More

    10 ದಿನಗಳಲ್ಲಿ 4159 ಜನರಿಗೆ ಸೋಂಕು: ಸಂಪರ್ಕಿತರ ಪತ್ತೆಯಲ್ಲಿ ಬಳ್ಳಾರಿ ಜಿಲ್ಲೆ ರಾಜ್ಯದಲ್ಲೇ ಎರಡನೇ ಸ್ಥಾನ

    ಬಳ್ಳಾರಿ: ಕರೊನಾ ಸೋಂಕಿತರ ಸಂಖ್ಯೆ ಜತೆಗೆ ಅವರ ಸಂಪರ್ಕದಲ್ಲಿದ್ದವರ ಪತ್ತೆ ವಿಚಾರದಲ್ಲೂ ಜಿಲ್ಲೆ ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿದೆ. ಜೂನ್‌ನಲ್ಲಿ ಒಂದು ಸಾವಿರ, ಜುಲೈನಲ್ಲಿ ಐದು ಸಾವಿರ ಜನರಿಗೆ ಕರೊನಾ ಸೋಂಕು ತಗುಲಿದೆ. ಕಳೆದ ಎರಡು ತಿಂಗಳಿಗಿಂತ ಆಗಸ್ಟ್‌ನಲ್ಲಿ ಸೋಂಕು ಹರಡುವಿಕೆ ಪ್ರಮಾಣ ಮತ್ತಷ್ಟು ತೀವ್ರವಾಗಿದೆ.

    ಕಳೆದ 10 ದಿನಗಳಲ್ಲಿ ಜಿಲ್ಲೆಯಲ್ಲಿ 4159 ಜನರಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ 306 ಜನ ಸೋಂಕಿತರ ಪ್ರಾಥಮಿಕ ಸಂಪರ್ಕಿತರು ಪತ್ತೆಯಾಗಿಲ್ಲ. ಈ ಪ್ರಮಾಣ ಶೇ.7.4 ಆಗಿದ್ದು ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಸೋಂಕಿತರ ಪ್ರಾಥಮಿಕ ಸಂಪರ್ಕಿತರ ಪತ್ತೆ ವಿಚಾರದಲ್ಲಿ ಬಾಗಲಕೋಟೆ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಬಾಗಲಕೋಟೆಯಲ್ಲಿ ಕೇವಲ ಶೇ.5.8 ಪ್ರಾಥಮಿಕ ಸಂಪರ್ಕಿತರು ಪತ್ತೆಯಾಗಿಲ್ಲ. ಮೈಸೂರು ಮೂರನೇ ಸ್ಥಾನದಲ್ಲಿದ್ದು ಶೇ.9.1ರಷ್ಟು ಪ್ರಾಥಮಿಕ ಸಂಪರ್ಕಿತರು ಪತ್ತೆಯಾಗಿಲ್ಲ. ಶಿವಮೊಗ್ಗದಲ್ಲಿ ಶೇ.94.1, ಬೆಂಗಳೂರು ಗ್ರಾಮೀಣದಲ್ಲಿ ಶೇ.83.4 ಹಾಗೂ ವಿಜಯಪುರದಲ್ಲಿ ಶೇ. 80.7 ಜನ ಸೋಂಕಿತರ ಪ್ರಾಥಮಿಕ ಸಂಪರ್ಕಿತರು ಪತ್ತೆಯಾಗಬೇಕಿದೆ.

    ಆನ್‌ಲೈನ್‌ನಲ್ಲಿ ಫಲಿತಾಂಶ
    ಜಿಲ್ಲೆಯಲ್ಲಿ ಕರೊನಾ ಪರೀಕ್ಷೆ ಫಲಿತಾಂಶವನ್ನು ಇನ್ನು ಮುಂದೆ ಆನ್‌ಲೈನ್‌ನಲ್ಲಿ ನೋಡಬಹುದಾಗಿದೆ. ballari.nic.in ವೆಬ್‌ಸೈಟ್‌ನಲ್ಲಿ ಸ್ಪೆಸಿಮೆನ್ ರೆಫರಲ್ ಫಾರಂ (ಎಸ್‌ಆರ್‌ಎಫ್) ಹಾಗೂ ಮೊಬೈಲ್ ಸಂಖ್ಯೆ ದಾಖಲಿಸಿ ಫಲಿತಾಂಶ ತಿಳಿದುಕೊಳ್ಳಬಹುದಾಗಿದೆ. ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರದ ಜಿಲ್ಲಾ ಘಟಕದ ಅಧಿಕಾರಿ ಶಿವಪ್ರಕಾಶ ವಸ್ತ್ರದ ನೇತೃತ್ವದ ತಂಡ ಈ ತಂತ್ರಜ್ಞಾನ ಸಿದ್ಧಪಡಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts