More

    ಮಹತ್ವದ ಒಪ್ಪಂದ ಮಾಡಿರುವುದನ್ನು ಘೋಷಿಸುತ್ತಿದ್ದಂತೆಯೇ ಟಾಟಾ ಪವರ್​ ಷೇರಿಗೆ ಭಾರೀ ಬೇಡಿಕೆ

    ಮುಂಬೈ: ಬುಧವಾರದ ವಹಿವಾಟಿನಲ್ಲಿ ಟಾಟಾ ಪವರ್ (tata Power Ltd.) ಷೇರುಗಳ ಬೆಲೆ ಶೇ. 3ರಷ್ಟು ಏರಿಕೆ ಕಂಡಿದೆ. ಈ ಕಂಪನಿಯ ಷೇರುಗಳು ಇಂಟ್ರಾಡೇ ವಹಿವಾಟಿನಲ್ಲಿ 374.60 ರೂಪಾಯಿ ತಲುಪಿದವು.

    ಈ ಷೇರುಗಳ ಈ ಏರಿಕೆಯ ಹಿಂದೆ ದೊಡ್ಡ ಕಾರಣವಿದೆ. ಟಾಟಾ ಪವರ್ ರಿನ್ಯೂವಬಲ್ ಎನರ್ಜಿ ಲಿಮಿಟೆಡ್ ಕಂಪನಿಯು ಟಾಟಾ ಪವರ್ ಕಂಪನಿ ಲಿಮಿಟೆಡ್‌ನ ಅಂಗಸಂಸ್ಥೆಯಾಗಿದೆ. ಈ ಕಂಪನಿಯು ಬುಧವಾರ ಮಹತ್ವದ ಘೋಷಣೆ ಮಾಡಿದೆ. 18.75 ಮೆಗಾವ್ಯಾಟ್ ಎಸಿ ಕ್ಲಸ್ಟರ್ ಕ್ಯಾಪ್ಟಿವ್ ಸೌರಶಕ್ತಿ ಸ್ಥಾವರಕ್ಕಾಗಿ ಟಾಟಾ ಕಮ್ಯುನಿಕೇಷನ್ಸ್ ಲಿಮಿಟೆಡ್‌ ಜತೆ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಕಂಪನಿ ಹೇಳಿದೆ. ಇದಲ್ಲದೆ, ವಿದ್ಯುತ್ ವಿತರಣಾ ಒಪ್ಪಂದಕ್ಕೂ ಸಹಿ ಹಾಕಲಾಗಿದೆ.

    ಡಿಸೆಂಬರ್ ತ್ರೈಮಾಸಿಕದಲ್ಲಿ ಕಂಪನಿಯ ಲಾಭವು ಕೇವಲ ಎರಡು ಪ್ರತಿಶತದಷ್ಟು ಹೆಚ್ಚಾಗಿದ್ದು, 1,076 ಕೋಟಿ ರೂಪಾಯಿಗೆ ತಲುಪಿದೆ. ಕಳೆದ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ ಕಂಪನಿಯ ಲಾಭ 1,052 ಕೋಟಿ ರೂ. ಇತ್ತು.

    ಕಳೆದ ಹಣಕಾಸು ವರ್ಷದ ಡಿಸೆಂಬರ್​ ತ್ರೈಮಾಸಿಕದಲ್ಲಿ 14,339 ಕೋಟಿ ರೂಪಾಯಿಗಳಷ್ಟಿದ್ದ ಆದಾಯವು ಈ ಡಿಸೆಂಬರ್ ತ್ರೈಮಾಸಿಕದಲ್ಲಿ 14,841 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಕಂಪನಿ ತಿಳಿಸಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ಮೂರು ತ್ರೈಮಾಸಿಕಗಳಲ್ಲಿ ಕಂಪನಿಯ ಆದಾಯವು 45,286 ಕೋಟಿ ರೂ.ಗೆ ಏರಿಕೆಯಾಗಿದೆ, ಇದು ಈ ಅವಧಿಯಲ್ಲಿ ಕಂಪನಿಯ ಅತ್ಯಧಿಕ ಬೆಳವಣಿಗೆಯಾಗಿದೆ.

    ಡಿಸೆಂಬರ್ 31, 2023 ರಂತೆ, ಟಾಟಾ ಪವರ್ ನವೀಕರಿಸಬಹುದಾದ ಇಂಧನ ವಿಭಾಗದಲ್ಲಿ 4270 MW ಕಾರ್ಯ ಸಾಮರ್ಥ್ಯವನ್ನು ಹೊಂದಿದೆ, 603.1 ಕೋಟಿ ಯೂನಿಟ್ ಹಸಿರು ವಿದ್ಯುತ್ ಉತ್ಪಾದಿಸುತ್ತದೆ.

    ಟಾಟಾ ಪವರ್‌ ಷೇರಿನ 52 ವಾರದ ಗರಿಷ್ಠ ಬೆಲೆ ರೂ 412.90 ಮತ್ತು ಕನಿಷ್ಠ ಬೆಲೆ ರೂ 182.35. ಟಾಟಾ ಪವರ್ ಷೇರುಗಳ ಬೆಲೆ ಒಂದು ವರ್ಷದಲ್ಲಿ 82% ಹೆಚ್ಚಾಗಿದೆ. ಐದು ವರ್ಷಗಳಲ್ಲಿ ಈ ಷೇರು 440.61% ಏರಿಕೆಯಾಗಿದೆ. ಕಳೆದ ಆರು ತಿಂಗಳಲ್ಲಿ 60% ರಷ್ಟು ಹೆಚ್ಚಾಗಿದೆ.

    ಪೇಟಿಎಂ ಷೇರು ಮಹಾಕುಸಿತ ಕಾಣುವ ಮೊದಲೇ ಮಾರಿದರು: ವಿದೇಶಿ ಹೂಡಿಕೆದಾರರು ಜಾಣತನ ಮೆರೆದು ಅಪಾರ ನಷ್ಟದಿಂದ ಬಚಾವಾಗಿದ್ದು ಹೀಗೆ…

    ಆಕ್ಸಿಸ್ ಬ್ಯಾಂಕ್ ಷೇರುಗಳಿಂದ ಗಳಿಕೆಗೆ ಅವಕಾಶ: ತಜ್ಞರ ವಿವರಣೆ ಹೀಗಿದೆ…

    ಕರಡಿಯ ಕುಣಿತ ತಡೆದು ಗುಟುರು ಹಾಕಿದ ಗೂಳಿ: ಬೆಳಗ್ಗೆ ಕುಸಿದ ಷೇರು ಸೂಚ್ಯಂಕ ಮಧ್ಯಾಹ್ನ ಚೇತರಿಕೆ ಕಂಡಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts