More

    ಹಳೆಯ ಸಿನಿಮಾ ಹಾಡುಗಳು ಎಂದಿಗೂ ನವ ನವೀನ

    ಹೊಳೆನರಸೀಪುರ: ನಮ್ಮ ಕನ್ನಡ ಸಿನಿಮಾ ರಂಗದ ಹಳೆಯ ಹಾಡುಗಳು ಸದಾಕಾಲ ನವ ನವೀನ. ಎಷ್ಟೇ ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ ಎಂದು ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ ಬಣ್ಣಿಸಿದರು.

    • ಭಾನುವಾರ ಪಟ್ಟಣದಲ್ಲಿ ವೈಷ್ಣವಿ ಚಾರಿಟಬಲ್ ಟ್ರಸ್ಟ್, ರೋಟರಿ, ಲಯನ್ಸ್, ಎಲೆಕ್ಟ್ರಾನಿಕ್ ಉಪಕರಣ ರಿಪೇರಿದಾರರ ಸಂಘ ಹಾಗೂ ವಿವಿಧ ಸಂಘಸಂಸ್ಥೆಗಳ ಆಶ್ರಯದಲ್ಲಿ ಪುನೀತ್ ರಾಜ್‌ಕುಮಾರ್ ನೆನಪಿಗಾಗಿ ಆಯೋಜಿಸಿದ್ದ ಓಲ್ಡ್ ಈಸ್ ಗೋಲ್ಡ್ ಹಳೇ ಚಿತ್ರಗೀತೆಗಳ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ಕನ್ನಡ ಚಿತ್ರರಂಗದ ಮೇರು ನಟ ಪುನೀತ್ ರಾಜಕುಮಾರ್ ಅವರ ತಾಯಿ ಪಾರ್ವತಮ್ಮ ರಾಜಕುಮಾರ್ ಅವರ ಊರು ಹಾಗೂ ನನ್ನ ಊರು ಸಾಲಿಗ್ರಾಮ. ಪುನೀತ್ ರಾಜ್‌ಕುಮಾರ್ ಬಾಲ್ಯದಲ್ಲಿ ನಮ್ಮ ಮನೆಗಳಲ್ಲಿ ಆಟ ಆಡುತ್ತಾ ಬೆಳೆದವರು. ಕನ್ನಡಿಗರ ಮನಸ್ಸುಗಳನ್ನು ಗೆದ್ದು ಮರೆಯಾದ ಮಾಣಿಕ್ಯ ಎಂದರು.
    • ಹಿರಿಯರ ವಿಭಾಗದಲ್ಲಿ ಕ್ರಮವಾಗಿ ರೇಣುಕಾ ತೀರ್ಥಪ್ಪ, ಕೆ.ಆರ್.ಪೇಟೆಯ ಶಿವರಾಜು, ಚೆನ್ನಕೇಶವ, ಹಾಸನದ ಮಾಲತಿ, ಸುರೇಶ್ ಕುಮಾರ್, ಕಿರಿಯರ ವಿಭಾಗದಲ್ಲಿ ಹೇಮಾಶ್ರೀ, ಐಶ್ವರ್ಯ, ಸ್ವಸ್ತಿ ಸುರೇಶ್, ಕೆ.ಆರ್.ಪೇಟೆಯ ಶಬರೀಶ ಕ್ರಮವಾಗಿ 5, 4, 3, 2, 1 ಸಾವಿರ ರೂ.ಗಳನ್ನು ಪಡೆದುಕೊಂಡರು.
    • ಕಾಮಿಡಿ ಕಿಲಾಡಿಯ ಸಂತು, ಗಿಚ್ಚಿ ಗಿಲಿಗಿಲಿಯ ಚಂದ್ರಪ್ರಭ ನಡೆಸಿಕೊಟ್ಟ ಹಾಸ್ಯಕಾರ್ಯಕ್ರಮ ಗಮನ ಸೆಳೆಯಿತು. ತಾಲೂಕಿನ ಕೆರಗೋಡು ಗ್ರಾಮದ ತರಿಕೆರೆ ಉಪ ವಿಭಾಗಾಧಿಕಾರಿ ಕೆ.ಜೆ. ಕಾಂತರಾಜು, ಮೂಲತಃ ಹೊಳೆನರಸೀಪುರದವರೇ ಆದ ಬೆಂಗಳೂರು ಕೆ.ಆರ್.ಪುರಂ ಠಾಣೆಯ ಎಸ್‌ಐ ಕೆ.ಅನಿತಾ, ರಾಜನ್-ನಾಗೇಂದ್ರ ಕುಟುಂಬದ ಜಯಲಕ್ಷ್ಮೀ ಅವರನ್ನು ಸನ್ಮಾನಿಸಿಸಲಾಯಿತು.
    • ವೈಷ್ಣವಿ ಚಾರಿಟಲ್ ಟ್ರಸ್ಟಿನ ಅಧ್ಯಕ್ಷೆ ಕಾಮಾಕ್ಷಿ, ಆರ್ಕೆಸ್ಟ್ರಾ ಕಿಟ್ಟಿ, ರೋಟರಿ ಸಂಸ್ಥೆಯ ಅಧ್ಯಕ್ಷ ರೇಣುಕೇಶ್, ಮುರಳೀಧರ್ ಗುಪ್ತಾ, ಲಯನ್ಸ್ ಸಂಸ್ಥೆಯ ಮನೀಶ್ ಗಾಂಧಿ, ಪುರಸಭೆಯ ಮಾಜಿ ಅಧ್ಯಕ್ಷೆ ವೀಣಾ, ಜ್ಯೋತಿ, ಸ್ಕೌಟ್ ಆ್ಯಂಡ್ ಗೈಡ್ ಸಂಸ್ಥೆಯ ಕುಮುದಾ, ಲಕ್ಷ್ಮೀ, ಅಶೋಕ್, ರಾಮದಾಸ್, ಪ್ರೇಮಾ ಮಂಜುನಾಥ್, ಎಚ್.ಸಿ.ಎನ್. ಚಂದ್ರು, ಡಿ.ಕೆ.ಕುಮಾರಯ್ಯ, ಧನ್ಯಕುಮಾರ್, ರವೀಶ್, ಮಂಜುಳಾ ರವೀಶ್, ಶಿವಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts