More

    ಪ್ರತಿದಿನ 1 ಲಕ್ಷ ಕರೊನಾ ಪರೀಕ್ಷೆ

    ಕರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಭಾರತ ಮಹತ್ವದ ಮುನ್ನಡೆ ಸಾಧಿಸಿದೆ. ದೇಶದಲ್ಲಿ ಪ್ರತಿದಿನ ಸುಮಾರು ಒಂದು ಲಕ್ಷ ಜನರ ತಪಾಸಣೆ ನಡೆಸಲಾಗುತ್ತಿದೆ. ಇದಕ್ಕೆ ಅಗತ್ಯವಾಗಿರುವ ಕ್ರಮವನ್ನು ಕೇಂದ್ರ ಆರೋಗ್ಯ ಸಚಿವಾಲಯ ಹಾಗೂ ಐಸಿಎಂಆರ್ ಕೈಗೊಂಡಿವೆ. ಪರೀಕ್ಷೆ ಸಾಮರ್ಥ್ಯ ಹೆಚ್ಚಿದಂತೆ ರೋಗ ಪತ್ತೆ, ನಿಖರ ಅಂಕಿ-ಅಂಶ ಲಭ್ಯವಾಗುತ್ತದೆ. ಸೋಂಕು ಹರಡುವುದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಅನುಕೂಲ ಆಗಲಿದೆ. ಕೋವಿಡ್ ತಪಾಸಣೆ ಕಿಟ್ ಉತ್ಪಾದಿಸುವ ಭಾರತದ ಸಾಮರ್ಥ್ಯ ಕೂಡ ಸುಧಾರಿಸಿದ್ದು, ದೈನಿಕ ಪರೀಕ್ಷಾ ಸಾಮರ್ಥ್ಯವೂ ಹೆಚ್ಚಾಗಿದೆ. ಕರೊನಾ ಸಾಂಕ್ರಾಮಿಕ ರೋಗದಿಂದ ಮೃತಪಡುವವರ ದರ ಭಾರತದಲ್ಲಿ ಜಗತ್ತಿನಲ್ಲೇ ಅತಿ ಕಡಿಮೆಯಾಗಿದೆ. ಜಾಗತಿಕ ಮರಣ ದರ ಸುಮಾರು ಶೇ. 7ರಿಂದ 7.5 ಆಗಿದ್ದು, ಭಾರತದಲ್ಲಿ ಶೇ. 3.2 ಆಗಿದೆ. ಕೆಲವು ರಾಜ್ಯಗಳಲ್ಲಿ ಈ ದರ ಇನ್ನೂ ಕಡಿಮೆಯಿದೆ. ಗುಣಮುಖ ದರ ದರ ಶೇ. 31.7 ಆಗಿದೆ.

    ಯಾರಿಗೆ ಪರೀಕ್ಷೆ ?

    1.ಕರೊನಾ ಲಕ್ಷಣ ಇರುವವರು 2. ಸೋಂಕಿತರ ಸಂಪರ್ಕಕ್ಕೆ ಬಂದಿರುವವರು 3. ವಿದೇಶದಿಂದ ಭಾರತಕ್ಕೆ ವಾಪಸಾಗಿರುವವರು 4. ತಮ್ಮ ಊರಿಗೆ ಮರಳಿರುವ ವಲಸೆ ಕಾರ್ವಿುಕರು 5. ರ್ಯಾಂಡಮ್ ಪರೀಕ್ಷೆ (ಒಂದು ಪ್ರದೇಶದಲ್ಲಿ ಐಚ್ಛಿಕವಾಗಿ ಕೆಲ ಮಾದರಿ ಪರೀಕ್ಷೆ )

    ಸಾಮರ್ಥ್ಯ ಏರಿಕೆ

    ಭಾರತ ಇದುವರೆಗೆ ದಿನಕ್ಕೆ 75 ಸಾವಿರದಿಂದ 80 ಸಾವಿರದಷ್ಟು ಮಾದರಿಗಳನ್ನು ಸೋಂಕು ಖಾತರಿಗಾಗಿ ಪರೀಕ್ಷೆ ಮಾಡುತ್ತಿತ್ತು. ಆ ಸಾಮರ್ಥ್ಯ ಇದೀಗ ಒಂದು ಲಕ್ಷಕ್ಕೆ ಏರಿದೆ. ಮೈಲ್ಯಾಬ್ ಇದುವರೆಗೆ ಸುಮಾರು 20 ರಾಜ್ಯಗಳ 140 ಪ್ರಯೋಗಾಲಯ ಹಾಗೂ ಆಸ್ಪತ್ರೆಗಳಿಗೆ 6,50,000 ಪರೀಕ್ಷೆ ನಡೆಸಿಕೊಟ್ಟಿದೆ.

    • ಮೇ 11ರಂದು 86,191 ಜನರ ಪರೀಕ್ಷೆ ನಡೆಸಲಾಗಿತ್ತು.
    • ಭಾರತದಲ್ಲಿ 347 ಸರ್ಕಾರಿ ಪ್ರಯೋಗಾಲಯ, 137 ಖಾಸಗಿ ಪ್ರಯೋಗಾಲಯ ಇವೆ.
    • ಫೆಬ್ರವರಿಯಲ್ಲಿ ಭಾರತದಲ್ಲಿ ಒಂದೇ ಒಂದು ಲ್ಯಾಬ್ (ರಾಷ್ಟ್ರೀಯ ವೈರಾಣು ಸಂಸ್ಥೆ) ಇತ್ತು. ಆದರೆ ದೇಶದಲ್ಲಿ ಈಗ 484 ಪ್ರಯೋಗಾಲಯಗಳಿವೆ.
    • ಸರ್ಕಾರ ದೇಶದಾದ್ಯಂತ 76.42 ಲಕ್ಷ ಎನ್95 ಮಾಸ್ಕ್ ವಿತರಿಸಿದೆ.
    • 40.18 ಲಕ್ಷ ವೈಯಕ್ತಿಕ ಸುರಕ್ಷತಾ ಸಲಕರಣೆ (ಪಿಪಿಇ) ಕಿಟ್ ವಿತರಿಸಿದೆ.
    • ಕೊವಿಡ್ ಚಿಕಿತ್ಸೆಗೆ ಮೀಸಲಾದ 880 ಆಸ್ಪತ್ರೆಗಳಿವೆ. 1,77,498 ಅವುಗಳ ಹಾಸಿಗೆ ಸಾಮರ್ಥ್ಯ.
    • 2058 ಕೊವಿಡ್ ಆರೈಕೆ ಕೇಂದ್ರಗಳನ್ನು (ಸಿಸಿಸಿ) ನಿರ್ವಿುಸಲಾಗಿದೆ.
    • ದೇಶದಲ್ಲಿ 8,147 ಕ್ವಾರಂಟೈನ್ ಕೇಂದ್ರಗಳನ್ನು ಅಭಿವೃದ್ಧಿಪಡಿಸಲಾಗಿದೆ.
    • ಶೇಕಡಾ 0.41 ಕರೊನಾ ರೋಗಿಗಳು ವೆಂಟಿಲೇಟರ್​ನಲ್ಲಿದ್ದಾರೆ.
    • ಶೇ. 1.82 ಮಂದಿ ಆಮ್ಲಜನಕದ ಬೆಂಬಲದಲ್ಲಿ ಹಾಗೂ ಶೇ. 2.31 ಜನರು ಐಸಿಯುಗಳಲ್ಲಿದ್ದಾರೆ.
    ಪುಣೆ ಸಂಸ್ಥೆ ಸಾಧನೆ

    ಕರೊನಾ ಪರೀಕ್ಷೆಗೆ ಅಗತ್ಯವಾದ ಕಿಟ್​ಗಳನ್ನು ಉತ್ಪಾದಿಸುವಲ್ಲಿ ಭಾರತದ ದೇಶೀಯ ಕಂಪನಿ ಕೂಡ ಸಮರ್ಥವಿದೆ ಎಂಬುದನ್ನು ಪುಣೆ ಮೂಲದ ಮೈಲ್ಯಾಬ್ ಡಿಸ್ಕವರಿ ಸಲ್ಯೂಷನ್ಸ್ ತೋರಿಸಿದೆ. ಸೆರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ ಜೊತೆ ಸೇರಿ ಅದು ಈ ಸಾಧನೆ ಮಾಡಿದೆ. ಪರೀಕ್ಷೆ ನಡೆಸಲು ಕೇಂದ್ರೀಯ ಔಷಧ ಮಾನಕ ನಿಯಂತ್ರಣ ಸಂಸ್ಥೆಯ (ಸಿಡಿಎಸ್​ಸಿಒ) ಅನುಮತಿ ಗಳಿಸಿದ ಸ್ಥಳೀಯ ಕಂಪನಿಗಳಲ್ಲಿ ಮೈಲ್ಯಾಬ್ ಒಂದಾಗಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಮಾನದಂಡ ಪೂರೈಸುವ ಕಿಟ್​ಗಳನ್ನು ಸರಬರಾಜು ಮಾಡಲು ಸಿಡಿಎಸ್​ಸಿಒ ನಂತರ ಇನ್ನೂ ಆರು ಕಂಪನಿಗಳಿಗೆ ಅನುಮತಿ ನೀಡಿದೆ.

    ಚೀನಾ ವಿರುದ್ಧ ನಿರ್ಬಂಧಕ್ಕೆ ಅಮೆರಿಕ ಚಿಂತನೆ

    ಕೇಸ್ ಕ್ಲೋಸ್ ಮಾಡಿ, ಸಾಲ ಮರುಪಾವತಿಸ್ತೇನೆ- ಅಂಗಾಲಾಚುತ್ತಿದ್ದಾರೆ ವಿಜಯ್ ಮಲ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts