More

    ಹಸುವಿನ ಮೇಲೆ ಸಲಗ ದಾಳಿ

    ಹನಗೋಡು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಂಚಿನ ಕಿಕ್ಕೇರಿಕಟ್ಟೆ ಗ್ರಾಮದ ಪ್ರಕಾಶ್ ಅವರ ಹಸುವಿನ ಮೇಲೆ ಒಂಟಿ ಸಲಗ ದಾಳಿ ನಡೆಸಿದ್ದು, ಅದು ತೀವ್ರ ಗಾಯಗೊಂಡಿದೆ.

    ಶುಕ್ರವಾರ ರಾತ್ರಿ 12.30ಕ್ಕೆ ಹುಣಸೂರು ವಲಯದ ಅರಣ್ಯ ಪ್ರದೇಶದಿಂದ ಬಂದಿರುವ ಸಲಗವು ಪ್ರಕಾಶ್ ಮನೆಯ ಬಳಿಯ ಕೊಟ್ಟಿಗೆಯಲ್ಲಿ ಕಟ್ಟಲಾಗಿದ್ದ ಹಸುವನ್ನು ದಂತದಿಂದ ತಿವಿದಿದೆ. ಪರಿಣಾಮ ತೀವ್ರ ರಕ್ತಸ್ರಾವವಾಗಿ ಕರಳು ಹೊರ ಬಂದಿದೆ. ಸಲಗ ಬಂದ ವೇಳೆ ಹಸು ಅರಚಾಡಿದ್ದನ್ನು ಗಮನಿಸಿ, ಜನರು ಹೊರಬರುವ ವೇಳೆಗಾಗಲೇ ಹಸವನ್ನು ಗಾಯಗೊಳಿಸಿತ್ತು. ಬಳಿಕ ಜನರ ಕೂಗಾಟ ಕಂಡು ಸಲಗ ಕಾಡಿನತ್ತ ಓಡಿತು. ಸ್ಥಳಕ್ಕೆ ಮುದ್ದನಹಳ್ಳಿ ವನಪಾಲಕ ಸಿದ್ದರಾಜ್ ಮತ್ತು ಸಿಬ್ಬಂದಿ ಭೇಟಿ ನೀಡಿ ಮಹಜರು ನಡೆಸಿದರು.

    ರೈತರ ಆಕ್ರೋಶ: ಕೆಲ ದಿನಗಳಿಂದಷ್ಟೇ ಹೆಬ್ಬಾಳ ಗ್ರಾಮದಲ್ಲಿ ಸಲಗ ದಾಳಿಯಿಂದ ಹಸು ಸಾವಿಗೀಡಾಗಿತ್ತು. ಇಂತಹ ಪ್ರಕರಣಗಳು ಮರುಕಳಿಸುತ್ತಲೇ ಇದ್ದರೂ ಸೂಕ್ತ ಕ್ರಮಕೈಗೊಂಡು ವನ್ಯಜೀವಿಗಳ ಹಾವಳಿಯನ್ನು ನಿಯಂತ್ರಿಸಲು ಅರಣ್ಯ ಇಲಾಖೆ ವಿಫಲವಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts