More

    ದೇಶದ ದೊಡ್ಡ ಶಕ್ತಿ ಸಂವಿಧಾನ

    ಎನ್.ಆರ್.ಪುರ: ಟೀ ಮಾರಿದ್ದ ಹುಡುಗ ದೇಶದ ಪ್ರಧಾನಿಯಾಗಲು ಸಂವಿಧಾನ ಕಾರಣ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಎಂ.ಶ್ರೀನಿವಾಸ್ ಹೇಳಿದರು.

    ಶುಕ್ರವಾರ ಪ್ರವಾಸಿ ಮಂದಿರ ಸಮೀಪ ಸಂವಿಧಾನ ಜಾಗೃತಿ ಜಾಥಾ ಸ್ವಾಗತಿಸಿ, ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ದೇಶದ ದೊಡ್ಡ ಶಕ್ತಿ ಸಂವಿಧಾನವನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಪ್ರಜೆಗಳ ಮೇಲಿದೆ ಎಂದರು.
    ವಾಟರ್ ಟ್ಯಾಂಕ್ ಸಮೀಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ ಶೆಟ್ಟಿ ಮಾತನಾಡಿ, ಸಂವಿಧಾನ ಜಾಗೃತಿ ಜಾಥಾ ಎಲ್ಲ ಗ್ರಾಪಂಗಳಲ್ಲೂ ಸಂಚರಿಸಲಿದೆ. ಅಂಬೇಡ್ಕರ್ ರಚಿಸಿದ ಸಂವಿಧಾನದಿಂದ ಸಮಾನತೆ ಸೃಷ್ಟಿಯಾಗುತ್ತಿದೆ ಎಂದರು.
    ವಕೀಲ ಜಿ.ದಿವಾಕರ ಮಾತನಾಡಿ, ಭಾರತದ ಸಂವಿಧಾನ ಶ್ರೇಷ್ಠವಾದುದು. ರಾಜಕೀಯ ಲಾಭಕ್ಕಾಗಿ ಕೆಲವರು ಸಂವಿಧಾನದ ಬಗ್ಗೆ ಕೀಳಾಗಿ ಮಾತನಾಡುತ್ತಿರುವುದರಿಂದ ಪ್ರತಿಯೊಬ್ಬರೂ ಸಂವಿಧಾನವನ್ನು ತಿಳಿದುಕೊಳ್ಳಲಿ ಎಂಬ ಉದ್ದೇಶದಿಂದ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
    ಪ್ರವಾಸಿ ಮಂದಿರದಿಂದ ಅಂಬೇಡ್ಕರ್ ವೃತ್ತದವರೆಗೆ ನಡೆದ ಮೆರವಣಿಗೆಯಲ್ಲಿ ಪಟ್ಟಣದ ಎಲ್ಲ ಪ್ರೌಢಶಾಲೆ, ಪ್ರಾಥಮಿಕ ಶಾಲೆ ಮಕ್ಕಳು ಭಾಗವಹಿಸಿದ್ದರು. ಮೆರವಣಿಗೆಯಲ್ಲಿ ಸಿಂಸೆಯ ವಿರಾಟ್ ವಿಶ್ವ ಕರ್ಮ ಚಂಡೆ ಬಳಗ ಆಕರ್ಷಕ ಚಂಡೆ ಪ್ರದರ್ಶನ ಗಮನ ಸೆಳೆಯಿತು. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಪೂರ್ಣ ಕುಂಭದೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
    ಪಪಂ ಸದಸ್ಯ ಮುಕುಂದ ಸಂವಿಧಾನ ಪೀಠಿಕೆ ಬೋಧಿಸಿದರು. ತಹಸೀಲ್ದಾರ್ ತನುಜಾ ಟಿ. ಸವದತ್ತಿ, ಅಧಿಕಾರಿಗಳಾದ ಉಮೇಶ್, ನಿರಂಜನಮೂರ್ತಿ, ವೀರಭದ್ರಪ್ಪ, ಡಾ. ವಿಜಯಕುಮಾರ್, ಆರ್.ಎನ್.ಮಂಜುನಾಥ್, ಪಪಂ ಸದಸ್ಯರಾದ ಜುಬೇದಾ, ಮುನಾವರ್ ಪಾಷಾ, ಮಹಮ್ಮದ್ ವಸೀಂ, ಕುಮಾರಸ್ವಾಮಿ, ಸೋಜ, ಉಮಾ, ರೇಖಾ, ರೀನಾ, ಅಧಿಕಾರಿಗಳು, ಸಂಘ ಸಂಸ್ಥೆಗಳ ಮುಖಂಡರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts