More

    ಸರ್ಕಾರಿ ನೌಕರರ ಬಡಾವಣೆಯೇ ಅಕ್ರಮ? : ನಗರಾಭಿವೃದ್ಧಿ ಪ್ರಾಧಿಕಾರದಿಂದಲೇ ಘೋಷಣೆ

    ಗಂಗಾಧರ್​ ಬೈರಾಪಟ್ಟಣ ರಾಮನಗರ
    ಸರ್ಕಾರಿ ಅಧಿಕಾರಿಗಳನ್ನು ಭಾಗೀದಾರರನ್ನಾಗಿ ಮಾಡಿಕೊಂಡು ಅಕ್ರಮವಾಗಿ ಬಡಾವಣೆ ನಿರ್ಮಿಸಿ ಮಾರಾಟ ಮಾಡುವುದು ಇತ್ತೀಚೆಗೆ ಸಾಮಾನ್ಯ ಎನ್ನುವಂತಾಗಿದೆ.
    ಆದರೆ, ರಾಮನಗರದಲ್ಲಿ ಸರ್ಕಾರಿ ನೌಕರರ ಸಂದಿಂದ ನಿರ್ಮಾಣ ಮಾಡಲಾಗಿರುವ ಬಡಾವಣೆಯೇ ಅಕ್ರಮ ಎಂದು ನಗರಾಭಿವೃದ್ಧಿ ಪ್ರಾಧಿಕಾರ ಘೋಷಣೆ ಮಾಡಿದ್ದು, ನಿವೇಶನ ಖರೀದಿ ಮಾಡಿರುವವರ ಎದೆಬಡಿತ ಹೆಚ್ಚುವಂತೆ ಮಾಡಿದೆ. ಅಲ್ಲದೆ, ಪ್ರಾಧಿಕಾರದಿಂದ ಇ-ಖಾತೆ ಮಾಡಿಕೊಡದಂತೆ ಸೂಚನೆ ನೀಡಿರುವುದರಿಂದ ಹಲವು ನಿವೇಶನದಾರರು ಇ-ಖಾತೆ ದೊರೆಯದೆ ತೊಂದರೆಗೆ ಒಳಗಾಗಿದ್ದಾರೆ.

    ಎಲ್ಲಿ ನಿರ್ಮಾಣ?: ರಾಮನಗರ ಹೊರವಲಯದಲ್ಲಿರುವ ವಡೇರಹಳ್ಳಿ ಸರ್ವೇ ನಂ. 32/1 ಮತ್ತು 33/1ರಲ್ಲಿ 7.20 ಎಕರೆ ಜಮೀನಿನಲ್ಲಿ ಸರ್ಕಾರಿ ನೌಕರರಿಗೆ ನಿವೇಶನ ನೀಡುವ ಉದ್ದೇಶದಿಂದಲೇ ಬೆಂಗಳೂರು& ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತೆ ಸ್ಫೂರ್ತಿ ನಗರ ಹೆಸರಿನ ಬಡಾವಣೆ ನಿರ್ಮಿಸಲಾಗಿತ್ತ್ತು. 2006ರ ಸುಮಾರಿಗೆ ಇಲ್ಲಿಗೆ ಬಡಾವಣೆ ನಿರ್ಮಾಣ ವಿನ್ಯಾಸ ನೆಗೆ ಅಂದಿನ ರಾಮನಗರ&ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದಿಂದ ತಾತ್ಕಾಲಿಕ ಅನುಮೋದನೆ ಸಹ ಪಡೆದುಕೊಳ್ಳಲಾಗಿತ್ತು. ಇದಾದ ನಂತರ ಸರ್ಕಾರಿ ನೌಕರರು ಸೇರಿ ಸಾಕಷ್ಟು ಮಂದಿಗೆ ನಿವೇಶನವನ್ನು ಹಂಚಿಕೆ ಮಾಡಿ ಮಾರಾಟ ಮಾಡಲಾಗಿದೆ.

    ಆರೋಪವೇನು?: ಸರ್ಕಾರಿ ನೌಕರರ ಸಂದಿಂದ ನಿರ್ಮಾಣ ಮಾಡಲಾಗಿರುವ ಬಡಾವಣೆ ಈಗ ಅಕ್ರಮ ಎಂದು ವಿನ್ಯಾಸ ನೆಯನ್ನೇ ರದ್ದುಪಡಿಸಲಾಗಿದೆ. ಕಾರಣವೇನೆಂದರೆ, ತಾತ್ಕಾಲಿಕವಾಗಿ ಅನುಮತಿ ಪಡೆದುಕೊಂಡು ವಿನ್ಯಾಸ ನೆಯನ್ನೇ ಬದಲಾವಣೆ ಮಾಡಿ ನಿವೇಶನಗಳನ್ನು ಮಾರಾಟ ಮಾಡಲಾಗಿದೆ. ಅಲ್ಲದೆ, ಸಾಮಾನ್ಯವಾಗಿ ಪ್ರತಿ ಬಡಾವಣೆಯಲ್ಲಿ ಸಾರ್ವಜನಿಕ ಉದ್ದೇಶಕ್ಕೆ ಮತ್ತು ಉದ್ಯಾನವನಕ್ಕೆ ಬಿಡಬೇಕಾದ ಜಾಗವನ್ನೂ ನಿಯಮಾನುಸಾರ ಬಿಡದೆ ಅವುಗಳನ್ನೂ ನಿವೇಶನ ಮಾಡಿ ಮಾರಾಟ ಮಾಡಿರುವ ಆರೋಪ ನೌಕರರ ಸಂದ ಮೇಲಿದೆ. ಅಲ್ಲದೆ, ರಸ್ತೆಯ ಅಗಲ 9 ಮೀಟರ್​ ಎಂದು ನೆಯಲ್ಲಿ ತೋರಿಸಿದ್ದರೂ, ವಾಸ್ತವವಾಗಿ ಅಲ್ಲಿರುವುದು ಕೇವಲ 7.50 ಮೀಟರ್​ ಎನ್ನುವುದು ಪ್ರಾಧಿಕಾರದ ಪರಿಶೀಲನೆ ವೇಳೆ ಪತ್ತೆಯಾಗಿದೆ.

    ಕ್ರಮದ ಅಗತ್ಯವಿದೆ?: ವಡೇರಹಳ್ಳಿ ಹರೀಸಂದ್ರ ಗ್ರಾಪಂ ವ್ಯಾಪ್ತಿಗೆ ಸೇರಿದೆ. ಬಡಾವಣೆಯಲ್ಲಿ ಸಾಕಷ್ಟು ನ್ಯೂನತೆಗಳಿದ್ದರೂ ಗ್ರಾಮ ಪಂಚಾಯಿತಿಯಲ್ಲಿ ಖಾತೆಗಳನ್ನು ಮಾಡಿಕೊಡಲಾಗಿದೆ. ಇದು ಹೇಗೆ ಸಾಧ್ಯ ಎನ್ನುವ ಪ್ರಶ್ನೆಯೂ ಮೂಡುತ್ತದೆ. ಒಂದೆಡೆ ಪ್ರಾಧಿಕಾರವೇ ಬಡಾವಣೆಗೆ ನೀಡಿದ್ದ ತಾತ್ಕಾಲಿಕ ವಿನ್ಯಾಸ ನೆ ರದ್ದುಪಡಿಸಿದ್ದರೂ ಖಾತೆ ಮಾಡಿಕೊಡಲು ಹೇಗೆ ಸಾಧ್ಯ? ಈ ಹಿನ್ನೆಲೆಯಲ್ಲಿ ಇದರಲ್ಲಿ ಭಾಗಿ ಆಗಿರುವ ಪ್ರತಿಯೊಬ್ಬ ಗ್ರಾಪಂ ಸಿಬ್ಬಂದಿ ಹಾಗೂ ಸರ್ಕಾರಿ ನೌಕರರನ್ನು ವಿಚಾರಣೆಗೆ ಒಳಪಡಿಸಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಸೂಕ್ತ ಕ್ರಮವಹಿಸಬೇಕಿದೆ.

    ಬೆಳಕಿಗೆ ಬಂದಿದ್ದು ಹೇಗೆ?: 2018ರ ಮಾರ್ಚ್​ನಲ್ಲಿಯೇ ಸ್ಫೂರ್ತಿ ನಗರ ಬಡಾವಣೆಗೆ ನೀಡಿದ್ದ ತಾತ್ಕಾಲಿಕ ವಿನ್ಯಾಸ ನೆ ಅನುಮತಿ ರದ್ದುಪಡಿಸಲಾಗಿದೆ. ಇತ್ತೀಚೆಗೆ ಇಲ್ಲಿನ ನಿವೇಶನದಾರರೊಬ್ಬರು ಇ&ಖಾತೆ ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನುವ ದೂರನ್ನು ಪ್ರಾಧಿಕಾರದ ಗಮನಕ್ಕೆ ತಂದಿದ್ದಾರೆ. ಈ ವೇಳೆ ಪರಿಶೀಲಿಸಲಾಗಿ, 2018ರಲ್ಲಿ ನೆಯನ್ನು ರದ್ದುಪಡಿಸಿರುವುದು ಪ್ರಾಧಿಕಾರದ ಹಾಲಿ ಆಡಳಿತ ಮಂಡಳಿ ಗಮನಕ್ಕೆ ಬಂದಿದೆ. ಆದರೆ ಲಿಖಿತವಾಗಿ ಯಾರೂ ದೂರು ನೀಡದ ಕಾರಣ ಪ್ರಾಧಿಕಾರ ಸಹ ಕ್ರಮ ಕೈಗೊಳ್ಳದೆ ಸುಮ್ಮನೆ ಕುಳಿತಿದೆ.

    2018ರಲ್ಲಿಯೇ ಬಡಾವಣೆ ಅಕ್ರಮ ಎಂದು ತೀರ್ಮಾನ ಕೈಗೊಳ್ಳಲಾಗಿದೆ. ಇ&ಖಾತೆ ಆಗದ ಬಗ್ಗೆ ಗಮನಕ್ಕೂ ಬಂದಿದೆ. ಲಿಖಿತ ದೂರು ನೀಡಿದರೆ ಪ್ರಾಧಿಕಾರದಿಂದ ಕ್ರಮ ಕೈಗೊಳ್ಳಲಾಗುವುದು.
    >ಎಚ್​.ಎಸ್​. ಮುರಳೀಧರ್​ ಅಧ್ಯಕ್ಷ, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ

    ಸಂದಿಂದಲೇ ಬಡಾವಣೆ ನಿರ್ಮಿಸಲಾಗಿದೆಯಾದರೂ, ಸದ್ಯ ಇದು ಸರ್ಕಾರಿ ನೌಕರರ ಗೃಹ ನಿರ್ಮಾಣ ಸಂದ ನಿರ್ವಹಣೆ ಆಗುತ್ತಿದೆ. ಅಲ್ಲಿನ ಸಮಸ್ಯೆ ಬಗ್ಗೆ ಸಾಕಷ್ಟು ಮಂದಿ ದೂರು ನೀಡುತ್ತಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು.
    ಕೆ.ಸತೀಶ್​ ಅಧ್ಯಕ್ಷ, ಸರ್ಕಾರಿ ನೌಕರರ ಸಂ, ರಾಮನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts