More

    ನಕಲಿ ಬ್ಲ್ಯಾಕ್​ ಫಂಗಸ್ ಔಷಧ ದಂಧೆ : 10 ಜನರ ಬಂಧನ, 3,293 ವಯಲ್​​ ಚುಚ್ಚುಮದ್ದು ಜಪ್ತಿ

    ನವದೆಹಲಿ : ನಕಲಿ ಬ್ಲ್ಯಾಕ್​ ಫಂಗಸ್​ ಚುಚ್ಚುಮದ್ದನ್ನು ತಯಾರಿಸುವ ಮತ್ತು ಮಾರುವ ಜಾಲವೊಂದನ್ನು ದೆಹಲಿ ಅಪರಾಧ ವಿಭಾಗ ಪೊಲೀಸರು ಪತ್ತೆ ಹಚ್ಚಿದ್ದಾರೆ. ಇಬ್ಬರು ವೈದ್ಯರೂ ಸೇರಿದಂತೆ 10 ಜನರನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದೆ. ಓರ್ವ ಆರೋಪಿಯ ಮನೆಯಲ್ಲಿ, 3,293 ವಯಲ್​ಗಳಷ್ಟು ಚುಚ್ಚುಮದ್ದನ್ನು ಜಪ್ತಿಪಡಿಸಿಕೊಳ್ಳಲಾಗಿದೆ.

    ಬ್ಲ್ಯಾಂಕ್​ ಫಂಗಸ್​ ನಿವಾರಣೆಗೆ ಬಳಸುವ ಲಿಪೊಸೋಮಲ್ ಆ್ಯಂಫೊಟೆರಿಸಿನ್-ಬಿ ಇಂಜೆಕ್ಷನ್​ಗಳ ನಕಲಿ ದಂಧೆ ನಡೆಯುತ್ತಿದೆ ಎಂದು ಜೂನ್ 7 ರಂದು ಡ್ರಗ್​ ಕಂಟ್ರೋಲ್​ ಇಲಾಖೆ ದೂರು ನೀಡಿತ್ತು. ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ 10 ಜನರ ಗ್ಯಾಂಗ್​ ಒಂದು ಈ ಕೆಲಸದಲ್ಲಿ ತೊಡಗಿರುವುದು ಕಂಡುಬಂತು.

    ಇದನ್ನೂ ಓದಿ: ಮನೆಯಲ್ಲಿ ಆಟವಾಡುವಾಗ ಇಲಿ ಪಾಷಾಣ ತಿಂದು ಹೆಣ್ಣು ಮಗು ದುರಂತ ಸಾವು

    ಈ ಸಂಬಂಧವಾಗಿ ನಿನ್ನೆ ನಿಜಾಮುದ್ದೀನ್​ ವೆಸ್ಟ್​ ಪ್ರದೇಶದಲ್ಲಿ ಆರೋಪಿ ಡಾ. ಅಲ್ತಮಸ್​ ಹುಸೈನ್ ಮನೆಗೆ ದಾಳಿ ನಡೆಸಲಾಯಿತು. ಆಗ ದೊಡ್ಡ ಪ್ರಮಾಣದಲ್ಲಿ ಬ್ಲ್ಯಾಕ್ ಫಂಗಸ್​ ಚಿಕಿತ್ಸೆಗೆ ಬಳಸುವ ಔಷಧ ಮತ್ತು ಅಲ್ಪಪ್ರಮಾಣದಲ್ಲಿ ಕರೊನಾ ಚಿಕಿತ್ಸೆಗೆ ಬಳಸುವ ರೆಮ್​ಡೆಸಿವಿರ್ ಇಂಜೆಕ್ಷನ್​ಗಳನ್ನು ಶೇಖರಿಸಿಟ್ಟಿರುವುದು ಕಂಡುಬಂತು. ಅವುಗಳಲ್ಲಿ ಹಲವು ಎಕ್ಸ್​ಪೈರಿ ಡೇಟ್ ಮೀರಿದವಾಗಿದ್ದವು ಎಂದು ಡಿಸಿಪಿ ಮೋನಿಕಾ ಭರದ್ವಾಜ್ ಹೇಳಿದ್ದಾರೆ.

    ಆರೋಪಿಗಳು ಈವರೆಗೆ 400 ನಕಲಿ ಇಂಜೆಕ್ಷನ್​ಗಳನ್ನು ಮಾರಿದ್ದಾರೆ. 250 ರೂ.ಗಳ ಬೆಲೆಯುಳ್ಳ ಔಷಧವನ್ನು 12,000 ರೂ.ಗಳವರೆಗೆ ಹಣ ಪಡೆದು ಮಾರುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬಂಧನಕ್ಕೊಳಗಾಗಿರುವ ಆರೋಪಿಗಳಲ್ಲಿ ಇಬ್ಬರು ವೈದ್ಯರಿದ್ದು, ಅವರ ಮೆಡಿಕಲ್​ ಡಿಗ್ರಿಗಳೂ ನಕಲಿಯಾಗಿರಬಹುದೇ ಎಂದು ಪರಿಶೀಲನೆ ನಡೆದಿದೆ. (ಏಜೆನ್ಸೀಸ್)

    ಅನ್​ಲಾಕ್ : ನಾಳೆಯಿಂದ ಕೆಎಸ್ಆರ್​ಟಿಸಿ ಬಸ್ ಸಂಚಾರ ಆರಂಭ

    ವಧುವರರ ವೆಬ್​​ಸೈಟಲ್ಲಿ ಪರಿಚಯ ಬೆಳೆಸಿ ಹಣ ಲಪಟಾಯಿಸಿದ ಖದೀಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts