More

    ತಾಯಿಯ ಆಯಾಸ ತಪ್ಪಿಸಲು ಏಕಾಂಗಿಯಾಗಿ ಬಾವಿ ಕೊರೆದು ನೀರು ತಂದ 14 ವರ್ಷದ ಮಗ!

    ನವದೆಹಲಿ: ತಾಯಿ ತನ್ನ ಮಕ್ಕಳಿಗಾಗಿ ಏನನ್ನು ಮಾಡಲು ಸಿದ್ಧಳಾಗಿರುತ್ತಾಳೆ. ಮಕ್ಕಳಿಗೆ ನೋವು ಎಂದರೆ ಮೊದಲು ಮಿಡಿಯುವ ಹೃದಯವೇ ತಾಯಿ. ಆದರೆ ಇಲ್ಲೊಬ್ಬ ಮಗ ತನ್ನ ತಾಯಿಯ ಕಷ್ಟವನ್ನು ನೋಡಲಾರದೆ ಒಂದು ಮಹತ್ತರವಾದ ಕೆಲಸನ್ನು ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.

    ಮುಂಬೈನಿಂದ ಸುಮಾರು 128 ಕಿಮೀ ದೂರದಲ್ಲಿರುವ ಒಮದು ಊರಿನಲ್ಲಿ, ಮನೆಗೆ ನೀರು ತರಲು ಬಾಲಕನ ತಾಯಿ ಬಿಸಿಲಿನಲ್ಲಿ ನಡೆದುಕೊಂಡು ಹೋಗುತ್ತಿದ್ದಳು. ಹೆತ್ತವಳ ಕಷ್ಟವನ್ನು ನೋಡುತ್ತಿದ್ದ ಬಾಲಕ ತಮ್ಮ ಗುಡಿಸಲ ಪಕ್ಕದ ಜಾಗದಲ್ಲಿಯೇ ಒಂದು ಬಾವಿಯನ್ನು ತೆಗೆದಿದ್ದಾನೆ. 14 ವರ್ಷದ ಪ್ರಣವ್ ರಮೇಶ್ ಸಾಲ್ಕರ್ ತನ್ನ ಅಂಗಳದ ಮಧ್ಯದಲ್ಲಿ ಬಾವಿಯನ್ನು ಅಗೆಯಲು ಪ್ರಾರಂಭಿಸಿದನು. ಪ್ರಣವ್ 15 ನಿಮಿಷಗಳ ಊಟದ ವಿರಾಮದೊಂದಿಗೆ ದಿನವಿಡೀ ಬಾವಿಯನ್ನು ತೊಡುತ್ತಾನೆ.

    ಇದನ್ನೂ ಓದಿ: ವಾತಾವರಣದ ವಿಚಿತ್ರ ಆಟ; ಈ ಬಾರಿ ಬೆಂಗಳೂರಲ್ಲಿ ಗಾಳಿ ಮಳೆಗೆ ಮರಗಳು ಉರುಳಿದ್ದು ಯಾಕೆ ಗೊತ್ತಾ?

    ಆರಂಭದಲ್ಲಿ ಕಲ್ಲುಗಳನ್ನು ತೆರವುಗೊಳಿಸಲು ಬಾಲಕನಿಗೆ ಅವನ ತಂದೆ ಸಹಾಯ ಮಾಡಿದ್ದರು. ನಂತರ ಬಾಲಕ ಮಣ್ಣನ್ನು ಅಗೆಯುತ್ತಾ ಹೋದನು.ಹೀಗೆ 20 ಅಡಿ ಆಳಕ್ಕೆ ನೀರು ಕೂಡಾ ದೊರಕಿದೆ. ಒಂದು ದಿನ ಭೂಮಿಯಿಂದ ನೀರು ಹೋರಬರುತ್ತಿರುವುದನ್ನು ನೋಡಿ ಸಂತೋಷವಾಗಿದೆ.

    ಈ ಕುರಿತಾಗಿ ಮಾತನಾಡಿದ ಬಾಲಕ,” ನಾನು ಆದರ್ಶ ವಿದ್ಯಾ ಮಂದಿರಲ್ಲಿ 9ನೇ ತರಗತಿ ವಿದ್ಯಾರ್ಥಿಯಾಗಿದ್ದೇನೆ. ನನ್ನ ತಾಯಿ ದೂರ ಇರುವ ನದಿಯಿಂದ ಪ್ರತಿನಿತ್ಯ ನೀರು ತರುವುದು ಇಷ್ಟವಾಗುತ್ತಿರಲಿಲ್ಲ. ಪ್ರತಿದಿನ ಬೆಳಿಗ್ಗೆ ಅಡುಗೆ ಮತ್ತು ಇತರ ಮನೆ ಕೆಲಸ ಪ್ರಾರಂಭಿಸುವ ಮೊದಲು ಮನೆಗೆ ಬಕೆಟ್​​ನಲ್ಲಿ ನೀರು ತರುತ್ತಿದ್ದರು. ಅವರಿಗೆ ಇದು ಕಷ್ಟವಾಗುತ್ತಿತ್ತು. ಹೀಗಾಗಿ ನಾನು ಬಾವಿ ತೊಡುವ ಯೋಚನೆ ಮಾಡಿದೆ” ಎಂದು ಹೇಳಿಕೊಂಡಿದ್ದಾನೆ.

    ಪ್ರಣವ್​ ತಾಯಿ ಮಾತನಾಡಿ, ನೀರಿನ ಸಮಸ್ಯಗೆ ಪರಿಹಾರ ಸಿಕ್ಕಿದೆ. ಬಿಸಿಲಿನಲ್ಲಿ ದಿನವೂ ನಡೆದಾಡ ಬೇಕಾಗಿತ್ತು. ಈಗ ಸಮಾಧಾನವಾಗಿದೆ ಎಂದು ಹೇಳಿದ್ದಾರೆ.

    VIDEO| 75 ವರ್ಷಗಳ ನಂತರ ಭೇಟಿಯಾದ ಒಡಹುಟ್ಟಿದವರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts