More

    100 ರೂ. ಮುಖಬೆಲೆಯ ಹಳೇ ನೋಟು ಇನ್ಮುಂದೆ ಚಲಾವಣೆ ಆಗಲ್ಲ! ಸೂಚನೆ ಕೊಟ್ಟ ಆರ್​ಬಿಐ

    ಮಂಗಳೂರು: 2016ರ ನವೆಂಬರ್​ 8ರ ರಾತ್ರಿ ಪ್ರಧಾನಿ ನರೇಂದ್ರ ಮೋದಿ 1,000 ಮತ್ತು 500 ರೂ. ಮುಖಬೆಲೆಯ ನೋಟ್​ ಬ್ಯಾನ್​ ಮಾಡಿ ಆದೇಶ ಹೊರಡಿಸಿದ್ದರು. ಇದಾದ ನಂತರ ಚಲಾವಣೆಗೆ ಬಂದದ್ದು 2,000 ರೂ. ಮುಖಬೆಲೆಯ ಮತ್ತು 500 ರೂ. ಮುಖಬೆಲೆಯ ಹೊಸ ನೋಟ್​. 2,000 ರೂ. ಮುಖಬೆಲೆಯ ಪಿಂಕ್​ನೋಟ್​ ಚಲಾವಣೆ ತಾತ್ಕಾಲಿಕವಾಗಿದ್ದು, ಇದು ಶೀಘ್ರವೇ ಅಮಾನ್ಯೀಕರಣ ಆಗಲಿದೆ ಎಂಬ ಸುದ್ದಿ ಆಗಾಗ್ಗೆ ಬಾರೀ ಸದ್ದು ಮಾಡುತ್ತಿದೆ.

    ಆದರೀಗ 100 ರೂಪಾಯಿ ಮುಖಬೆಲೆಯ ಹಳೇ ನೋಟುಗಳ ಚಲಾವಣೆ ಸ್ಥಗಿತಗೊಳ್ಳುವ ಕಾಲ ಸನಿಹದಲ್ಲಿದೆ. ಹೌದು, ಈ ಬಗ್ಗೆ ಆರ್‌ಬಿಐ ಎಜಿಎಂ ಮಹೇಶ್ ಅವರೇ ಮಾಹಿತಿ ನೀಡಿದ್ದಾರೆ. ಇದೇ ಮಾರ್ಚ್‌ ಅಂತ್ಯದ ವೇಳೆಗೆ 100 ರೂ. ಮುಖಬೆಲೆಯ ಹಳೇ ನೋಟುಗಳನ್ನು ಹಿಂಪಡೆಯಲಾಗುವುದು. ಇದು ನೋಟು ಅಮಾನ್ಯೀಕರಣ ಅಲ್ಲ ಎಂದಿರುವ ಅವರು, ಈ ನೋಟನ್ನು ಪ್ರಸರಣದಿಂದ ಹಿಂದಕ್ಕೆ ಪಡೆಯಲಾಗುವುದು ಎಂದು ವಿವರಿಸಿದ್ದಾರೆ. ಇದನ್ನೂ ಓದಿರಿ ಪ್ಲೀಸ್​ ಬಾಗಿಲು ತೆಗಿ.. ನಾವೆಲ್ಲ ಇದ್ದೇವೆ.. ಎಂದು ಗೋಗರೆಯುತ್ತಿದ್ದರೂ ನೋಡನೋಡುತ್ತಿದ್ದಂತೆ ನೇಣಿಗೆ ಶರಣಾದ!

    ಪ್ರಧಾನಿ ನರೇಂದ್ರ ಮೋದಿ ಅವರು 1,000 ಮತ್ತು 500 ರೂ. ಮುಖಬೆಲೆಯ ನೋಟು ರದ್ದು ಮಾಡಿ ನಾಲ್ಕು ವರ್ಷ ಕಳೆದಿದೆ. ಕಪ್ಪು ಹಣ, ಭಯೋತ್ಪಾದನೆ ಮತ್ತು ಖೋಟಾನೋಟು ದಂಧೆ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹಾಗೂ ನಗದು ರಹಿತ ಆರ್ಥಿಕತೆಗಾಗಿ ನೋಟು ರದ್ದು ಮಾಡಲಾಗಿತ್ತು. ಇದೀಗ 100 ರೂ. ಮುಖಬೆಲೆಯ ಹಳೇ ನೋಟಿನ ಪ್ರಸರಣ ಹಿಂದಕ್ಕೆ ಪಡೆದು ಗ್ರಾಹಕರಿಗೆ ಉತ್ತಮ ನೋಟ್ ಕೊಡುವ ನಿಟ್ಟಿನಲ್ಲಿ ಈ ನಿರ್ಧಾರ ಮಾಡಲಾಗಿದೆ.

    ಪ್ಲೀಸ್​ ಬಾಗಿಲು ತೆಗಿ.. ನಾವೆಲ್ಲ ಇದ್ದೇವೆ.. ಎಂದು ಗೋಗರೆಯುತ್ತಿದ್ದರೂ ನೋಡನೋಡುತ್ತಿದ್ದಂತೆ ನೇಣಿಗೆ ಶರಣಾದ!

    ನನ್ನನ್ನು ತಳ್ಳಿದ್ರು, ಕೂದಲು ಎಳೆದ್ರು, ಎಲ್ಲಾ ಕಡೆ ಮುಟ್ಟಲು ಬಂದ್ರು: ಶಾಸಕಿ ಸೌಮ್ಯರೆಡ್ಡಿ

    ಬಸ್​ನಲ್ಲಿ ಹಾಡಹಗಲೇ ಯುವತಿಗೆ ಲೈಂಗಿಕ ಕಿರುಕುಳ ಕೊಟ್ಟ ಕಾಮುಕ, ಸ್ಥಳದಲ್ಲೇ ಫೋಟೋ ಕ್ಲಿಕ್ಕಿಸಿದ ದಿಟ್ಟೆ ಮಾಡಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts