More

    ಸೋಲಾರ್ ಆಗ್ರೋ ಪವರ್‌ನಲ್ಲಿ 100% ಪಾಲು ಖರೀದಿ: ರಿಲಯನ್ಸ್ ಸ್ಟಾಕ್​ ಟಾರ್ಗೆಟ್​ ಪ್ರೈಸ್​ ಹೆಚ್ಚಿಸಿದ ಬ್ರೋಕರೇಜ್​ ಸಂಸ್ಥೆಗಳು

    ಮುಂಬೈ: ಮುಖೇಶ್ ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಕಂಪನಿಯು MSKVY ನೈನ್​ಟಿಂತ್​ ಸೋಲಾರ್ SPV ಲಿಮಿಟೆಡ್ ಮತ್ತು MSKVY ಟ್ವೆಂಟಿ-ಸೆಕೆಂಡ್ ಸೋಲಾರ್ SPV ಲಿಮಿಟೆಡ್‌ನಲ್ಲಿ 100% ಈಕ್ವಿಟಿ ಷೇರುಗಳನ್ನು ಖರೀದಿಸಲು ಅನುಮೋದನೆ ನೀಡಿದೆ.. ಈ ಷೇರುಗಳನ್ನು MSEB ಸೋಲಾರ್ ಆಗ್ರೋ ಪವರ್ ಲಿಮಿಟೆಡ್‌ನಿಂದ ಖರೀದಿಸಲಿದೆ.

    ಮುಖ್ಯಮಂತ್ರಿ ಸೌರ್ ಕೃಷಿ ವಾಹಿನಿ ಯೋಜನೆ (MSKVY) 2.0 ಅಡಿಯಲ್ಲಿ ಮಹಾರಾಷ್ಟ್ರದ ವಿವಿಧ ಸ್ಥಳಗಳಲ್ಲಿ ಹರಡಿರುವ ಒಟ್ಟು 128 ಮೆಗಾ ವ್ಯಾಟ್ ಸೌರ ಸಾಮರ್ಥ್ಯವನ್ನು ಸ್ಥಾಪಿಸುವ ಟೆಂಡರ್‌ನ ಷರತ್ತುಗಳಿಗೆ ಅನುಗುಣವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಹೇಳಿದೆ.

    MSEB ಸೋಲಾರ್ ಆಗ್ರೋ ಪವರ್ ಲಿಮಿಟೆಡ್‌ನಿಂದ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ನಂತರ ವಹಿವಾಟಿನ ವಿವರಗಳನ್ನು ಹಂಚಿಕೊಳ್ಳಲು ರಿಲಯನ್ಸ್ ಇಂಡಸ್ಟ್ರೀಸ್ ಯೋಜಿಸಿದೆ. ಏಪ್ರಿಲ್ 2024 ರ ಅಂತ್ಯದ ವೇಳೆಗೆ ಸ್ವಾಧೀನಪಡಿಸಿಕೊಳ್ಳುವಿಕೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

    ಬ್ರೋಕರೇಜ್ ಸಂಸ್ಥೆಗಳು ಹೇಳಿದ್ದೇನು?:

    ಏತನ್ಮಧ್ಯೆ, ಯುಬಿಎಸ್ ಬ್ರೋಕರೇಜ್ ಸಂಸ್ಥೆಯು, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ ಸ್ಟಾಕ್‌ನಲ್ಲಿ ತನ್ನ ಗುರಿ ಬೆಲೆಯನ್ನು (ಟಾರ್ಗೆಟ್​ ಪ್ರೈಸ್​) ಹಿಂದಿನ ರೂ 3,000 ರಿಂದ ರೂ 3,400 ಕ್ಕೆ ಹೆಚ್ಚಿಸಿದೆ.

    ಇದರೊಂದಿಗೆ, ಬ್ರೋಕರೇಜ್ ಸಂಸ್ಥೆಯು ಈ ಷೇರಿನಲ್ಲಿ “ಖರೀದಿ” ಶಿಫಾರಸನ್ನು ಸಹ ನಿರ್ವಹಿಸಿದೆ. ಅದೇ ರೀತಿ, ದೇಶೀಯ ಬ್ರೋಕರೇಜ್ ಮೋತಿಲಾಲ್ ಓಸ್ವಾಲ್ ಕೂಡ ರಿಲಯನ್ಸ್ ಇಂಡಸ್ಟ್ರೀಸ್​ ಷೇರುಗಳ ಗುರಿ ಬೆಲೆಯನ್ನು 3210 ರೂಪಾಯಿಗೆ ನಿಗದಿಪಡಿಸಿದೆ. ಕಳೆದ ಶುಕ್ರವಾರ, ಈ ಷೇರು 0.30% ಏರಿಕೆಯೊಂದಿಗೆ 2909.90 ರೂ. ತಲುಪಿದೆ. ಮಾರ್ಚ್ 4, 2024 ರಂದು ಷೇರಿನ ಬೆಲೆ 3,024.80 ರೂ. ಇದ್ದು, ಇದು 52 ವಾರಗಳ ಗರಿಷ್ಠ ಬೆಲೆಯಾಗಿದೆ.

    ಮುಖೇಶ್ ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರೀಸ್ ಈ ವರ್ಷದ ದ್ವಿತೀಯಾರ್ಧದಲ್ಲಿ ಹೊಸ ಎನರ್ಜಿ ಗಿಗಾ ಕ್ಯಾಂಪಸ್ ಪ್ರಾರಂಭಿಸಲಿದೆ. ಗುಜರಾತ್​ನ ಜಾಮ್‌ನಗರದಲ್ಲಿ 5,000 ಎಕರೆ ಭೂಮಿಯನ್ನು ಇದಕ್ಕಾಗಿ ಸ್ವಾಧೀನಪಡಿಸಿಕೊಳ್ಳಲಿದೆ.

    ಅದಾನಿ ಸಮೂಹದಿಂದ 2% ಷೇರು ಮಾರಾಟ: ಸಿಮೆಂಟ್​ ಕಂಪನಿ ಸಂಘಿ ಇಂಡಸ್ಟ್ರೀಸ್‌ನಲ್ಲಿ ಮಹತ್ವದ ಬೆಳವಣಿಗೆ

    5 ರೂಪಾಯಿಯ ಪೆನ್ನಿ ಸ್ಟಾಕ್​ಗೆ ಡಿಮ್ಯಾಂಡು: ಒಂದೇ ವಾರದಲ್ಲಿ 25% ಏರಿಕೆ

    ಸ್ಟಾರ್‌ಚಾರ್ಜ್ ಎನರ್ಜಿ ಜತೆ ಒಪ್ಪಂದ: ವಾಹನ ಬಿಡಿಭಾಗ ತಯಾರಕ ಕಂಪನಿ ಷೇರು ಟಾರ್ಗೆಟ್​ ಪ್ರೈಸ್​ ಹೆಚ್ಚಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts