More

    10330% ಬೃಹತ್ ಲಾಭ ನೀಡಿದ ಸ್ಮಾಲ್​ ಕ್ಯಾಪ್​ ಕಂಪನಿ ಷೇರು: 6 ಬೋನಸ್ ಸ್ಟಾಕ್​ ನೀಡುವುದಾಗಿ ಘೋಷಿಸುತ್ತಿದ್ದಂತೆಯೇ ಷೇರಿಗೆ ಡಿಮ್ಯಾಂಡು

    ಮುಂಬೈ: ಗಾರ್ಮೆಂಟ್ಸ್ ಮತ್ತು ಅಪ್ಯಾರಲ್ಸ್ ಉದ್ಯಮದೊಂದಿಗೆ ಸಂಬಂಧ ಹೊಂದಿರುವ ಕಂಪನಿಯಾದ ಲೊರೆಂಜಿನಿ ಅಪರಲ್ಸ್ ಲಿಮಿಟೆಡ್​ (Lorenzini Apparels Ltd) ಪ್ರಮುಖ ಪ್ರಕಟಣೆ ಮಾಡಿದೆ.

    ಈ ಕಂಪನಿಯು ಹೂಡಿಕೆದಾರರಿಗೆ ಬೋನಸ್ ಷೇರುಗಳನ್ನು ನೀಡುವುದಾಗಿ ಘೋಷಿಸಿದೆ. ಲೊರೆಂಜಿನಿ ಅಪರಲ್ಸ್ 6:11 ಅನುಪಾತದಲ್ಲಿ ಬೋನಸ್ ಷೇರುಗಳನ್ನು ನೀಡುವುದಾಗಿ ಘೋಷಿಸಿದೆ. ಇದರರ್ಥ ಕಂಪನಿಯು ಪ್ರತಿ 11 ಷೇರುಗಳಿಗೆ 6 ಷೇರುಗಳ ಬೋನಸ್ ಷೇರುಗಳನ್ನು ಹೂಡಿಕೆದಾರರಿಗೆ ನೀಡುತ್ತದೆ.

    ಬೋನಸ್​ ಷೇರು ಘೋಷಣೆ ಮಾಡುತ್ತಿದ್ದಂತೆಯೇ ಬುಧವಾರ ಇಂಟ್ರಾ ಡೇ ವಹಿವಾಟಿನಲ್ಲಿ ಈ ಕಂಪನಿಯ ಷೇರುಗಳ ಬೆಲೆ ಶೇ. 2ರಷ್ಟು ಹೆಚ್ಚಳವಾಗಿ 435 ರೂ. ತಲುಪಿದವು.

    ಇದಲ್ಲದೆ, ಕಂಪನಿಯು ಈ ಷೇರುಗಳನ್ನು ಹೇಗೆ ವಿತರಿಸಲಿದೆ ಎಂಬುದನ್ನು ಘೋಷಿಸಿದೆ. ಕಂಪನಿಯು 10 ರೂಪಾಯಿಗಳ ಮುಖಬೆಲೆಯ ಷೇರುಗಳನ್ನು 1 ರೂಪಾಯಿ ಮುಖಬೆಲೆಯ ಷೇರುಗಳಾಗಿ ಒಡೆಯುತ್ತದೆ.

    ಲೊರೆಂಜಿನಿ ಅಪರಲ್ಸ್ ಬೋನಸ್ ಷೇರುಗಳು ಅಥವಾ ಸ್ಟಾಕ್ ವಿಭಜನೆಯ ದಾಖಲೆ ದಿನಾಂಕವನ್ನು ಇನ್ನೂ ಬಹಿರಂಗಪಡಿಸಿಲ್ಲ.

    ಈ ಸ್ಮಾಲ್-ಕ್ಯಾಪ್ ಕಂಪನಿಯಲ್ಲಿ ಪ್ರವರ್ತಕರ ಷೇರುಗಳು ಶೇಕಡಾ 62.91ರಷ್ಟು ಇದೆ.

    ಕಳೆದ 4 ವರ್ಷಗಳಲ್ಲಿ ಈ ಸ್ಟಾಕ್ ಗಮನಾರ್ಹ ಏರಿಕೆ ಕಂಡಿದೆ. ಕಳೆದ 4 ನಾಲ್ಕು ವರ್ಷಗಳಲ್ಲಿ ಅದರ ಷೇರುಗಳ ಬೆಲೆ 10,330 ಪ್ರತಿಶತದಷ್ಟು ಬೆಳೆದಿದೆ. ಕಳೆದ ವರ್ಷದಲ್ಲಿ, ಈ ಕಂಪನಿಯ ಷೇರುಗಳ ಬೆಲೆ 259 ಪ್ರತಿಶತದಷ್ಟು ಹೆಚ್ಚಾಗಿದೆ. ಈ ಕಂಪನಿಯ ಷೇರುಗಳ 52 ವಾರಗಳ ಗರಿಷ್ಠ ಬೆಲೆ 475 ರೂ. ಹಾಗೂ ಕನಿಷ್ಠ ಬೆಲೆ 103.55 ರೂ. ಇದೆ.

    ಈ ಕಂಪನಿಯು ವಿನ್ಯಾಸ, ಮಾರ್ಕೆಟಿಂಗ್ ಮತ್ತು ಸಿದ್ಧ ಉಡುಪುಗಳ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದೆ. ಕಂಪನಿಯು ಮಹಿಳೆಯರು ಮತ್ತು ಪುರುಷರಿಗಾಗಿ ಔಪಚಾರಿಕ, ಅರೆ-ಔಪಚಾರಿಕ ಮತ್ತು ಕ್ಯಾಶುಯಲ್ ಉಡುಪುಗಳನ್ನು ಒದಗಿಸುತ್ತದೆ. ಕಂಪನಿಯು ನೀಡುವ ಉತ್ಪನ್ನಗಳು ಜೀನ್ಸ್, ಡ್ರೆಸ್‌ಗಳು, ಜೆಗ್ಗಿಂಗ್‌ಗಳು, ಟ್ರೌಸರ್‌ಗಳು, ಶಾರ್ಟ್ಸ್, ಕ್ಯಾಪ್ರಿಸ್, ಸ್ಕರ್ಟ್‌ಗಳು ಮತ್ತು ಶರ್ಟ್‌ಗಳು, ಹಾಗೆಯೇ ಟೀ ಶರ್ಟ್‌ಗಳು, ಟಾಪ್‌ಗಳು, ಸ್ವೆಟ್‌ಶರ್ಟ್‌ಗಳು, ಜಾಕೆಟ್‌ಗಳು, ಕೋಟ್‌ಗಳು ಮತ್ತು ಸ್ವೆಟರ್‌ಗಳು ಆಗಿವೆ. ಕಂಪನಿಯ ಔಟ್‌ಲೆಟ್‌ಗಳು ಉತ್ತರ ಪ್ರದೇಶ, ದೆಹಲಿ ಮತ್ತು ಹರಿಯಾಣದಲ್ಲಿವೆ. ಕಂಪನಿಯ ಒಟ್ಟು ಆದಾಯ 43.76 ಕೋಟಿ ರೂ. ಮತ್ತು ಈಕ್ವಿಟಿ ಬಂಡವಾಳ 10.14 ಕೋಟಿ ರೂ. ಇದೆ.

    ಮಹತ್ವದ ಒಪ್ಪಂದ ಮಾಡಿರುವುದನ್ನು ಘೋಷಿಸುತ್ತಿದ್ದಂತೆಯೇ ಟಾಟಾ ಪವರ್​ ಷೇರಿಗೆ ಭಾರೀ ಬೇಡಿಕೆ

    ಪೇಟಿಎಂ ಷೇರು ಮಹಾಕುಸಿತ ಕಾಣುವ ಮೊದಲೇ ಮಾರಿದರು: ವಿದೇಶಿ ಹೂಡಿಕೆದಾರರು ಜಾಣತನ ಮೆರೆದು ಅಪಾರ ನಷ್ಟದಿಂದ ಬಚಾವಾಗಿದ್ದು ಹೀಗೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts