More

    ತೊಕ್ಕೊಟ್ಟು ಮೇಲ್ಸೇತುವೆ ಬಳಿ 110 ಅಡಿ ಎತ್ತರದಲ್ಲಿ ಹಾರಾಡಲಿದೆ ಬೃಹತ್ ತಿರಂಗಾ!

    ಉಳ್ಳಾಲ: ಉಳ್ಳಾಲದ ಹೆಬ್ಬಾಗಿಲು ಎನಿಸಿರುವ ತೊಕ್ಕೊಟ್ಟು ಮೇಲ್ಸೇತುವೆ ಬಳಿ 110 ಅಡಿ ಎತ್ತರದ ಕಂಬದಲ್ಲಿ 24 ಗಂಟೆಯೂ ರಾಷ್ಟ್ರಧ್ವಜ ಹಾರಲಿದ್ದು, ಇದಕ್ಕಾಗಿ ಎಲ್ಲ ಸಿದ್ಧತೆ ಮುಗಿಸಲಾಗಿದೆ.

    ತೊಕ್ಕೊಟ್ಟು ಮೇಲ್ಸೇತುವೆಯಿಂದ ಉಳ್ಳಾಲ ಪ್ರವೇಶ ದ್ವಾರದಲ್ಲೇ ಧ್ವಜ ಹಾರಾಡಲಿದೆ. 110 ಅಡಿ ಎತ್ತರದ ಕಬ್ಬಿಣ, ತಾಮ್ರ ಮಿಶ್ರಿತ ಕಂಬ ನಿರ್ಮಿಸಲಾಗಿದೆ. ರಾಷ್ಟ್ರಧ್ವಜ 30 ಅಡಿ ಉದ್ದ, 20 ಅಡಿ ಅಗಲ ಇರಲಿದೆ. ಇದಕ್ಕೆ 17.50 ಲಕ್ಷ ರೂ. ಖರ್ಚಾಗಿದೆ.

    ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ದಾಖಲೆ ಎತ್ತರದಲ್ಲಿ ರಾಷ್ಟ್ರಧ್ವಜ ಮೆರೆದಾಡಲಿದ್ದು, ಪ್ರವಾಸಿಗರಿಗೆ ಉಳ್ಳಾಲದ ಹೆಬ್ಬಾಗಿಲು ಪ್ರವೇಶದ ಮಾಹಿತಿ ನೀಡಲಿದೆ. ಮಂಗಳೂರು ವಿಶ್ವವಿದ್ಯಾಲಯಕ್ಕೆ ಹೋಗುವ ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಶ್ರೀನಿವಾಸ ಮಲ್ಯ ಪ್ರತಿಮೆ ಮತ್ತು ಧ್ವಜಸ್ತಂಭ ನಿರ್ಮಾಣವಾಗಲಿದೆ ಎಂದು ಶಾಸಕ ಖಾದರ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts