More

    ಕೋವಿಡ್​-19ಗೆ ಸಂಭಾವ್ಯ ಚಿಕಿತ್ಸೆ; 25 ಸಾವಿರ ಡಾಲರ್​ ಗೆದ್ದ ಭಾರತೀಯ ಮೂಲದ ವಿದ್ಯಾರ್ಥಿನಿ

    ವಿಜಯವಾಡ: ಕೊವಿಡ್​-19 ಸೋಂಕಿಗೆ ಸಂಭಾವ್ಯ ಚಿಕಿತ್ಸೆಯ ಪ್ರಕ್ರಿಯೆಯನ್ನು ಅಭಿವೃದ್ಧಿಪಡಿಸುವ ಮೂಲಕ ಭಾರತೀಯ ಮೂಲದ ಅಮೆರಿಕಾದ 14 ವರ್ಷದ ವಿದ್ಯಾರ್ಥಿನಿ ಅನಿಕಾ ಚೆಬ್ರೊಲು ‘2020ರ 3 ಎಂ ಯಂಗ್​ ಚಾಲೆಂಜ್​’ ನ್ನು ಗೆದ್ದಿದ್ದಾರೆ. ಮೂಲತಃ ಆಂಧ್ರಪ್ರದೇಶದ ಗುಂಟೂರಿನವರಾದ ಅನಿಕಾ, ಟೆಕ್ಸಾಸ್​​ನ ಫ್ರಿಸ್ಕೋದಲ್ಲಿ ನೆಲೆಸಿದ್ದಾರೆ.

    ಜಗತ್ತಿನಾದ್ಯಂತ ಅನೇಕ ವಿಜ್ಞಾನಿಗಳು ಕರೊನಾಕ್ಕೆ ಲಸಿಕೆ, ಔಷಧ ಕಂಡು ಹಿಡಿಯಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದರೂ ಇದುವರೆಗೂ ಯಾವೊಂದು ಫಲಿತಾಂಶವೂ ಬರಲಿಲ್ಲ. ಹೀಗಿರುವಾಗ 14ವರ್ಷದ ಬಾಲಕಿ ಸಂಭಾವ್ಯ ಚಿಕಿತ್ಸೆಯನ್ನು ಅಭಿವೃದ್ಧಿಪಡಿಸುವ ಮೂಲಕ 25,000 ಡಾಲರ್​ ಗೆದ್ದಿದ್ದು ಅಮೋಘ ಸಾಧನೆಯಾಗಿದೆ. ಇದನ್ನೂ ಓದಿ: ವೈಯಕ್ತಿಕ ನೋವಿನ ನಡುವೆ ಐಪಿಎಲ್‌ನಲ್ಲಿ ಮಿಂಚುತ್ತಿದ್ದಾರೆ ಕ್ರಿಕೆಟಿಗರು!

    ‘3ಎಂ’ ತನ್ನ ವೆಬ್​ಸೈಟ್​​​ನಲ್ಲಿ ಅನಿಕಾಳ ಸಾಧನೆಗಳನ್ನು ವಿವರಿಸಿದೆ. ಅನಿಕಾಳೊಂದಿಗೆ ಈ ಸ್ಪರ್ಧೆಯಲ್ಲಿ ಸಂಹಿತಾ ಪೊಕ್ಕುನುರಿ, ಹರ್ಷಾ ಪಿಲ್ಲಾರಿಸೆಟ್ಟಿ ಮತ್ತು ಸಮ್ವ್ರಿತ್​ ರಾವ್​ ಎಂಬುವರೂ ಪಾಲ್ಗೊಂಡು, ಅವರೂ ಕೂಡ ಗಮನಾರ್ಹ ಸಾಧನೆ ಮಾಡಿದ್ದಾರೆ ಎಂದು ಉಲ್ಲೇಖವಾಗಿದೆ. ಕೊವಿಡ್​-19 ನಿವಾರಣಾ ಔಷಧಿ ಕಂಡುಹಿಡಿಯಲು ಅನಿಕಾ ಇನ್​-ಸಿಲಿಕಾ ವಿಧಾನವನ್ನು ಬಳಸಿಕೊಂಡಿದ್ದಾರೆ ಎಂದು ವೆಬ್​​ಸೈಟ್​​ನಲ್ಲಿ ಹೇಳಲಾಗಿದೆ. (ಏಜೆನ್ಸೀಸ್​)

    ಬಾಡಿಗೆ ಪಾವತಿ ವಿಚಾರ: ಕೇಂದ್ರ ಸಚಿವ ಪೋಖ್ರಿಯಾಲ್​ ವಿರುದ್ಧದ ನ್ಯಾಯಾಂಗ ನಿಂದನೆಗೆ ಸುಪ್ರೀಂ ತಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts