More

    ಹೊರ ಜಿಲ್ಲೆಗಳ ವಲಸಿಗರನ್ನು ನಿಯಂತ್ರಿಸಿ

    ಮುಂಡರಗಿ: ತಾಲೂಕಿನಲ್ಲಿರುವ ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳ ಗಡಿಗಳಲ್ಲಿ ಪೊಲೀಸರು ಕಟ್ಟುನಿಟ್ಟಿನ ಬಂದೋಬಸ್ತ್ ಏರ್ಪಡಿಸಬೇಕು. ಯಾರ ಒತ್ತಡ ಮತ್ತು ಮುಲಾಜಿಗೂ ಒಳಗಾಗದೆ ಹೊರ ಜಿಲ್ಲೆಗಳ ವಲಸಿಗರನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂದು ಸಚಿವ ಸಿ.ಸಿ. ಪಾಟೀಲ ಸೂಚಿಸಿದರು.

    ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಕರೊನಾ ವೈರಸ್ ನಿಯಂತ್ರಣ ಕುರಿತಂತೆ ಭಾನುವಾರ ತಾಲೂಕು ಆಡಳಿತದೊಂದಿಗೆ ಏರ್ಪಡಿಸಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

    ಆಹಾರ, ಔಷಧ ಹಾಗೂ ತರಕಾರಿ ಕೊರತೆಯಾಗುತ್ತದೆ ಎಂದು ಯಾರೂ ಆತಂಕ ಪಡುವ ಅಗತ್ಯವಿಲ್ಲ. ಆಹಾರ ಧಾನ್ಯ, ವೈದ್ಯಕೀಯ ಸೇವೆಗೆ ಯಾವುದೆ ಅಡಚಣೆ ಇಲ್ಲ. ಅಗತ್ಯ ಸಾಮಗ್ರಿಗಳ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕರೊನಾ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.

    ತಹಸೀಲ್ದಾರ್ ಡಾ.ವೆಂಕಟೇಶ ನಾಯಕ ಮಾತನಾಡಿ, ತಾಲೂಕಿನಲ್ಲಿರುವ ಅಶಕ್ತರಿಗೆ, ಬಡವರಿಗೆ, ಅಸಂಘಟಿತ ಕೂಲಿ ಕಾರ್ವಿುಕರಿಗೆ ಅಗತ್ಯವಿರುವ ಆಹಾರ ಹಾಗೂ ಮತ್ತಿತರ ಸಾಮಗ್ರಿಗಳನ್ನು ಪೂರೈಸಲಾಗುತ್ತಿದೆ. ಹೊರಗಿನಿಂದ ಬಂದವರನ್ನು ವಸತಿ ನಿಲಯಗಳಲ್ಲಿ ಪ್ರತ್ಯೇಕವಾಗಿ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ ಎಂದು ಮಾಹಿತಿ ನೀಡಿದರು.

    ಶಾಸಕ ರಾಮಣ್ಣ ಲಮಾಣಿ, ತಾ.ಪಂ. ಇಒ ಎಸ್.ಎಸ್. ಕಲ್ಮನಿ, ಪುರಸಭೆ ಮುಖ್ಯಾಧಿಕಾರಿ ಎಸ್.ಎಚ್. ನಾಯ್ಕರ, ಸಿಪಿಐ ಸುಧೀರಕುಮಾರ ಬೆಂಕಿ, ತಾಲೂಕು ವೈದ್ಯಾಧಿಕಾರಿ ಡಾ.ಬಸವರಾಜ ಕೆ. ಡಾ.ಕೀರ್ತಿಹಾಸ, ಈಶ್ವರಪ್ಪ ಹಂಚಿನಾಳ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts