More

    ಸಿಂದಗಿ ವಿಧಾನಸಭೆ ಉಪ ಚುನಾವಣೆ, ಮೋರಟಗಿಯಲ್ಲಿ ಕಾಂಗ್ರೆಸ್ ಸಮಾವೇಶ, ಮಲ್ಲಿಕಾರ್ಜುನ ಖರ್ಗೆ ತೀವ್ರ ವಾಗ್ದಾಳಿ, ಬಿಜೆಪಿ ಅನೈತಿಕ- ನಾಮ್ ಬದಲಾವ್ ಸರ್ಕಾರ

    ವಿಜಯಪುರ: ಬಿಜೆಪಿ ನಾಮ್ ಬದಲಾವ್ ಸರ್ಕಾರ, ಅನೈತಿಕ ಸರ್ಕಾರ, ಸಬ್ ಕಾ ಸಾಥ್ ಸಬ್ ಕಾ ವಿಕಾಸ ಹೆಸರಲ್ಲಿ ಸಬ್ ಕಾ‌ ಸತ್ಯಾನಾಶ ಮಾಡಿದ ಸರ್ಕಾರ,‌ ಜಾತಿ-ಧರ್ಮದ ಹೆಸರಲ್ಲಿ ದೇಶ ಒಡೆಯುತ್ತಿರುವ ಸರ್ಕಾರ ಎಂದು ರಾಜ್ಯ ಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.
    ಸಿಂದಗಿ ತಾಲೂಕಿನ ಮೋರುಟಗಿ ಗ್ರಾಮದಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಅವರು‌ ಮಾತನಾಡಿದರು.

    ರಾಜ್ಯ ಹಾಗೂ ದೇಶದ ದೃಷ್ಟಿಯಿಂದ ಉಪ ಚುನಾವಣೆ ಮಹತ್ವದ್ದಾಗಿದೆ. ರಾಜ್ಯದಲ್ಲಿ ಇಂದು “ಇನ್ ಲೀಗಲ್” ಸರ್ಕಾರವಿದೆ. ಜನರ ಬಹುಮತ ಇಲ್ಲದ ಪಕ್ಷ ಅಧಿಕಾರದಲ್ಲಿದೆ. ಕಾಂಗ್ರೆಸ್ ಪಕ್ಷ ಒಡೆದು ಹಣದ ಬಲ ಹಾಗೂ ಇನ್ ಕಮ್ ಟ್ಯಾಕ್ಸ್, ಇಡಿ ಸಂಸ್ಥೆ ಮೂಲಕ‌ ಹೆದರಿಸಿ ಸರ್ಕಾರ ರಚಿಸಲಾಗಿದೆ. ಇದು ಕೇವಲ‌ ಕರ್ನಾಟಕದಲ್ಲಿ ಮಾತ್ರವಲ್ಲ, ಆರು ರಾಜ್ಯಗಳಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಗೆದ್ದಿತ್ತು. ಮಧ್ಯಪ್ರದೇಶ, ಗೋವಾ, ಮಣಿಪುರ, ಉತ್ತರಾಖಂಡ ಹೀಗೆ ಹಲವು ಕಡೆ ಕಾಂಗ್ರೆಸ್ ಶಾಸಕರಿಗೆ ಆಸೆ, ಆಮಿಷ ತೋರಿಸಿ ಸರ್ಕಾರ ರಚಿಸಲಾಯಿತು. ಜನ ಬೆಂಬಲ ಕಾಂಗ್ರೆಸ್ ಗೆ ಇದ್ದರೂ ವಾಮ ಮಾರ್ಗದಿಂದ, ಹಣದ ಬಲದ ಮೇಲೆ ಬಿಜೆಪಿ ಸರ್ಕಾರ ರಚಿಸಿದೆ. ಸಿಬಿಐ, ಇಡಿ, ಇನ್ ಕಮ್ ಟ್ಯಾಕ್ಸ್ ಇಲಾಖೆ ದುರುಪಯೋಗ ಪಡಿಸಿಕೊಳ್ಳಲಾಗಿದೆ.
    ಗುಜರಾತನಲ್ಲೂ ಕಾಂಗ್ರೆಸ್ ಪಕ್ಷ ಒಡೆದರು.
    ಸಂವಿಧಾನದ ಆಧಾರದ ಮೇಲೆ, ಪ್ರಜಾಪ್ರಭುತ್ವ ದ ಆಶಯದ ಮೇಲೆ ಅಧಿಕಾರಕ್ಕೆ ಬರದೆ ವಾಮ ಮಾರ್ಗದ ಮೂಲಕ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಬಹುಮತ ಕಾಂಗ್ರೆಸ್ ಗೆ ಇದ್ದರೂ ಜನವಿರೋಧಿಯಾಗಿ ಸರ್ಕಾರ ರಚಿಸಿದ್ದು ಏಕೆ? ಕರ್ನಾಟಕದಲ್ಲಿ‌ ಬಿಜೆಪಿ ನ್ನು ನ್ಯಾಯವಾಗಿ ಜನ ಒಪ್ಪಿಲ್ಲ ಎಂದು ಖರ್ಗೆ ತಿಳಿಸಿದರು.
    ಈಗಲೂ ಜನ ಬಿಜೆಪಿಯನ್ನು ಒಪ್ಪಿಲ್ಲ. ಬೆಲೆ ಏರಿಕೆ ಬಿಸಿ ಜನತೆಗೆ ತಟ್ಟಿದೆ. ಪೆಟ್ರೋಲ್ ಬೆಲೆ ಏನಾಗಿದೆ? ಪೆಟ್ರೋಲ್ 108 ಹಾಗೂ ಡಿಸೇಲ್ 100 ರೂ.ಗಡಿ ದಾಟಿದೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ ಎಂದುಕೊಂಡು ಸಬ್ ಕಾ ಸಾಥ್ ಸಬ್ ಕಾ ಸತ್ಯಾನಾಶ ನಡೆಸಿದ್ದಾರೆ. ಹೀಗಾಗಿ ಸಿಂದಗಿಯಬುಪ ಚುನಾವಣೆ ಮೂಲಕ ಬಿಜೆಪಿಗೆ ಸಂದೇಶ ಕಳುಹಿಸಬೇಕು. ಇದೊಂದೇ ಚುನಾವಣೆಯಿಂದ ಕಾಂಗ್ರೆಸ್ ಬರಲ್ಲ ನಿಜ ಆದರೆ ಮೋದಿಗೆ ಇದೊಂದು ಎಚ್ಚರಿಕೆ ಘಂಟೆಯಾಗಲಿದೆ. ಸಿಎಂ ಬಸವರಾಜ ಬೊಮ್ಮಾಯಿಗೂ ಎಚ್ಚರಿಕೆ ಘಂಟೆಯಾಗಲಿದೆ ಎಂದರು.
    ನಾವು ತಪ್ಪು ಮಾಡಿದ್ದೇವೆ ಎಂಬ ಅರಿವು ಬಿಜೆಪಿಗೆ ಆಗಬೇಕು ಎಂದರು.
    ಪ್ರಧಾನಿ ಮೋದಿಗೆ ಪ್ರತ್ಯುತ್ಯರ:

    ನನ್ನ ಜೀವನದಲ್ಲಿ ಒಂದೇ ಒಂದು ಚುನಾವಣೆ ಕೈತಪ್ಪಿ ಹೋಯಿತು. ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ರ ಆಯ್ಕೆ ಸಭೆಯಲ್ಲಿ ಮೋದಿ ನನಗೆ 50 ವರ್ಷ ಆಯಿತು ಎಂದು ವ್ಯಂಗ್ಯವಾಡಿದರು. ಆದರೆ ನಾನಂದೆ ನೀವು ಆರ್ ಎಸ್ ಎಸ್ ಸೇರಿ ನನಗೆ ಸೋಲಿಸಿದಿರಿ ವಿನಃ ಜನ ನನಗೆ ಸೋಲಿಸಿಲ್ಲ ಎಂದು ಪ್ರತ್ಯುತ್ತರ ನೀಡಿದೆ ಎಂದು ಸ್ಮರಿಸಿದರು.
    ನಾಮ್ ಬದಲಾವ್ ಸರ್ಕಾರ:

    ಕೇಂದ್ರ ದಲ್ಲಿ ಕಾಂಗ್ರೆಸ್ ಅಧಿಕಾರ ಬಂದಾಗಲೆಲ್ಲ ಜನಪರ ಆಡಳಿತ ನೀಡಿದೆ. ಆಹಾರ ಭದ್ರತೆ, ನರೇಗಾ ಯೋಜನೆ, 8 ನೇ ತರಗತಿವರೆಗೆ
    ಉಚಿತ ಶಿಕ್ಷಣ ನೀಡಿದರು. ಬಿಜೆಪಿ ಕಾಂಗ್ರೆಸ್ ನ ಮಧ್ಯಾಹ್ನದ ಬಿಸಿಯೂಟ ಬದಲಿಸಿ ರಾಷ್ಟ್ರೀಯ ಪೋಷಣ್ ಅಭಿಯಾನ ಎಂದು ಬದಲಿಸಿದೆ. ಮಹಾತ್ಮ ಗಾಂಧಿ, ರಾಜೀವ್ ಗಾಂಧಿ ಹೀಗೆ ಹಲವರ ಹೆಸರು ಬದಲಿಸಿದೆ. ಇದೊಂದು “ನಾಮ್ ಬದಲಾವ್ ಸರ್ಕಾರ” ಎಂದ ಖರ್ಗೆ, ನಾವು ಕಟ್ಟಿದ ಮನೆಗಳಿಗೆ ಹೊಸ ಹೆಸರು ಇರಿಸಿದರೆ ವಿನಃ ಇವರೇನು ಹೊಸ ಮನೆ ಕಟ್ಟಲಿಲ್ಲ ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.

    ಕಾಂಗ್ರೆಸ್ ಬೈಯುವುದೇ ಬಿಜೆಪಿ ಸಾಧನೆ:
    2013 ರ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಸಾಧನೆ ನೋಡಿ. ನಿಮಗೆ ಮತ್ತು ಕಾಂಗ್ರೆಸ್ ಗೆ ಇರುವ ವ್ಯತ್ಯಾಸ ಗೊತ್ತಾಗುತ್ತದೆ. ಕೇವಲ ಕಾಂಗ್ರೆಸ್ ಗೆ ಬಯ್ಯುವುದೇ ಬಿಜೆಪಿ ಸಾಧನೆ. ಕಾಂಗ್ರೆಸ್ ಬಯ್ಯುವ ಬದಲು ಬಿಜೆಪಿ ಸಾಧನೆ ಹೇಳಿ ಮತ ಕೇಳಿ ಎಂದರು.
    ಧರ್ಮದ ಹೆಸರಿನಲ್ಲಿ‌ ಸಮಾಜ ಇಬ್ಭಾಗ ಮಾಡುವ‌ ಪಕ್ಷಕ್ಕೆ ಜನ ಆಸ್ಪದ ಕೊಡಬಾರದು. ಜಾತ್ಯತೀತ ಹೆಸರಲ್ಲಿರುವ ಪಕ್ಷ ಬಿಜೆಪಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಅದಕ್ಕೆಲ್ಲ ಆಸ್ಪದ ಕೊಡದೆ ಕಾಂಗ್ರೆಸ್ ಗೆ ಮತ ನೀಡಿ. ಏಕೆಂದರೆ ಇದೊಂದು ದೇಶದ ಐಕ್ಯತೆಗೆ ಹೋರಾಡಿದ ಹಾಗೂ ಬಲಿದಾನಗೈದ, ತ್ಯಾಗದ ಪಕ್ಷ ಎಂದರು.

    ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಎಂ.ಸಿ. ಮನಗೂಳಿ ಮೃತರಾಗುವ ಮುನ್ನ ನನ್ನ ಮನೆಗೆ ಬಂದಿದ್ದರು. ಬೇರೆ ಪಕ್ಷದವರಾದರೂ ಆಗಾಗ ನನ್ನ ಮನೆಗೆ ಬರುತ್ತಿದ್ದರು. ಒಂದು ದಿನ ಹಾಗೆ ಬಂದವರು ನನ್ನ ಮಗ ಕಾಂಗ್ರೆಸ್ ನಲ್ಲಿ ಇರಬೇಕೆಂಬುದು ನನ್ನ ಇಚ್ಚೆ. ಹೀಗಾಗಿ ಕಾಂಗ್ರೆಸ್ ಗೆ ಸೇರ್ಪಡೆ ಮಾಡಿಕೊಂಡು ಅವರನ್ನು ರಾಜಕೀಯವಾಗಿ ಬೆಳೆಸಬೇಕೆಂದು ಮನವಿ ಮಾಡಿದ್ದರು‌. ಇದಾದ ಕೆಲವೇ ದಿನಗಳಲ್ಲಿ ಎಂ.ಸಿ. ಮನಗೂಳಿ ನಿಧನರಾದರು. ಬಳಿಕ ಅಶೋಕ ಸಹ ಬಂದು ತಮ್ಮ ತಂದೆಯ ಇಚ್ಛೆಯಂತೆ ಕಾಂಗ್ರೆಸ್ ಗೆ ಸೇರ್ಪಡೆ ಮಾಡಿಕೊಳ್ಳಲು ವಿನಂತಿಸಲಾಗಿ ಅಶೋಕಗೆ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು. ಅಲ್ಲದೇ ದಿ.ಎಂ.ಸಿ.‌ಮನಗೂಳಿ ಅವರಿಂದ ತೆರವಾದ ಸ್ಥಾನಕ್ಕೆ ಅವರ ಪುತ್ರನನ್ನೇ ಕಣಕ್ಕಿಳಿಸುವ ತೀರ್ಮಾನ ಕೈಗೊಳ್ಳಲಾಯಿತು. ಶರಣಪ್ಪ ಸುಣಗಾರ ಸಹ ಆಕಾಂಕ್ಷಿಯಾಗಿದ್ದರು. ಈ ಭಾಗದಲ್ಲಿ ಕಾಂಗ್ರೆಸ್ ಬಲವರ್ಧನೆಗೆ ಸುಣಗಾರ ಶ್ರಮಿಸಿದ್ದರು. ಆದರೆ ಅವರಿಗೆ ಮುಂದೆ ರಾಜಕೀಯವಾಗಿ ಉತ್ತಮ ಅವಕಾಶ ನೀಡುವ ಭರವಸೆ ನೀಡಿದಾಗ ಅವರೂ ಸಮ್ಮತಿಸಿದರು. ಹೀಗಾಗಿ ಅಶೋಕ ಸರ್ವಸಮ್ಮತ ಅಭ್ಯರ್ಥಿ ಎಂದರು.

    ಅನೈತಿಕ ಸರ್ಕಾರಕ್ಕೆ ಪಾಠ ಕಲಿಸಿ:
    ಉಪ ಚುನಾವಣೆ ನಮಗೆ ಸವಾಲು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲಬೇಕು. ಏಕೆಂದರೆ ರಾಜ್ಯದಲ್ಲಿ ಅನೈತಿಕ ಸರ್ಕಾರ ಇದೆ. ಜನರ ಆಶೀರ್ವಾದ ಪಡೆದ ಪಕ್ಷ ಅಧಿಕಾರದಲ್ಲಿಲ್ಲ. 2018 ರಲ್ಲಿ ಜನ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿರಲಿಲ್ಲ. ಹೀಗಾಗಿ ಸಂವಿಧಾನ ಪ್ರಕಾರ ಬಿಜೆಪಿಗೆ ಬಹುಮತ ಸಾಬೀತು ಮಾಡಲಾಗಲಿಲ್ಲ. ಹೀಗಾಗಿ ಸಮ್ಮಿಶ್ರ ಸರ್ಕಾರ ರಚನೆಯಾಯಿತು. ಆಗ ಈ ಯಡಿಯೂರಪ್ಪ ಇದ್ದಾರಲ್ಲ ಈ ಗಿರಾಕಿ ಯಾವುದೇ ಕಾಲಕ್ಕೂ ಮುಂಬಾಗಿಲಿನಿಂದ ಬಂದ ವ್ಯಕ್ತಿಯಲ್ಲ. ಯಾವಾಗಲೂ ಹಿಂಬಾಗಿಲಿನಿಂದಲೇ ಅಧಿಕಾರಕ್ಕೆ ಬಂದ ಗಿರಾಕಿ. ಸಮ್ಮಿಶ್ರ ಸರ್ಕಾರ ಕೆಡವಿ ಅಧಿಕಾರಕ್ಕೆ ಬಂದನು. ಬಿಜೆಪಿ ಕೇಳಬೇಕಲ್ಲ ಎರಡು ವರ್ಷ ಆದ ಮೇಲೆ ಕಿತ್ತು ಬಿಸಾಕಿತು. ನರೇಂದ್ರ ಮೋದಿ ಹಾಗೂ ಅಮಿತ ಷಾ ಗೆ ಹೆದರಿ ನಾನೇ ಸ್ವಯಂ ವಿವೇಚನೆಯಿಂದ ರಾಜಿನಾಮೆ ಕೊಟ್ಟಿದ್ದಾಗಿ ಯಡಿಯೂರಪ್ಪ ಹೇಳಿ ಕಣ್ಣೀರು ಸುರಿಸಿದರು. ಈ ಯಡಿಯೂರಪ್ಪ ಆಡಳಿತ ಅತ್ಯಂತ ಕೆಟ್ಟದ್ದಾಗಿತ್ತು. ರಾಜ್ಯದ ಇತಿಹಾಸದಲ್ಲೇ ಇಂಥ ಸರ್ಕಾರ ಬಂದಿರಲಿಲ್ಲ. ಅಪ್ಪ- ಮಗ ಸೇರಿ ರಾಜ್ಯ ಲೂಟಿ ಹೊಡಿದರು. ಇದೀಗ ಸಿಎಂ ಆಗಿರುವ ಬೊಮ್ಮಾಯಿ ಜನರ ಆಶೀರ್ವಾದ ಪಡೆದು ಬಂದವರಂತೆ ವರ್ತಿಸುತ್ತಾನೆ. ಈ ಗಿರಾಕಿ ಆರ್ ಎಸ್ ಎಸ್ ನಿಂದ ಬಂದಿದ್ದು. ವಿಜಯಪುರದ ಪೊಲೀಸರು ಸಹ ಕೇಸರಿ ಶಲ್ಯೆ ಹಾಕಿಕೊಂಡು ಹಬ್ಬ ಆಚರಿಸುತ್ತಾರೆ. ಇಡೀ ದೇಶ ಕೇಸರಿಕರಣ ಮಾಡಲು ಹೊರಟಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
    ಬಿಜೆಪಿ ಗೆ ಧಮ್ ಇದ್ದರೆ, ತಾಕತ್ ಇದ್ದರೆ ತಮ್ಮ ಅವಧಿಯಲ್ಲಿ ಏನು ಅಭಿವೃದ್ಧಿ ಯಾಗಿದೆ ಎಂದು ಹೇಳಲಿ ನೋಡೋಣ.
    ನಮ್ಮ ಅವಧಿಯಲ್ಲಿ ಏನೆಲ್ಲಾ ಅಭಿವೃದ್ಧಿ ಆಗಿದೆ ಎಂದು ನಾವು ಹೇಳುತ್ತೇವೆ. ನಾವು ನಾಡಿದ ಎಲ್ಲ ಯೋಜನೆಗಳ ಪೈಕಿ ಕೆಲವು ಬದಲಿಸಿದ್ದಾರೆ, ಕೆಲವು ನಿಲ್ಲಿಸಿದ್ದಾರೆ. ಕರ್ನಾಟಕ ಹಸಿವು‌ ಮುಕ್ತ ರಾಜ್ಯವಾಗಬೇಕೆಂದು ನಾವು ಏಳು ಕೆಜಿ ಅಕ್ಕಿ‌ಕೊಟ್ಟರೆ ಇವರು‌ ಅದನ್ನು ಐದು ಕೆಜಿಗೆ ಇಳಿಸಿದರು. ಇವರೇನು ಇವರಪ್ಪನ ಮನೆಯಿಂದ ತಂದು ಕೊಡುತ್ತಿದ್ದರಾ? ಇವರಿಗೆಲ್ಲ ಹಸಿವಿನ ಬೆಲೆ ಗೊತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು.
    ಕರೊನಾ ಸಂದರ್ಭ ಹತ್ತು ಕೆಜಿ ಅಕ್ಕಿ ಹಾಗೂ ಹತ್ತು ಸಾವಿರ ರೂ.ಸಹಾಯಧನ ಕೊಡಿ ಎಂದು ಯಡಿಯೂರಪ್ಪ ಗೆ ಹೇಳಿದಾಗ ದುಡ್ಡಿಲ್ಲ ಎಂದರು. ಹಾಗಿದ್ದ ಮೇಲೆ‌ ಅಧಿಕಾರ ಬಿಟ್ಟು ಕೆಳಗಿಳಿಯಿರಿ ಎಂದೆ. ಕರೊನಾದಿಂದ ಮೃತರಾದವರಿಗೂ ಪರಿಹಾರ ನೀಡಲಿಲ್ಲ. ಸತ್ತವರ ಸಂಖ್ಯೆಯಲ್ಲೂ ಸುಳ್ಳು ಹೇಳಿದಿರಲ್ಲ ಸ್ವಾಮಿ ಎಂದು ಸಿದ್ದರಾಮಯ್ಯ ಆರೋಪಿಸಿದರು.
    ನಾಲ್ಕು ಲಕ್ಷ ಜನ ಸತ್ತರು. ದೇಶದಲ್ಲಿ ಐವತ್ತು ಲಕ್ಷ ಜನ ಸತ್ತರು. ಇವರು ರೋಗ ಬಂದು ಸತ್ತವರಲ್ಲ. ಆಕ್ಸಿಜನ್, ಬೆಡ್, ವೆಂಟಿಲೇಟರ್, ಆಂಬುಲೆನ್ಸ್, ಔಷಧ ಸಿಗದೆ ಸತ್ತರು. ಚಾಮರಾಜ ನಗರ ಆಸ್ಪತ್ರೆ ಯಲ್ಲಿ 36 ಜನ ಅಮಾಯಕರು ಆಕ್ಸಿಜನ್ ಸಿಗದೆ ಸತ್ತರು. ಆದರೆ ಆರೋಗ್ಯ ಮಂತ್ರಿ ಸುಧಾಕರ ಕೇವಲ 3 ಜನ ಮಾತ್ರ ಸತ್ತರು ಎಂದು ಸಬೂಬು ನೀಡಿದರು. ಇವರನ್ನು ಮನುಷ್ಯರು ಎಂದು ಕರೆಯಬೇಕಾ? ಇವರನ್ನು ಕೊಲೆಗಡುಕರೆಂದು ಕರೆಯಬೇಕು. ಇಂಥ ಕೊಲೆಗಡುಕರಿಗೆ ಮತ ಕೊಡಬೇಕಾ? ಇಂಥವರಿಗೆ ಮತ ಕೊಟ್ಟರೆ ರಾಜ್ಯ ಉಳಿಯುತ್ತಾ? ಎಂದು ಪ್ರಶ್ನಿಸಿದರು.
    ಒಂದು ವೇಳೆ ನಾನು ಅಧಿಕಾರದಲ್ಲಿ ಇದ್ದರೆ ಮೃತರಿಗೆ
    ಹತ್ತು ಲಕ್ಷ ಪರಿಹಾರ, ಲಾಕ್ ಡೌನ್ ಸಂದರ್ಭ ಪ್ರತಿ ಕುಟುಂಬಕ್ಕೆ ಹತ್ತು ಕೆಜಿ ಅಕ್ಕಿ, ಹತ್ತು ಸಾವಿರ ರೂ.ಪರಿಹಾರ ನೀಡುತ್ತಿದ್ದೆ ಎಂದರು.
    ಇವತ್ತು ಕರ್ನಾಟಕದ ಬಜೆಟ್ ಗಾತ್ರ
    2.46 ಸಾವಿರ ಕೋಟಿ. ಇದರಲ್ಲಿ ಹತ್ತು ಸಾವಿರ ಕೋಟಿ ಕೊಡಲಾಗುತ್ತಿರಲಿಲ್ಲವೇ? ಎಂದು ಪ್ರಶ್ನಿಸಿದರು. ಸಿಎಂ ಬೊಮ್ಮಾಯಿ ವೇಷ ಹಾಕಿಕೊಂಡು ಕುಳಿತ ಗಿರಾಕಿ. ರಾಜ್ಯ ಕೊಳ್ಳೆ ಹೊಡೆದವರಲ್ಲಿ ಬೊಮ್ಮಾಯಿ ಸಹ ಪಾಲುದಾರ ಎಂದು ಟೀಕಿಸಿದರು.
    ಕಾಂಗ್ರೆಸ್ ಅವಧಿಯಲ್ಲಿ ಐದು ಲಕ್ಷ ಮನೆಗಳನ್ನು ಹಂಚಿಕೆ ಮಾಡಲಾಯಿತು. ಈಗಿನ ಸರ್ಕಾರ‌ ಹೊಸದಾಗಿ ಮನೆ ಕೊಡೋದು ಬಿಡಿ ನಾವು ಮಂಜೂರಿಸಿದ ಮನೆಗಳನ್ನೇ ಲಾಕ್ ಮಾಡಿದ್ದಾರೆ. ಸೋಮಣ್ಣಗೆ ಲಾಕ್ ತೆಗಿಯಯ್ಯಾ ಎಂದರೆ ನಾ ತೆಗೆಯಲ್ಲ ಅಂತಾರೆ. ಹುಷಾರ್ ಈಗ ಸಿಂದಗಿ ಚುನಾವಣೆಯಲ್ಲಿ ಬಂದಿದ್ದಾರೆ ನಿಮ್ಮನ್ನೆಲ್ಲ ಲಾಕ್ ಮಾಡಿ ಬಿಟ್ಟಾರು ಎಂದು ವ್ಯಂಗ್ಯವಾಡಿದರು.

    ಅಚ್ಚೆ ದಿನ್ ಬಂತಾ?:
    ಪೆಟ್ರೋಲ್ , ಡಿಸೇಲ್, ಅಡುಗೆ ಎಣ್ಣೆ ಬೆಲೆ ಗಗನಕ್ಕೇರಿದೆ. ಇದರಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಈ ನರೇಂದ್ರ ಮೋದಿ ದೇಶವನ್ನು ಹಾಳು ಮಾಡುತ್ತಿದ್ದಾರೆ. ಇದೇನಾ ಅಚ್ಚೆ ದಿನ್ ? ಎಂದು ಪ್ರಶ್ನಿಸಿದರು.
    ಏಳು ವರ್ಷದಲ್ಲಿ 82 ಲಕ್ಷ ಕೋಟಿ ನರೇಂದ್ರ ಮೋದಿ‌ ಸಾಲ ಮಾಡಿದ್ದಾರೆ. ಒಟ್ಟು 135 ಲಕ್ಷ ಕೋಟಿ ಸಾಲ ಆಗಿದೆ. ಹೀಗಾದರೆ ದೇಶ ಉಳಿಯುತ್ತೇನ್ರಿ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
    400 ಕೋಟಿ ಇದ್ದ ಅಲ್ಪಸಂಖ್ಯಾತರ ಬಜೆಟ್ 3100 ಕೋಟಿಗೆ ಒಯ್ದಿದ್ದೆ. ಈಗ ಏನಾಗಿದೆ? ಆದರೂ ಇವರು ಸಬ್ ಕಾ ಸಾಥ್ ಸಬ್ ಕಾ ವಿಕಾಸ ಎಂದು ಬಿಜೆಪಿ ಭಾಷಣ ಬಿಗಿಯುತ್ತಾರೆ. ಎಸ್ ಸಿಪಿ, ಟಿಎಸ್ ಪಿಗೆ 30150 ಕೋಟಿ ರೂ.ಮೀಸಲಿಟ್ಟಿದ್ದೆ. ಜನಸಂಖ್ಯೆಗೆ ಅನುಗುಣವಾಗಿ ಎಸ್ ಸಿ ಮತ್ತು ಎಸ್ ಟಿಗೆ ಅನುದಾನ ಖರ್ಚು ಮಾಡಲು ನಿಯಮ ರೂಪಿಸಲಾಯಿತಿ. ಎಸ್ ಸಿ ಲ, ಎಸ್ ಟಿ ಅವರಿಗೆ ಗುತ್ತಿಗೆಯಲ್ಲೂ ಮೀಸಲಾತಿ ನೀಡಿದ್ದು ಕಾಂಗ್ರೆಸ್ ಎಂದರು.
    ಇದನ್ನು ಒಂದು ಕೋಟಿಗೆ ಏರಿಸಬೇಕೆಂದು ಹೇಳಿದ್ದೆ. ಆದರೆ ನಂತರ ಅಧಿಕಾರಕ್ಕೆ ಬಂದ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಮಾಡಲೇ ಇಲ್ಲ. ಮತ್ತೆ ನಾವು 2023 ಕ್ಕೆ ಅಧಿಕಾರಕ್ಕೆ ಬರುತ್ತೇವೆ. ಆಗ ಅದನ್ನು ಒಂದು ಕೋಟಿಗೆ ಏರಿಸುತ್ತೇವೆ ಎಂದರು.
    ಬಿಜೆಪಿ ನಂಬಬೇಡಿ. ನಂಬಿ‌ ಮೋಸ ಹೋಗಬೇಡಿ. ಅವರು ಭ್ರಮಾ ಲೋಕ ಸೃಷ್ಟಿಸುತ್ತಾರೆ. ಸುಳ್ಳು ಹೇಳುತ್ತಾರೆ. ಸುಳ್ಳಿನ ಸರಮಾಲೆಯನ್ನೇ ಕಟ್ಟಿದ್ದಾರೆ. ಕರ್ನಾಟಕದ ಬಿಜೆಪಿಗರು ಮಾತೆತ್ತಿದರೆ ಮೋದಿ ಎನ್ನುತ್ತಾರೆ. ಆ ಮೋದಿ ಸಹ ಸುಳ್ಳುಗಾರ ಎಂದರು.
    ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ. ರಾಜ್ಯದ ಪಾಲಿನ ತೆರಿಗೆ ಹಣ ಬರುತ್ತಿಲ್ಲ. 15 ನೇ
    5495 ಕೋಟಿ ರೂ. ವಿಶೇಷ ಅನುದಾನ ತೆಗೆದುಕೊಳ್ಳಲು ಇವರಿಹೆ ಆಗಲಿಲ್ಲ. ನಾನು ಸಿಎಂ ಆಗಿದ್ದರೆ ಮೋದಿ ಜೊತೆ ಜಗಳ‌ ಮಾಡಿ ತರುತ್ತಿದ್ದೆ. ಇವರಿಗೆ ಮೋದಿ ಕಂಡರ ಭಯ. 25 ಜನ ಸಂಸದರು ಒಬ್ಬರಾದರೂ ಹೋಗಿ ಕೇಳಿದ್ದಾರಾ? ಇವರಿಗೆ ರಾಜ್ಯದ ಹಿತ ಬೇಡವಾ? ಎಂದ ಸಿದ್ದರಾಮಯ್ಯ ಇವರಿಗೆ ಪಾಠ ಕಲಿಸುವ ಕಾಲ ಬಂದಿದೆ. ಉಪ ಚುನಾವಣೆ ಮೂಲಕ ಬಿಜೆಪಿಗೆ ಪಾಠ ಕಲಿಸಿ ಎಂದರು.

    ಅಭ್ಯರ್ಥಿ ಅಶೋಕ ಮನಗೂಳಿ ಮಾತನಾಡಿ, ಕಾಂಗ್ರೆಸ್ ಸೇರ್ಪಡೆಯಾಗಬೇಕೆಂಬುದು ನನ್ನ ತಂದೆ ದಿ.ಎಂ.ಸಿ.‌ಮನಗೂಳಿ ಅವರ ಆಶಯವಾಗಿತ್ತು. ಅವರು ಬದುಕದ್ದಾಗ ಕಾಂಗ್ರೆಸ್ ನ ಎಲ್ಲ ನಾಯಕರಿಗೆ ಭೇಟಿ‌ ಮಾಡಿ ನನ್ನನ್ನು ಕಾಂಗ್ರೆಸ್ ಗೆ ಸೇರ್ಪಡೆ ಮಾಡಿಕೊಳ್ಳಲು ಮನವಿ ಮಾಡಿದ್ದರು. ಆ ಪ್ರಕಾರ ಬೇಷರತ್ತಾಗಿ ನಾನು ಕಾಂಗ್ರೆಸ್ ಸೇರಿದೆ.
    ನನ್ಮ ತಂದೆಯ ಪಕ್ಷ ‌ನಿಷ್ಠೆ, ಪ್ರಾಮಾಣಿಕತೆ ಹಾಗೂ ಅಭಿವೃದ್ಧಿ ಕಾರ್ಯ ಗುರುತಿಸಿ ಕಾಂಗ್ರೆಸ್ ನನಗೆ ಟಿಕೆಟ್ ನೀಡಿತು. ಕಾಂಗ್ರೆಸ್ ಸಾಧನೆ ಹಾಗೂ ದಿ.ಎಂ.ಸಿ.‌ಮನಗೂಳಿ ಅವರ ಅಭಿವೃದ್ಧಿ ಕಾರ್ಯ ಮುಂದಿಟ್ಟುಕೊಂಡು ಮತ ಕೇಳುತ್ತಿದ್ದೇನೆ. ಈ ಚುನಾವಣೆಯಲ್ಲಿ ನಾನು ನಿಂತಿಲ್ಲ. ಇಡೀ ಕಾಂಗ್ರೆಸ್ ಪಕ್ಷವೇ ನಿಂತಿದೆ ಎಂದು ಭಾವಿಸಿ ಮತ ನೀಡಬೇಕೆಂದರು.

    ಮಾಜಿ ಶಾಸಕ ಶರಣಪ್ಪ ಸುಣಗಾರ ಮಾತನಾಡಿ, ಉಪ ಚುನಾವಣೆ ಬಯಸದೇ ಬಂದಿದೆ. ದಿ.ಎಂ.ಸಿ. ಮನಗೂಳಿ ಅವರ ಭಾವನೆ ಮೇರೆಗೆ ಅಶೋಕಗೆ ಕಾಂಗ್ರೆಸ್ ಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಾದ ಬದಲಾವಣೆ ಮುಂದಿಟ್ಟುಕೊಂಡು ಜನರಲ್ಲಿ ಮತ ಯಾಚಿಸುತ್ತಿದ್ದೇವೆ. ಆದರೆ ಬಿಜೆಪಿಗೆ ಜನರಿಂದ ಮತ ಕೇಳುವ ನೈತಿಕತೆಯೇ ಇಲ್ಲ ಎಂದರಲ್ಲದೇ ಈ ಚುನಾವಣೆ ಮುಂಬರುವ 2023 ರ ಸಾರ್ವತ್ರಿಕ ಚುನಾವಣೆಯ ದಿಕ್ಸೂಚಿ ಎಂದರು.
    ಬಸನಗೌಡ ದದ್ದಲ್ ಮಾತನಾಡಿದರು.ಜಿಪಂ ಮಾಜಿ ಸದಸ್ಯ ಮಹಾಂತಗೌಡ ಪಾಟೀಲ ಸೇರಿದಂತೆ ಹಲವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.
    ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ, ಈಶ್ವರ ಖಂಡ್ರೆ, ದೃವ ನಾರಾಯಣ, ಶಾಸಕರಾದ ಶಿವಾನಂದ ಪಾಟೀಲ, ಎಂ.ಬಿ. ಪಾಟೀಲ, ಯಶವಂತರಾಯಗೌಡ ಪಾಟೀಲ, ಆನಂದ ನ್ಯಾಮಗೌಡ, ಅಜಯ ಸಿಂಗ್, ಸಿ.ಎಸ್. ನಾಡಗೌಡ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts