More

    ಹೊಸೂರುಂಡಿ ಮಠದಲ್ಲಿ ಗುರು ಸಿದ್ದಸ್ವಾಮೀಜಿ ಸ್ಮರಣೆ

    ತಿ.ನರಸೀಪುರ: ತಾಲೂಕಿನ ಪರಿಣಾಮಿಪುರದ ಬಿದರಿ ಚೌಕಿ ಮಠದ ಗುರು ಸಿದ್ದಸ್ವಾಮೀಜಿ ಇತ್ತೀಚೆಗೆ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಹೊಸೂರುಂಡಿ ಮಠದಲ್ಲಿ ಲಿಂಗೈಕ್ಯ ಶ್ರೀಗಳಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

    ಮಠದ ಒಳಾಂಗಣದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು. ಶ್ರೀಗಳ ಆತ್ಮಕ್ಕೆ ಶಾಂತಿ ಕರುಣಿಸಲೆಂದು ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.

    ವಾಟಾಳು ಸೂರ್ಯ ಸಿಂಹಾಸನ ಮಠದ ಪೀಠಾಧ್ಯಕ್ಷ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಲಿಂಗೈಕ್ಯ ಶ್ರೀಗಳು ಮಠಾಧಿಪತಿಯಾಗಿ ನಡೆದು ಬಂದ ದಾರಿಯನ್ನು ಪರಿಚಯ ಮಾಡಿಕೊಟ್ಟರು. ಸರಳ ವ್ಯಕ್ತಿತ್ವದ ಸ್ವಾಮೀಜಿ ತಮಗೆ ಸಿಕ್ಕಿದ್ದ ಸರ್ಕಾರಿ ಕೆಲಸವನ್ನು ತ್ಯಜಿಸಿ ಮಠಾಧೀಶರಾಗಿ ಸೇವೆ ಸಲ್ಲಿಸಿದ್ದನ್ನು ಸ್ಮರಿಸಿ ಗುರು ಸಿದ್ದಸ್ವಾಮೀಜಿಗಳ ಗುಣಗಾನ ಮಾಡಿದರು.

    ಹೊಸೂರುಂಡಿಮಠದ ಪೀಠಾಧ್ಯಕ್ಷ ರಾಜಶೇಖರ ಸ್ವಾಮೀಜಿ ಮಾತನಾಡಿ, ಲಿಂಗೈಕ್ಯ ಶ್ರೀಗಳು ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದರು. ಹಲವು ವರ್ಷಗಳ ಕಾಲ ಮಠಾಧಿಪತಿಯಾಗಿ ಸೇವೆ ಸಲ್ಲಿಸಿ ಲಿಂಗೈಕ್ಯರಾದ ಶ್ರೀಗಳ ಅಗಲಿಕೆಯಿಂದ ತಾಲೂಕಿನ ಮಠಾಧಿಪತಿಗಳಿಗೆ ತೀವ್ರ ನೋವುಂಟಾಗಿದೆ. ಗುರು ಸಿದ್ದಸ್ವಾಮಿಗಳು ತುಮಕೂರು ಮಠಾಧೀಶರಾದ ಶಿವಕುಮಾರ ಸ್ವಾಮೀಜಿಗಳ ಸ್ನೇಹಿತರಾಗಿದ್ದು, ಇಬ್ಬರೂ ಶಾಲಾ ಸ್ನೇಹಿತರಾಗಿದ್ದರು. ತುಂಬಾ ಸರಳ ಜೀವನ ನಡೆಸುತ್ತಿದ್ದ ಶ್ರೀಗಳಿಗೆ ಹೊಸೂರುಂಡಿ ಮಠದಲ್ಲಿ ಗುರುವಂದನೆ ಕಾರ್ಯಕ್ರಮ ಮಾಡಲಾಗಿತ್ತು. ಮೈಸೂರು ಜಿಲ್ಲೆಯಲ್ಲಿ ಮೊದಲ ಸಂಸ್ಕೃತ ವಿದ್ವಾನರಾಗಿದ್ದ ಶ್ರೀಗಳು ಮೈಸೂರಿನ ಮಹಾರಾಜರ ಸಂಸ್ಥಾನದಲ್ಲಿ ವಿದ್ವಾಂಸರಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಗುರು ಸಿದ್ದಸ್ವಾಮೀಜಿಗಳ ಸರಳತೆಯನ್ನು ಕೊಂಡಾಡಿದರು.

    ಸಭೆಯಲ್ಲಿ ಶಿವಕುಮಾರ ಸ್ವಾಮಿ, ತೊಟ್ಟವಾಡಿ ಮಹದೇವಸ್ವಾಮಿ, ಹೋಟೆಲ್ ಕುಮಾರಪ್ಪ, ಜಿ.ಎಲ್.ಉಮೇಶ, ಪೂಜಿತ್ ಕುಮಾರ್, ಮಾಲಂಗಿ ಮಂಜು, ಉಮೇಶ, ಮಹದೇವಪ್ಪ, ಕೆಬ್ಬೇಹುಂಡಿ ಶಿವಕುಮಾರ್, ಎಸ್.ಎಂ.ಆರ್.ಪ್ರಕಾಶ್, ಕೈಯ್ಯಂಬಳ್ಳಿ ಅಶೋಕ, ಕೇಬಲ್ ರಾಜಶೇಖರ್, ಮೂಗೂರು ಕುಮಾರಸ್ವಾಮಿ, ಸೋಮಣ್ಣ ಮಾಸ್ಟರ್, ಬೋಗಯ್ಯನ ಹುಂಡಿ ಪ್ರಭು ಸ್ವಾಮಿ, ಶಿವಲೀಲಾ, ಹೆಳವರಹುಂಡಿ ಮೂರ್ತಿ, ಕುರುಬೂರು ಪ್ರಭುಸ್ವಾಮಿ, ತೋಂಟೇಶ್, ವಕೀಲರಾದ ಜ್ಞಾನೇಂದ್ರ ಮೂರ್ತಿ, ಪರಮೇಶ್, ಮಹೇಶ್, ಹಲಸಳ್ಳಿ ಮಹದೇವಸ್ವಾಮಿ, ಜಗದೀಶ್, ಶಾಂತರಾಜು, ಅಕ್ಕಿ ನಾಗಪ್ಪ, ಸುರೇಶ, ಸೋಮಶೇಖರ್, ಕುರುಬೂರು ನಾಗರಾಜು ಹಾಗು ಸಮಾಜದ ಟೈಲ್ಸ್ ಪ್ರಕಾಶ, ಶಿವಬಸಪ್ಪ, ವಸ್ತಿ ,ಹೊಸೂರು ಹುಂಡಿ ಗ್ರಾಮ ಹಾಗೂ ಸುತ್ತಮುತ್ತಲ ಗ್ರಾಮಗಳ ಗೌಡರು ಯಜಮಾನರು, ಮುಖಂಡರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts