More

    ಸೆ. 19ರಿಂದ ಯುಎಇಯಲ್ಲಿ ಐಪಿಎಲ್ ಭಾಗ-2; ಮುಂಬೈ-ಸಿಎಸ್‌ಕೆ ಮೊದಲ ಕಾದಾಟ

    ನವದೆಹಲಿ: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಯುಎಇಯಲ್ಲಿ ನಡೆಯಲಿರುವ ಐಪಿಎಲ್ 14ನೇ ಆವೃತ್ತಿಯ ಭಾಗ-2ರ ಮೊದಲ ಹಣಾಹಣಿಯಲ್ಲಿ ಮುಖಾಮುಖಿಯಾಗಲಿವೆ. ಕೋವಿಡ್-19ರಿಂದಾಗಿ ಮುಂದೂಡಲ್ಪಟ್ಟಿದ ಐಪಿಎಲ್ 14ನೇ ಆವೃತ್ತಿಯ ಉಳಿದ 31 ಪಂದ್ಯಗಳ ವೇಳಾಪಟ್ಟಿಯನ್ನು ಬಿಸಿಸಿಐ ಭಾನುವಾರ ಪ್ರಕಟಿಸಿದೆ. ಕಳೆದ ಮೇ ತಿಂಗಳಲ್ಲಿ ಬಯೋಬಬಲ್ ವ್ಯಾಪ್ತಿಯಲ್ಲೇ ಕೋವಿಡ್ ವೈರಸ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿವರೆಗೆ ಲೀಗ್ ಮುಂದೂಡಲಾಗಿತ್ತು. ಒಟ್ಟಾರೆ 60 ಪಂದ್ಯಗಳ ಪೈಕಿ 29 ಪಂದ್ಯಗಳಷ್ಟೇ ನಡೆದಿದ್ದವು.

    ಇದನ್ನೂ ಓದಿ: ಟೋಕಿಯೊ ಒಲಿಂಪಿಕ್ಸ್: ಭಾರತ ಹಾಕಿ ತಂಡಕ್ಕೆ ಆಸ್ಟ್ರೇಲಿಯಾ ಎದುರು ಹೀನಾಯ ಸೋಲು, 

    ಅರಬ್ ನಾಡಿನಲ್ಲಿ 7 ಡಬಲ್ ಹೆಡರ್‌ಗಳು (ಒಂದೇ ದಿನ 2 ಪಂದ್ಯ) ನಡೆಯಲಿದ್ದು, 27 ದಿನಗಳ ಅಂತರದಲ್ಲಿ 31 ಪಂದ್ಯಗಳು ನಡೆಯಲಿವೆ. ದುಬೈನಲ್ಲಿ 13, ಶಾರ್ಜಾದಲ್ಲಿ 10 ಮತ್ತು ಅಬುಧಾಬಿಯಲ್ಲಿ 8 ಪಂದ್ಯಗಳು ನಡೆಯಲಿವೆ. ಈ ಮುನ್ನ ಭಾರತದಲ್ಲಿ 5 ಡಬಲ್ ಹೆಡರ್ ನಡೆದಿದ್ದವು. ಇದರಿಂದ 14ನೇ ಆವೃತ್ತಿಯಲ್ಲಿ ಒಟ್ಟು 12 ಡಬಲ್ ಹೆಡರ್‌ಗಳು ನಡೆಯಲಿವೆ. ಡಬಲ್ ಹೆಡರ್‌ನಲ್ಲಿ ಮೊದಲ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 3.30ಕ್ಕೆ (ಯುಎಇ ಕಾಲಮಾನ ಪ್ರಕಾರ ಮಧ್ಯಾಹ್ನ 2) ಆರಂಭಗೊಂಡರೆ, ಉಳಿದ ಪಂದ್ಯಗಳು ರಾತ್ರಿ 7.30ಕ್ಕೆ (ಸ್ಥಳೀಯ ಕಾಲಮಾನ ಸಂಜೆ 6) ನಡೆಯಲಿವೆ.

    ಇದನ್ನೂ ಓದಿ: 43 ಎಸೆತಗಳಲ್ಲಿ 93 ರನ್ ಸಿಡಿಸಿದ ಭಾರತದ ಜೆಮೀಮಾ ರೋಡ್ರಿಗಸ್

    ಆರ್‌ಸಿಬಿ ತಂಡ ಸೆಪ್ಟೆಂಬರ್ 20ರಂದು ಅಬುಧಾಬಿಯಲ್ಲಿ ಕೆಕೆಆರ್ ವಿರುದ್ಧ ಆಡುವ ಮೂಲಕ ಟೂರ್ನಿಯಲ್ಲಿ ಪುನರಾರಂಭ ಕಾಣಲಿದೆ. ಆರ್‌ಸಿಬಿ-ಡೆಲ್ಲಿ ತಂಡಗಳು ಅಕ್ಟೋಬರ್ 8ರಂದು ಅಂತಿಮ ಲೀಗ್ ಪಂದ್ಯದಲ್ಲಿ ಎದುರಾಗಲಿವೆ. ಮೊದಲ ಕ್ವಾಲಿಫೈಯರ್ ಪಂದ್ಯ ದುಬೈನಲ್ಲಿ ಅ.10ರಂದು ನಡೆದರೆ, ಶಾರ್ಜಾದಲ್ಲಿ ಅಕ್ಟೋಬರ್ 11 ಮತ್ತು 13ರಂದು ಕ್ರಮವಾಗಿ ಎಲಿಮಿನೇಟರ್ ಹಾಗೂ 2ನೇ ಕ್ವಾಲಿಫೈಯರ್ ಪಂದ್ಯಗಳು ನಡೆಯಲಿವೆ. ಅಕ್ಟೋಬರ್ 15ರಂದು ದುಬೈನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಯುಎಇ ಸರ್ಕಾರದ ಮಾರ್ಗಸೂಚಿಯಂತೆ ಟೂರ್ನಿ ನಡೆಯಲಿದ್ದು, ಖಾಲಿ ಸ್ಟೇಡಿಯಂನಲ್ಲಿ ಪಂದ್ಯ ಸಾಗಲಿವೆ. 2020ರ ಆವೃತ್ತಿಯ ಸಂಪೂರ್ಣವಾಗಿ ಯುಎಇಯಲ್ಲೇ ನಡೆದಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts