾರಿಲ್ಲದ ಸಮಯದಲ್ಲಿ, ಆ ಮಹಿಳೆಯ ತನ್ನದೇ ಆಟೋದಲ್ಲಿ ಮನೆ ತಲುಪಿಸುವ ಮೂಲಕ ಮಾನವೀಯತೆ ಮೆರೆದ ಲೈಬಿ ಓನಮ್ ಅವರ ಕಥೆಯಿದು.

    ಅಷ್ಟಕ್ಕೂ 52 ವರ್ಷದ ಲೈಬಿ ಮಾಡಿರುವ ಕಾರ್ಯ ಅಂತಿಂಥದ್ದಲ್ಲ. ಪರಿಚಯವೇ ಇಲ್ಲದ ಮಹಿಳೆಯ ನೆರವಿಗೆ ಧಾವಿಸಿ 140 ಕಿ.ಮೀ ದೂರದಲ್ಲಿರುವ ಆಕೆಯ ಮನೆಯನ್ನು ಎಂಟು ಗಂಟೆ ಸತತ ಆಟೋ ಓಡಿಸುವ ಮೂಲಕ ತಲುಪಿಸಿರುವ ಅಪರೂಪದ ಸಾಹಸ ಮಾಡಿದ್ದಾರೆ.

    ಈ ಮಹಿಳೆ ಇದೀಗ ಮಣಿಪುರದ ಮುಖ್ಯಮಂತ್ರಿ ಎನ್ ಬಿರೆನ್ ಸಿಂಗ್‌ ಗಮನವನ್ನೂ ಸೆಳೆದಿದ್ದು, ಅವರೀಗ ಮಹಿಳೆಗೆ 1.10ಲಕ್ಷ ರೂಪಾಯಿಗಳ ಚೆಕ್‌ ನೀಡಿದ್ದಾರೆ, ಜತೆಗೆ ಮಣಿಪುರಿ ಮಫ್ಲರ್‌ ಅನ್ನೂ ನೀಡಿ ಗೌರವಿಸಿದ್ದಾರೆ.

    ಖುದ್ದು ಮುಖ್ಯಮಂತ್ರಿಗಳೇ ತಮ್ಮನ್ನು ಗೌರವಿಸುತ್ತಿರುವ ಬಗ್ಗೆ ತೀರಾ ಅಚ್ಚರಿ ಹಾಗೂ ಸಂತೋಷ ವ್ಯಕ್ತಪಡಿಸಿರುವ ಲೈಬಿ, “ನಾನು ನನ್ನ ಕೆಲಸವನ್ನು ಮಾಡಿದ್ದೇನೆ ಅಷ್ಟೇ, ಖುದ್ದು ಮುಖ್ಯಮಂತ್ರಿಗಳೇ ನನ್ನನ್ನು ಗೌರವಿಸುತ್ತಾರೆ ಎಂದು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ’ ಎಂದು ಹೆಮ್ಮೆ ಪಟ್ಟುಕೊಂಡಿದ್ದಾರೆ.
    ಈ ಕಥೆ ಶುರುವಾಗುವುದು ಕರೊನಾ ವೈರಸ್‌ನಿಂದ ಚೇತರಿಕೊಂಡಿರುವ ಮಹಿಳೆಯೊಬ್ಬರಿಂದ. ಆಸ್ಪತ್ರೆಯಿಂದ ಬಿಡುಗಡೆಗೊಂಡ ಆ ಮಹಿಳೆಯ ಮನೆ 140 ಕಿ.ಮೀ ದೂರ ಇರುವ ಬೇರೆ ಜಿಲ್ಲೆಯಲ್ಲಿ ಇತ್ತು. ಆದ್ದರಿಂದ ಆಕೆಗೆ ಆಂಬ್ಯುಲೆನ್ಸ್‌ನಲ್ಲಿ ಕರೆದುಕೊಂಡು ಹೋಗಲು ಸಾಧ್ಯವಿಲ್ಲ ಎಂದಿದ್ದರು ಆಸ್ಪತ್ರೆ ಸಿಬ್ಬಂದಿ. ಆದರೆ ಆ ಮಹಿಳೆಗೆ ಮನೆಗೆ ಹೋಗಲು ಯಾವುದೇ ವ್ಯವಸ್ಥೆ ಇರಲಿಲ್ಲ.

    ಇದನ್ನೂ ಓದಿ: ಮಡಿಕೇರಿ ಸೌಂದರ್ಯ ಸವಿಯೋ ಪ್ಲ್ಯಾನ್‌ ಇದ್ಯಾ? ಹಾಗಿದ್ರೆ ಇದನ್ನೊಮ್ಮೆ ಓದಿ…

    ಏನು ಮಾಡುವುದು ಎಂದು ಮಹಿಳೆ ಆತಂಕದಲ್ಲಿದ್ದರು. ಅದೇ ವೇಳೆ, ಕೋಲ್ಕತಾದಿಂದ ಮರಳುತ್ತಿದ್ದ ಆಟೋ ಚಾಲಕಿ ಲೈಬಿ ಒನಮ್ ಅವರಿಗೆ ಈ ವಿಷಯ ತಿಳಿಯಿತು. ತಡ ಮಾಡದ ಅವರು, ಆಸ್ಪತ್ರೆಗೆ ಧಾವಿಸಿ ಮಹಿಳೆಯನ್ನು ಕರೆದುಕೊಂಡು ಮನೆಯನ್ನು ತಲುಪಿಸಿದ್ದಾರೆ.

    ಮೇ 31ರ ಮಧ್ಯರಾತ್ರಿಯಿಂದ ಜೂನ್ 1ರ ತನಕ ಸುಮಾರು ಎಂಟು ಗಂಟೆಗಳ ಕಾಲ ಆಟೋ ಚಲಾಯಿಸಿ ಮಹಿಳೆಯನ್ನು ಬಿಟ್ಟುಬಂದಿದ್ದಾರೆ.
    ಈ ವಿಷಯ ಎಲ್ಲರಿಗೂ ತಿಳಿಯುತ್ತದ್ದಂತೆಯೇ ಶ್ಲಾಘನೆಗಳ ಮಹಾಪೂರವೇ ಹರಿದುಬಂತು. ಇದೀಗ ವಿಷಯ ಮುಖ್ಯಮಂತ್ರಿಯವರೆಗೂ ತಲುಪಿ ಲೈಬಿಯನ್ನು ಸನ್ಮಾನಿಸಿದ್ದಾರೆ.

    ಇಬ್ಬರು ಮಕ್ಕಳ ತಾಯಿಯಾಗಿರುವ ಲೈಬಿ ಒನಮ್ ಆಟೋ ಓಡಿಸಿಯೇ ತಮ್ಮ ಕುಟುಂಬ ನಿರ್ವಹಣೆ ಮಾಡುತ್ತಿದ್ದು, ಇವರ ಜೀವನ ಆಧರಿತ ಸಾಕ್ಷ್ಯಚಿತ್ರ 2015ರಲ್ಲಿ ಬಿಡುಗಡೆಯಾಗಿತ್ತು. ‘ಆಟೋ ಡ್ರೈವರ್’ ಎಂಬ ಶೀರ್ಷಿಕೆಯೊಂದಿಗೆ 63 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ `ಉತ್ತಮ ಸಾಮಾಜಿಕ ಕಳಕಳಿಯ ಚಿತ್ರ’ ಸೇರಿದಂತೆ ಹಲವು ಪ್ರಶಸ್ತಿಗೆ ಇದು ಭಾಜನ ಕೂಡ ಆಗಿತ್ತು. `ವುಮೆನ್ಸ್‌ ವಾಯ್ಸ್‌’ ಎಂಬ ಸಮಾರಂಭದಲ್ಲಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿಯನ್ನೂ ಇದು ಪಡೆದಿದೆ.

    30 ಕೆ.ಜಿ ಚಿನ್ನ ಕಳ್ಳಸಾಗಣೆ ಹಿಂದೆ ಇದ್ದದ್ದು ಈ ಪ್ರಭಾವಿ ಮಹಿಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts