More

    ಹಳೇ ಕಾಮಗಾರಿಗೆ ಹೆಚ್ಚುವರಿ ಬಿಲ್ ಪಾವತಿ!

    ಕಿರುವಾರ ಎಸ್.ಸುದರ್ಶನ್ ಕೋಲಾರ
    ನಗರಾಭಿವೃದ್ಧಿಗಾಗಿ ಸರ್ಕಾರದಿಂದ ಕೋಲಾರ ನಗರಸಭೆಗೆ ಬಿಡುಗಡೆಯಾಗಿರುವ ಅನುದಾನವನ್ನು ಹಳೇ ಕಾಮಗಾರಿಗಳ ಬಿಲ್ ಬಾಕಿ ಇದೆ ಎಂಬ ನೆಪವೊಡ್ಡಿ ನಕಲಿ ಬಿಲ್ ಸೃಷ್ಟಿಸಿ ಬಳಕೆ ಮಾಡಿದ್ದಾರೆ ಎನ್ನಲಾಗಿದ್ದು ಇದು ನಗರಸಭೆ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿದೆ.

    ನಗರಸಭೆ ವ್ಯಾಪ್ತಿಯಲ್ಲಿ 35 ವಾರ್ಡ್ಗಳಿದ್ದು, ಕೇಂದ್ರ, ರಾಜ್ಯ ಪುರಸ್ಕೃತ ಯೋಜನೆಗಳಡಿ ಅಭಿವೃದ್ಧಿಗಾಗಿ ಪ್ರತಿ ವರ್ಷವು ಕೋಟ್ಯಂತರ ರೂ. ಅನುದಾನ ಮಂಜೂರಾಗುತ್ತದೆ. ಇದಕ್ಕೆ ಕ್ರಿಯಾಯೋಜನೆ ತಯಾರಿಸಿ ನಿಯಮಗಳ ಪ್ರಕಾರ ಟೆಂಡರ್ ಕರೆಯುವುದು ನಿಯಮ. ಆದರೆ ನಗರಸಭೆ ಅಽಕಾರಿಗಳು ಹಳೇ ಕಾಮಗಾರಿಗಳಿಗೆ ನಕಲಿ ಬಿಲ್ ತಯಾರಿಸಿ ಹಣ ಬಿಡುಗಡೆ ಮಾಡಿದ್ದಾರೆ ಎನ್ನಲಾಗಿದೆ.
    ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಅವಧಿ ಮುಗಿದ್ದು, ಜಿಲ್ಲಾಽಕಾರಿಯನ್ನು ಸರ್ಕಾರ ಆಡಳಿತಾಧಿಕಾರಿಯನ್ನಾಗಿ ನೇಮಿಸಲಾಗಿದೆ. ಇದರಿಂದಾಗಿ ಸದಸ್ಯರ ಮಾತಿಗೂ ಕಿಮ್ಮತ್ತಿಲ್ಲ. ಸಮಸ್ಯೆ ಹೇಳಿಕೊಂಡು ಕಚೇರಿಗೆ ಸಾರ್ವಜನಿಕರು ಹೋದರೂ ಅಽಕಾರಿಗಳು, ಸಿಬ್ಬಂದಿ ಲಭ್ಯವಾಗುತ್ತಿಲ್ಲ. ಚುನಾಯಿತ ಆಡಳಿತ ಮಂಡಳಿ ಇಲ್ಲದ ಕಾರಣ ಅಧಿಕಾರಿಗಳು, ಸಿಬ್ಬಂದಿ ಆಡಿದ್ದೇ ಆಟವಾಗಿದೆ ಎನ್ನುವುದು ಸದಸ್ಯರ ಆಕ್ರೋಶ.

    ಆರೋಪವೇನು?: 2020-21, 2021-22, 2022-23ನೇ 15ನೇ ಹಣಕಾಸು ಆಯೋಗದ ಸಾಮಾನ್ಯ ಮೂಲ ಅನುದಾನಗಳಿಗೆ ಜಿಲ್ಲಾಧಿಕಾರಿಗಳಿಂದ ಕ್ರಿಯಾಯೋಜನೆಯ ಅನುಮೋದನೆ ಪಡೆದು ಕೈಗೊಂಡಿರುವ ಕಾಮಗಾರಿಗಳಲ್ಲಿ 50.18 ಲಕ್ಷ ರೂ. ಉಳಿಕೆಯಾಗಿರುವ ಮೊತ್ತಕ್ಕೆ ಲೆಕ್ಕಶಾಖೆ ಮತ್ತು ಆನ್‌ಲೈನ್ ತಂತ್ರಾಂಶದಲ್ಲಿ ಪರಿಶೀಲಿಸಿ ಈ ಮೊತ್ತಕ್ಕೆ ಹಣ ವೆಚ್ಚವಾಗಿದೆ ಎಂದು ನಕಲಿ ದಾಖಲೆ ಸೃಷ್ಟಿಸಿದ್ದಾರೆ ಎಂದು ಸದಸ್ಯರು ದೂರಿದ್ದಾರೆ.

    ೧೫ನೇ ಹಣಕಾಸು ಆಯೋಗದಿಂದ ೩ ವರ್ಷದಲ್ಲಿ ರಸ್ತೆ, ಮಳೆ ನೀರು ಚರಂಡಿ, ಒಳ ಚರಂಡಿ, ಪಾದಚಾರಿ ಕಾಮಗಾರಿಗೆ ಒಟ್ಟು ೫೦.೧೮ ಲಕ್ಷ ರೂ. ಸರ್ಕಾರ ಬಿಡುಗಡೆ ಮಾಡಿತ್ತು. ಈ ಹಣವನ್ನು ಆಗಿರುವ ಕಾಮಗಾರಿಗಳಿಗೆ ಬಿಲ್ ತೋರಿಸಿ ಡ್ರಾ ಮಾಡುವ ಬದಲು ಹೊಸ ಕಾಮಗಾರಿಗಳನ್ನು ಏಕೆ ಕೈಗೆತ್ತಿಕೊಳ್ಳಬಾರದು ಎಂದು ನಗರಸಭೆ ಸದಸ್ಯರು ಪ್ರಶ್ನಿಸಿದ್ದಾರೆ.

    ರಾಜ್ಯ ಪೌರಾಡಳಿತ ನಿರ್ದೇಶನಾಲಯದ ಆದೇಶದಂತೆ ಕೇಂದ್ರ ಪುರಸ್ಕೃತ ಅಮೃತ್-೧.೦ ಯೋಜನೆಯಡಿ ಕೈಗೊಂಡಿರುವ ಕೋಡಿಕಣ್ಣೂರು, ಮಣಿಘಟ್ಟ, ಸುಲ್ತಾನ್ ತಿಪ್ಪಸಂದ್ರ, ರಹಮತ್ ನಗರದ ರಾಜಕಾಲುವೆ ಕಾಮಗಾರಿಗೆ, ರಸ್ತೆ ಅಭಿವೃದ್ಧಿಗೆ, ಕೊಳವೆಬಾವಿ ಕೊರೆಸುವುದು, ಬೀದಿದೀಪಗಳ ಅಳವಡಿಕೆ, ಪೈಪ್‌ಲೈನ್ ಅಳವಡಿಸಲು ಕಾಮಗಾರಿಗೆ ಹೆಚ್ಚುವರಿ ಬಿಲ್ ಆಗಿದ್ದು, ಅನುದಾನ ಬಿಡುಗಡೆಗೆ ತೀರ್ಮಾನ ಕೈಗೊಂಡಿದ್ದಾರೆ.

    • ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ದೂರು
      ಹಳೇ ಕಾಮಗಾರಿಗೆ ಬಿಲ್ ಪಾವತಿ ಮಾಡಿರುವ ಕುರಿತು ನಗರಸಭೆ ಸದಸ್ಯ ಎಸ್.ಆರ್.ಮುರಳಿಗೌಡ ರಾಜ್ಯ ಉಪ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದು, ಪ್ರಕರಣವು ವಿಚಾರಣೆ ಹಂತದಲ್ಲಿರುವ ಸಂದರ್ಭದಲ್ಲೂ ಅಧಿಕಾರಿಗಳು ಗುತ್ತಿಗೆದಾರನಿಗೆ ಬಿಲ್ ನೀಡಿದ್ದಾರೆ. ತಪ್ಪಿತಸ್ಥ ಅಽಕಾರಿಗಳ ಮೇಲೆ ಕಾನೂನು ರೀತಿ ಕ್ರಮ ಕೈಗೊಂಡು ಫೆ.29ರಂದು ನಡೆದ ಸಭೆಯ ತೀರ್ಮಾನವನ್ನು ತಡೆಹಿಡಿದು ಸಾರ್ವಜನಿಕರ ಮೂಲಸೌಕರ್ಯಕ್ಕೆ ಬಂದಿರುವ ಅನುದಾನವನ್ನು ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಬೇಕು ಎಂದು ದೂರಿನಲ್ಲಿ ಮುರಳಿಗೌಡ ಕೋರಿದ್ದಾರೆ.

    • ಮುಂಜಾನೆ 3 ಗಂಟೆಯಲ್ಲಿ ಸಭೆ!!

    2024ರ ಫೆ.29ರಂದು ಮುಂಜಾನೆ 3 ಗಂಟೆ ಸುಮಾರಿಗೆ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ನಗರಸಭೆಯ ಆಡಳಿತಾಽಕಾರಿಗಳ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಸಲಾಗಿದೆ ಎಂದು ನಡಾವಳಿ ಪುಸ್ತಕದಲ್ಲಿ ನಮೂದು ಮಾಡುವ ಮೂಲಕ ಅಧಿಕಾರಿಗಳು ಎಡವಟ್ಟು ಮಾಡಿದ್ದಾರೆ.

    • ಮಾಡಿರುವ ಕೆಲಸಕ್ಕೆ ಹೆಚ್ಚುವರಿ ಬಿಲ್
      ಫೆ.20ರಂದು ನಡೆದಿರುವ ಸಭೆಯಲ್ಲಿ ತೀರ್ಮಾನ ಕೈಗೊಂಡು ವಿಷಷಯ ಸಂಖ್ಯೆ 7ರಲ್ಲಿ 4-5 ವರ್ಗಷಳ ಹಿಂದೆ ಅಮೃತ್ ಯೋಜನೆಯಲ್ಲಿ ಮಳೆನೀರು ಚರಂಡಿ ಕಾಮಗಾರಿಗಳ ಟೆಂಡರನ್ನು ಬೆಂಗಳೂರಿನ ಸಂಸ್ಥೆಗೆ 10 ಕೋಟಿ ರೂ. ವೆಚ್ಚದ ಕೆಲಸ ನೀಡಲಾಗಿತ್ತು. ಇದಕ್ಕೂ ಮೀರಿ ಹೆಚ್ಚುವರಿ ಬಿಲ್ ಪಡೆದುಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಎಷ್ಟು ಬಿಲ್ ಹೆಚ್ಚುವರಿಯಾಗಿದೆ ಎಂಬುದು ಸಾಬೀತಾಗಿಲ್ಲ.

    ಹಳೇ ಕಾಮಗಾರಿಗೆ ಹೆಚ್ಚುವರಿ ಬಿಲ್ ಪಾವತಿ!
    ಈ ಬಗ್ಗೆ ಉಪ ಲೋಕಾಯುಕ್ತರಿಗೆ ದೂರುನೀಡಿದ್ದು, ಪ್ರಕರಣ ವಿಚಾರಣೆ ಹಂತದಲ್ಲಿದೆ. ದೂರಿನ ಮೇರೆಗೆ ಲೋಕಾಯುಕ್ತ ತಾಂತ್ರಿಕ ಅಽಕಾರಿಗಳು ಕಾಮಗಾರಿ ಪರಿಶೀಲಿಸಿದ್ದು, ಹೆಚ್ಚುವರಿ ಬಿಲ್ ಪಾವತಿ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
    | ಎಸ್.ಆರ್.ಮುರಳಿಗೌಡ, ನಗರಸಭೆ ಸದಸ್ಯ, ಕೋಲಾರ.
    ಹಳೇ ಕಾಮಗಾರಿಗೆ ಹೆಚ್ಚುವರಿ ಬಿಲ್ ಪಾವತಿ!

    ಗುತ್ತಿಗೆದಾರ ಟೆಂಡರ್ ಪಡೆದುಕೊಂಡಿರುವ ಮೊತ್ತಕ್ಕಿಂತ ಹೆಚ್ಚುವರಿಯಾಗಿ ನೀಡಿಲ್ಲ. ಯಾವುದೇ ಅಭಿವೃದ್ಧಿ ಕಾಮಗಾರಿ ಟೆಂಡರ್ ಪಡೆದುಕೊಂಡರೆ ಗುತ್ತಿಗೆದಾರ ನಿಗದಿ ಮೊತ್ತದಲ್ಲಿ ಕೆಲಸ ಮುಗಿಸಬೇಕು.
    | ಶಿವಾನಂದ, ಪೌರಾಯುಕ್ತ, ಕೋಲಾರ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts