More

    ಮಹಾಮಾರಿ ವಿರುದ್ಧ ಹೋರಾಡಿ ಗೆದ್ದಿತು ಮತ್ತೊಂದು ಹಿರಿಯ ಜೀವ ; ಜುವಾನಾ

    ಸ್ಯಾಂಟಿಯಾಗೋ : ಜಗತ್ತನ್ನೇ ಭಾದಿಸುತ್ತಿರುವ ಮಹಾಮಾರಿ ಕರೊನಾ ವಿರುದ್ಧ ಹೋರಾಡಿ ಗೆದ್ದ ಅತ್ಯಂತ ಹಿರಿಯ ವ್ಯಕ್ತಿಗಳ ಪಟ್ಟಿಯಲ್ಲಿ ಈಗ ಚಿಲಿಯ ವಯೋವೃದ್ಧೆ, 111 ವರ್ಷದ ಜುವಾನಾ ಝುನಿಗಾ ಹೆಸರು ಕೂಡ ದಾಖಲಾಗಿದೆ.
    ಝುನಿಗಾ ಸ್ಯಾಂಟಿಯಾಗೊದಲ್ಲಿನ 25 ಜನರಿರುವ ಆರೈಕೆ ಕೇಂದ್ರದಲ್ಲಿ ವಾಸಿಸುತ್ತಿದ್ದಾರೆ.
    ಕೋವಿಡ್-19 ನಿಂದ ಇವರು ಚೇತರಿಸಿಕೊಂಡದ್ದೂ ಕೂಡ ಒಂದು ರೋಚಕ ಸಂಗತಿಯೇ ಎನ್ನಬಹುದು, ಏಕೆಂದರೆ ಕೋವಿಡ್ -19 ಇವರನ್ನು ಬಾಧಿಸಿದಾಗ ಅವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರಂತೆ. ಅವರ ಆರೈಕೆ ಕೇಂದ್ರ ಸಿಬ್ಬಂದಿ ಹೇಳುವಂತೆ ಅವರಿಗೆ ತೀವ್ರ ಅನಾರೋಗ್ಯವೇನೂ ಕಾಡುತ್ತಿರಲಿಲ್ಲ ಮತ್ತು ‘ಅವರು ಯಾವುದೇ ರೀತಿಯ ರೋಗಲಕ್ಷಣಗಳನ್ನೂ ಹೊಂದಿರಲಿಲ್ಲ.

    ಇದನ್ನೂ ಓದಿ: ಹೈ ಟೆನ್ಷನ್ ಕೇಬಲ್‌ ವರ್ಕರ್​​ಗಳಿಗೂ ಪಿಪಿಇ ಕಿಟ್‌ ಉಪಯುಕ್ತ, ನೆನಪಿರಲಿ, ಇದು ಕರೊನಾ ಪಿಪಿಇ ಕಿಟ್ ಅಲ್ಲ

    ಅವರಲ್ಲಿ ಸ್ವಲ್ಪ ಜ್ವರ ವಿತ್ತಷ್ಟೇ. ಆದರೆ ಯಾವುದೇ ರೋಗಲಕ್ಷಣಗಳನ್ನು ಹೊಂದಿರಲಿಲ್ಲ ಎಂದು ಆರೈಕೆ ಕೇಂದ್ರದನಿರ್ದೇಶಕಿ ಮಾರಿಯಾ ಪಾಜ್ ಸೋರ್ಡೊ ತಿಳಿಸಿದ್ದಾರೆ.ಝುನಿಗಾಗೆ ಕೋವಿಡ್ -19 ಸೋಂಕು ದೃಢ ಪಟ್ಟಾಗ, ಅವರನ್ನು ಇತರ ನಿವಾಸಿಗಳಿಂದ ಬೇರ್ಪಡಿಸಿ 28 ದಿನಗಳ ಕಾಲ ಐಸೋಲೇಷನ್ ವಾರ್ಡ್​​ನಲ್ಲಿರಿಸಲಾಗಿತ್ತು. ಝುನಿಗಾ ಕೊರೊನಾವೈರಸ್ ದಿಂದ ಮುಕ್ತವಾಗಿರುವುದಾಗಿ ಮೇ 10 ರಂದು ಘೋಷಿಸಲಾಯಿತು, ಈಗ ಝುನಿಗಾ ಸಾಂಕ್ರಾಮಿಕ ರೋಗವನ್ನು ಯಶಸ್ವಿಯಾಗಿ ಎದುರಿಸಿದ ಚಿಲಿಯ ಅತ್ಯಂತ ಹಿರಿಯ ವ್ಯಕ್ತಿ ಎಂದೇ ಗುರುತಿಸಲ್ಪಟ್ಟಿದ್ದಾರೆ..
    ಅವಿವಾಹಿತೆಯಾಗಿದ್ದ ಝುನಿಗಾ ತಮ್ಮ ಜತೆಗಿದ್ದ ಸಹೋದರಿ ನಿಧನರಾದ ನಂತರ 2014ರಿಂದ ಕೇರ್ ಹೋಮ್​​​ನಲ್ಲೇ ವಾಸಿಸುತ್ತಿದ್ದರು.

    ಇದನ್ನೂ ಓದಿ: ರೋಗಿಗಳು ರೈಲು ಹತ್ತಲೇಬೇಡಿ; ರೈಲ್ವೆ ಇಲಾಖೆ

    ಜಗತ್ತನ್ನೇ ಭಾದಿಸುತ್ತಿರುವ ಕೋವಿಡ್ -19 ಅದೆಷ್ಟೋ ಜೀವಗಳನ್ನು ಬಲಿ ಪಡೆದಿದೆ. ಈ ಮಧ್ಯೆ ಇಂಥ ಚೇತರಿಕೆ ಭರವಸೆಯ ಕಥನಗಳು ಮನುಷ್ಯರಲ್ಲಿ ಜೀವನದ ಮೇಲೆ ಭರವಸೆ ಕಳೆದುಕೊಳ್ಳದಂತೆ ಮಾಡುತ್ತವೆ. ಕರೊನಾವೈರಸ್ ವಿರುದ್ಧ ಹೋರಾಡಿ ಗೆದ್ದವರ ಚೇತರಿಕೆ ಕಥೆಗಳಲ್ಲಿ ಈ ತಿಂಗಳ ಆರಂಭದಲ್ಲಿ ಸ್ಪೇನ್​ನ 113 ವರ್ಷದ ಅತ್ಯಂತ ಹಿರಿಯ ವ್ಯಕ್ತಿ ಹೆಸರು ಕೇಳಿಬಂದಿತ್ತು , ಆಕೆಯ ಹೆಸರು ಮರಿಯಾ ಬ್ರನ್ಯಾಸ್, ಮೂರು ಮಕ್ಕಳ ತಾಯಿ, ಸ್ಪೇನ್‌ನ ಅತ್ಯಂತ ಹಿರಿಯ ವ್ಯಕ್ತಿ, ಈ ತಿಂಗಳ ಆರಂಭದಲ್ಲಿ ಕರೋನವೈರಸ್‌ ವಿರುದ್ಧ ಹೋರಾಡಿ ಬದುಕುಳಿದವರಲ್ಲಿ ಅತ್ಯಂತ ಹಿರಿಯ ವ್ಯಕ್ತಿ ಇವರಾಗಿದ್ದಾರೆ. ಮೂರು ಮಕ್ಕಳ ತಾಯಿಯಾದ ಮಾರಿಯಾ ಬ್ರಾನ್ಯಾಸ್ ಪೂರ್ವ ಸ್ಪೇನ್‌ನ ಓಲೋಟ್ ನಗರದಲ್ಲಿ ಸಾಂತಾ ಮಾರಿಯಾ ಡೆಲ್ ತುರಾ ಆರೈಕೆ ಮನೆಯಲ್ಲಿ ಅವರು ವಾಸಿಸುತ್ತಿದ್ದಾರೆ.

    ತನ್ನದೇ ಕೂಸಿನ ಮೇಲೆ ಅತ್ಯಾಚಾರ ಎಸಗುವ ಅಪ್ಪಂದಿರೂ ಇರುತ್ತಾರಾ?

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts