More

    ಸೇವೆ ಸ್ಥಗಿತಗೊಳಿಸಿದ ಆಶಾ ಕಾರ್ಯಕರ್ತೆಯರು

    ಗದಗ: ಮಾಸಿಕ 12 ಸಾವಿರ ರೂ. ವೇತನ ನಿಗದಿ ಪಡಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶುಕ್ರವಾರ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದ ಆಶಾ ಕಾರ್ಯಕರ್ತೆಯರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸತೀಶ ಬಸರೀಗಿಡದ ಅವರಿಗೆ ಮನವಿ ಸಲ್ಲಿಸಿದರು.

    ಕಳೆದ ಒಂದು ವಾರದಿಂದ ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ, ತಹಸೀಲ್ದಾರರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಆಶಾ ಕಾರ್ಯಕರ್ತೆಯರು ಶುಕ್ರವಾರದಿಂದ ಆರೋಗ್ಯ ಸೇವೆ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಹೋರಾಟ ಆರಂಭಿಸಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಕೇಂದ್ರ ಆರೋಗ್ಯ ಸಚಿವಾಲಯ ಕೋರಾನಾ ತಡೆಗಟ್ಟುವಲ್ಲಿ ರಾಜ್ಯದ ಆಶಾ ಕಾರ್ಯಕರ್ತೆಯರ ಸೇವೆಯನ್ನು ಶ್ಲಾಘಿಸಿದ್ದು ಸಂತಸ ತಂದಿದೆ. ಆದರೆ, ಕರೊನಾ ಹೋರಾಟದಲ್ಲಿ ಆಶಾ ಕಾರ್ಯಕರ್ತೆಯರು ವೇತನವಿಲ್ಲದೆ, ರಕ್ಷಣೆ ಇಲ್ಲದೆ ತೊಂದರೆ ಅನುಭವಿಸಿದ್ದಾರೆ. ದುಡಿಮೆಗೆ ತಕ್ಕ ಪ್ರತಿಫಲವಿಲ್ಲದೆ ಅನಿಶ್ಚಿತ ವೇತನದಿಂದ ಹೈರಾಣಾಗಿದ್ದಾರೆ. ಕಾರಣ ರಾಜ್ಯ ಸರ್ಕಾರ ಮಾಸಿಕ ಕನಿಷ್ಠ 12,000 ರೂ. ವೇತನ ನಿಗದಿ ಪಡಿಸಬೇಕು ಎಂದು ರಾಜ್ಯದ ಆಶಾ ಕಾರ್ಯಕರ್ತೆಯರ ಒಕ್ಕೂರಿಲಿನ ಬೇಡಿಕೆಯಾಗಿದೆ. ಆಶಾ ಕಾರ್ಯಕತೆಯರು ಜೀವದ ಹಂಗು ತೊರೆದು ಕೋವಿಡ್-19 ವಿರುದ್ಧ ಕೆಲಸ ಮಾಡುತ್ತಿದ್ದು ಸೂಕ್ತ ಸುರಕ್ಷತಾ ಸಾಮಗ್ರಿಗಳನ್ನು ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

    ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರ ಸಂಘದ ಗದಗ ಶಹರ ಅಧ್ಯಕ್ಷೆ ಲಕ್ಷ್ಮಿ ಪೂಜಾರ, ಶೋಭಾ ಮಠ, ರೇಣುಕಾ ಜವಳಿ, ಗೀತಾ ಭಜಂತ್ರಿ, ಗೌರವ್ವ ಕಟ್ಟಿಮನಿ, ಶೃತಿ ಮಂಚಾಲಿ, ಅನ್ನಪೂರ್ಣ ದಲಬಂಜನ್, ಗೀತಾ ಚಲವಾದಿ, ಸವಿತಾ ಪಾಟೀಲ, ಅನ್ನಪೂರ್ಣ ಬನವಾಸಿ, ಲಕ್ಷ್ಮಿ ನೀಲಗುಂದ, ಲತಾ ಹುಡೇದ, ರಂಜಾನ್ ಸೊಲ್ಲಾಪುರ, ಪ್ರೇಮಾ ಪಾಟೀಲ, ಗೌರವ್ವ ಹಡಗಲಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts