More

    ಗಾರಂಪಳ್ಳಿ ಸೇತುವೆ ಮೇಲ್ದರ್ಜೆಗೇರಿಸಿ

    ಚಿಂಚೋಳಿ: ಗಾರಂಪಳ್ಳಿ ಸೇತುವೆ ಮೇಲ್ದರ್ಜೆಗೇರಿಸುವಂತೆ ಆಗ್ರಹಿಸಿ ಗಾರಂಪಳ್ಳಿ ಗ್ರಾಮಸ್ಥರು ಪಟ್ಟಣದ ತಹಸಿಲ್ ಕಚೇರಿಯವರೆಗೆ ಮಂಗಳವಾರ ೧೦ ಕಿಮೀ ಪಾದಯಾತ್ರೆ ನಡೆಸಿ ತಹಸೀಲ್ದಾರಗೆ ಮನವಿ ಸಲ್ಲಿಸಿದರು.

    ಗಾರಂಪಳ್ಳಿಯ ಡಾ. ಅಂಬೇಡ್ಕರ್ ವೃತ್ತದಿಂದ ಬೆಳಗ್ಗೆ ೧೧ ಗಂಟೆಗೆ ಪ್ರಾರಂಭಗೊಂಡ ಪಾದಯಾತ್ರೆ ಗೌಡನಹಳ್ಳಿ ಕ್ರಾಸ್, ಚಿಮ್ಮಇದಲಾಯಿ ಕ್ರಾಸ್, ಸಿದ್ಧಸಿರಿ ಇಥೆನಾಲ್ ಕಂಪನಿಯ ಮೂಲಕ ಮಧ್ಯಾಹ್ನ ೨ಕ್ಕೆ ತಹಸಿಲ್ ಕಚೇರಿಗೆ ತಲುಪಿತು.

    ಗಾರಂಪಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪವನಕುಮಾರ ಪಾಟೀಲ್ ಮಾತನಾಡಿ, ಗ್ರಾಮದ ರೈತರ, ವಿದ್ಯಾರ್ಥಿಗಳ ಹಾಗೂ ಜನಸಾಮಾನ್ಯರ ಗೋಳು ಸರ್ಕಾರ ಕೇಳದಂತಾಗಿದೆ. ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸದೆ ಇರುವುದರಿಂದ ನೊಂದು ಪಾದಯಾತ್ರೆ ಮಾಡುವ ಸ್ಥಿತಿ ಬಂದಿದೆ. ಇನ್ನೂ ಮುಂದಾದರೂ ಸರ್ಕಾರ ಸ್ಪಂದಿಸದಿದ್ದರೆ ಉಗ್ರ ಹೋರಾಟಕ್ಕೆ ಸಿದ್ಧವಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಪ್ರಮುಖರಾದ ಸೋಮಶೇಖರ ಪಾಟೀಲ್, ಸಂಗಯ್ಯ ಸ್ವಾಮಿ, ಚಂದ್ರಶೇಖರ ಗುತ್ತೇದಾರ್, ಗಂಗಾಧರ ಕುಲಕರ್ಣಿ, ಮೋಹನ ಗುತ್ತೇದಾರ್, ಗೋಪಾಲ ಗಾರಂಪಳ್ಳಿ, ವಿಶ್ವನಾಥ ಮಗಿ, ಸುಭಾಷ ಕೊಂಡಾ, ಶಿವು ಅಂಬಲಗಿ, ಅಜರೋದ್ದಿನ್ ಕೇಶ್ವಾರ, ರೇವಣಸಿದ್ದ ಭರಮ್, ರಜನಿಕಾಂತ ಬುಳ್ಳಾ, ಶಾಮರಾವ, ಈಶ್ವರ ಇತರರಿದ್ದರು. ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ ಸುಬ್ಬಣ್ಣ ಜಮಖಂಡಿ ಅವರಿಗೆ ಸಲ್ಲಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts