More

    ಸಾಲ ಮನ್ನಾ ಮರು ಪರಿಶೀಲಿಸಿ

    ಹಳಿಯಾಳ: ಕಳೆದ ವರ್ಷ ರಾಜ್ಯದಲ್ಲಿ ನಡೆದ ಅತಿವೃಷ್ಟಿ ಮತ್ತು ನೆರೆ ಪ್ರವಾಹದಿಂದಾಗಿ ರೈತರು ಸಂಕಷ್ಟದಲ್ಲಿರುವುದರಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರೈತರ ಸಂಪೂರ್ಣ ಸಾಲ ಮನ್ನಾ ಮಾಡುವ ವಿಚಾರ ಮರು ಪರಿಶೀಲನೆ ಮಾಡಿ ರೈತರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ತೀರ್ಮಾನ ಕೈಗೊಳ್ಳಲಿ ಎಂದು ಶಾಸಕ ಆರ್.ವಿ. ದೇಶಪಾಂಡೆ ಆಗ್ರಹಿಸಿದರು.

    ಮಂಗಳವಾರ ಇಲ್ಲಿಯ ಕೃಷಿ ಇಲಾಖೆಯ ಮೈದಾನದಲ್ಲಿ ಜರುಗಿದ ರೈತರ ಮೇಳ ಕಾರ್ಯಕ್ರಮದಲ್ಲಿ ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ವಿವಿಧ ಸಾಮಗ್ರಿಗಳ ವಿತರಣೆ, ತುಂತುರ ನೀರಾವರಿ, ಚೆಕ್ ವಿತರಣೆ ಹಾಗೂ ಕೃಷಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ರಾಜಕಾರಣದಲ್ಲಿ ನಾನು ಒಂದು ಹಂತ ತಲುಪಿದ್ದೇನೆ. ಸಾಕಷ್ಟು ವರ್ಷ ಸ್ಥಾನಮಾನಗಳನ್ನು ಅನುಭವಿಸಿದ್ದೇನೆ. ನಾನು ಕಂಡದ್ದನ್ನು ನುಡಿಯುತ್ತೇನೆ. ಸರ್ಕಾರಕ್ಕೆ ಆದಾಯ ಬರುತ್ತದೆ ಎಂದು ಮದ್ಯ ಮಾರಾಟಕ್ಕೆ ಅನುಮತಿ ನೀಡುತ್ತಿದ್ದಾರೆ. ಅದನ್ನು ನಿಷೇಧಿಸದಿದ್ದರೆ ಜನರ ಕೌಟುಂಬಿಕ ಜೀವನ ಹದಗೆಡಲಿದೆ ಎಂದು ಎಚ್ಚರಿಸಿದರು.

    ವಿಪ ಸದಸ್ಯ ಎಸ್.ಎಲ್. ಘೊಟ್ನೇಕರ ಮಾತನಾಡಿದರು. ತಾಪಂ ಅಧ್ಯಕ್ಷೆ ರೀಟಾ ಸಿದ್ದಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ಕೃಷ್ಣ ಪಾಟೀಲ, ಮಹೇಶ್ವರಿ ಮಿಶಾಳೆ, ತಾ.ಪಂ. ಉಪಾಧ್ಯಕ್ಷೆ ಸಕ್ಕೂಬಾಯಿ ಮಡಿವಾಳ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಬಾಳು ಪಾಟೀಲ, ಸದಸ್ಯ ಗಿರೀಶ ಠೊಸುರ, ದೇಮಾಣಿ ಶಿರೋಜಿ, ರೈತ ಮುಖಂಡ ಅಶೋಕ ಮೇಟಿ, ಎಂ.ವಿ. ಘಾಡಿ, ಕೃಷಿ ತಜ್ಞ ಆರ್.ಬಿ. ಹಿರೇಮಠ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪ್ರಸನ್ನಕುಮಾರ ಸಾಲಿ, ತಹಸೀಲ್ದಾರ್ ವಿದ್ಯಾಧರ ಗುಳಗುಳೆ ಉಪಸ್ಥಿತರಿದ್ದರು. ಸುರೇಖಾ ಪಟ್ಟಣಶೆಟ್ಟಿ ನಿರ್ವಹಿಸಿದರು.

    ಕೃಷಿ ಪ್ರಶಸ್ತಿ: ಹಳಿಯಾಳದ ಬಿ.ಎಚ್. ಶಿವಪ್ಪ, ತತ್ವಣಗಿಯ ಸಾವಕ್ಕಾ ಹುಲಕೊಪ್ಪಕರ, ತೇರಗಾಂವನ ಸುರೇಶ ಮಾನಗೆ, ಕರಿಯಂಪಾಳಿಯ ಅಜಿತ ಕುಂಬಿಟಕರ, ಹರೆಗಾಳಿಯ ಸಂದೀಪ ತೋರಸ್ಕರ ಅವರಿಗೆ ಕೃಷಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಹಾಯಕ ಕೃಷಿ ನಿರ್ದೇಶಕ ಪಿ.ಐ. ಮಾನೆ ಹಾಗೂ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಎ.ಆರ್. ಗಿರಿಯಾಲ ಕಾರ್ಯಕ್ರಮದಲ್ಲಿ ವಿವಿಧ ಯೋಜನೆಗಳ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts