More

    103ರ ಹರೆಯದ ಅಜ್ಜಿ ಕರೊನಾದಿಂದ ಪಾರಾದ ಖುಷಿಗೆ ಮಾಡಿದ್ದೇನು ಗೊತ್ತಾ? ಕೇಳಿದರೆ ನೀವೂ ಫುಲ್ ಖುಷ್

    ಬೋಸ್ಟನ್: ಲಾಕ್​​ಡೌನ್​ನಿಂದಾಗಿ ಮದ್ಯದಂಗಡಿಗಳೆಲ್ಲ ಬಂದ್ ಆದಾಗ ಮದ್ಯಪ್ರಿಯರ ಕಿಕ್​​​ಗೇ ಕುಂದುಂಟಾಗಿತ್ತು. ಆದರೆ ಮರು ಆರಂಭಗೊಂಡಾಗ ಅವರಿಗೆ ಪ್ರಾಣವೇ ಬಂದಷ್ಟು ಖುಷಿಯಾಗಿತ್ತು.
    ದುಃಖ, ಸೋಲು, ನೋವು, ಖುಷಿಯ ಆಚರಣೆಗೆಲ್ಲ ಸಾಥ್ ನೀಡುವ ಪ್ರಾಣಸ್ನೇಹಿತನಿದ್ದಂತೆ ಈ ಮದ್ಯ. ಈಗ್ಯಾಕೆ ಈ ವಿಷ್ಯ ಅಂತೀರಾ? ಇಲ್ಲಿ ನೋಡಿ, ಇಲ್ಲೊಬ್ಬ ಅಜ್ಜಿ ಕರೊನಾವೈರಸ್‌ ವಿರುದ್ಧ ಹೋರಾಡಿ ಗೆದ್ದ ಖುಷಿಯನ್ನು ತಂಪು ಬಿಯರ್ ಸೇವಿಸುವ ಮೂಲಕ ಆಚರಿಸಿಕೊಂಡಿದ್ದಾರೆ..!

    ಇದನ್ನೂ ಓದಿ: ಹೈ ಟೆನ್ಷನ್ ಕೇಬಲ್‌ ವರ್ಕರ್​​ಗಳಿಗೂ ಪಿಪಿಇ ಕಿಟ್‌ ಉಪಯುಕ್ತ, ನೆನಪಿರಲಿ, ಇದು ಕರೊನಾ ಪಿಪಿಇ ಕಿಟ್ ಅಲ್ಲ

    ಇವರು 103 ವರ್ಷದ ಜೆನ್ನಿ ಸ್ಟೆಜ್ನಾ. ಮೆಸಾಚುಸೆಟ್ಸ್ ನಿವಾಸಿ. ಮೂರು ವಾರಗಳ ಹಿಂದೆ ಕರೊನಾವೈರಸ್‌ನೊಂದಿಗೆ ಹೋರಾಡಿ ಗೆದ್ದಿದ್ದಾರೆ. ನರ್ಸಿಂಗ್ ಹೋಂನಲ್ಲಿದ್ದಾಗ ಅವರಿಗೆ ಜ್ವರ ಕಾಣಿಸಿಕೊಂಡ ನಂತರ ಪರೀಕ್ಷಿಸಿದಾಗ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿತು. ಅಲ್ಲಿ ಕರೊನಾ ವೈರಸ್​​​ ಕಾಣಿಸಿಕೊಂಡ ಮೊದಲ ವ್ಯಕ್ತಿ ಅವರಾಗಿದ್ದರು.
    ವೈರಸ್ ಸೋಂಕಿಗೆ ಒಳಗಾದ ನಂತರ, ಅವರನ್ನು ಪ್ರತ್ಯೇಕ ವಾರ್ಡ್‌ಗೆ ಸ್ಥಳಾಂತರಿಸಲಾಯಿತು. ಅವರ ಆರೋಗ್ಯ ಮೇಲ್ವಿಚಾರಕರು ನಿರಂತರವಾಗಿ ಅವರನ್ನು ಪರೀಕ್ಷಿಸುತ್ತಿದ್ದರು. ಅವರ ಪಕ್ಕ ಯಾವಾಗಲೂ ಒಬ್ಬ ಆರೋಗ್ಯ ಸಿಬ್ಬಂದಿ ಇರುತ್ತಿದ್ದರು.

    ಇದನ್ನೂ ಓದಿ: ಮಹಾಮಾರಿ ವಿರುದ್ಧ ಹೋರಾಡಿ ಗೆದ್ದಿತು ಮತ್ತೊಂದು ಹಿರಿಯ ಜೀವ ; ಜುವಾನಾ

    ಮೂವರು ಮೊಮ್ಮಕ್ಕಳು ಮತ್ತು ಮೂವರು ಮರಿ ಮೊಮ್ಮಕ್ಕಳನ್ನು ಹೊಂದಿದ ಈ ಅಜ್ಜಿಯ ವಯಸ್ಸು ಹೆಚ್ಚಾಗುತ್ತಿದ್ದಂತೆ, ಆರೋಗ್ಯ ಸ್ಥಿತಿಯೂ ಹದಗೆಟ್ಟಿದ್ದರಿಂದ ಅವರಿಗೆ ಅಂತಿಮ ವಿದಾಯ ಹೇಳಲು ಅವರ ಕುಟುಂಬಕ್ಕೆ ಕರೆ ನೀಡಲಾಯಿತು.
    ಅವರಿಗೆ ಅಂತಿಮ ವಿದಾಯ ಹೇಳಲು ಸ್ಟೆಜ್ನಾ ಅವರ ಮೊಮ್ಮಗಳು ಶೆಲ್ಲಿ ಗನ್ ಮತ್ತು ಆಕೆಯ ಪತಿ ಆಡಮ್ ಗನ್ ಗೆ ಕೂಡ ಕರೆ ನೀಡಲಾಗಿತ್ತು. ಆದರೆ ನಂತರ ಅದೃಷ್ಟವಶಾತ್ ಆ ಅಜ್ಜಿ ಕರೊನಾದಿಂದ ಗುಣಮುಖರಾಗಿದ್ದರು…! ಮೇ 13 ರಂದು ಅವರೆಲ್ಲರಿಗೂ ಒಳ್ಳೆಯ ಸುದ್ದಿ ಸಿಕ್ಕಿತು. “ನಮ್ಮ ಈ ಮುದ್ದು ಅಜ್ಜಿ ಕರೊನಾದಿಂದ ಗುಣಮುಖರಾಗಿದ್ದಾರೆ ವೈದ್ಯರು ತಿಳಿಸಿದ್ದಾರೆ. ನಾವು ನಿಜವಾಗಿಯೂ ತುಂಬಾ ಕೃತಜ್ಞರಾಗಿರುತ್ತೇವೆ ಎಂದಿದ್ದಾರೆ ಆಡಮ್.

    ಇದನ್ನೂ ಓದಿ: ರೋಗಿಗಳು ರೈಲು ಹತ್ತಲೇಬೇಡಿ; ರೈಲ್ವೆ ಇಲಾಖೆ

    ಪವಾಡ ಸದೃಶ್ಯವಾಗಿ ಈ ಅಜ್ಜಿ ಕರೊನಾದಿಂದ ಚೇತರಿಸಿಕೊಳ್ಳುತ್ತಿದ್ದಂತೆ, ಈ ಸಂತೋಷವನ್ನು ಆಕೆ ತನ್ನ ಪ್ರೀತಿಯ ಬೀಯರ್ ‘ಬಡ್​​ಲೈಟ್’ ಹೀರುವ ಮೂಲಕ ಆಚರಿಸಿಕೊಳ್ಳಲು ವೈದ್ಯರು ಅನುಮತಿಸಿದ್ದಾರೆ, ಸ್ಟೆಜ್ನಾ ಪ್ರೀತಿಸುತ್ತಿದ್ದ, ಆದರೆ ಬಹುಕಾಲದಿಂದ ಸೇವಿಸದ ಪಾನೀಯ ಅದು ಎಂದು ಶೆಲ್ಲಿ ತಿಳಿಸಿದ್ದಾರೆ.
    ಕರೊನಾ ವಿರುದ್ಧ ಹೋರಾಡಿ ಗೆದ್ದ ಖುಷಿಯನ್ನು ತಂಪು ಬಿಯರ್ ಹೀರುವ ಮೂಲಕ ಆಚರಿಸಿಕೊಳ್ಳುತ್ತಿರುವ ಈ 103ರ ಕ್ರಿಯಾಶೀಲ ಅಜ್ಜಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. “ನೀವು ಕೆಟ್ಟ ಪರಿಸ್ಥಿತಿಯಲ್ಲಿರುವುದಾಗಿ ಚಿಂತಿಸುವಾಗಲೆಲ್ಲಾ  ಸ್ಟೆಜ್ನಾ ಅವರನ್ನು ನೆನಪಿಸಿಕೊಳ್ಳಿ. ಏಕೆಂದರೆ 103ರ ಆ ಹಿರಿಯ ಜೀವ ನಿಮಗಿಂತಲೂ ಕೆಟ್ಟ ಪರಿಸ್ಥಿತಿಯಲ್ಲಿ ಬದುಕುಳಿದು ಸಂಭ್ರಮ ಆಚರಿಸುತ್ತಿದೆ ಎಂಬುದನ್ನು ನೆನಪಿಡಿ ಎಂದು ಟ್ವೀಟರ್ ಬಳಕೆದಾರರೊಬ್ಬರು ಟ್ವೀಟ್ ಮಾಡಿದ್ದಾರೆ. 

    ಕರೊನಾ ಗೆದ್ದ 113 ವರ್ಷದ ಅಜ್ಜಿ ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts