More

    ಸರ್ಕಾರಿ ಜಮೀನು ಅತಿಕ್ರಮಣ ಮಾಡದಂತೆ ಸೂಚನೆ

    ಗುತ್ತಲ: ಅಕ್ಕೂರ ಗ್ರಾಮದ ಸರ್ಕಾರಿ ಜಮೀನನ್ನು ಅತಿಕ್ರಮಣ ಮಾಡದಂತೆ ಸೂಚನೆ ಹಾಗೂ ಎಚ್ಚರಿಕೆಯ ಫಲಕಗಳನ್ನು ಬುಧವಾರ ಅಳವಡಿಸಲಾಯಿತು.

    ಗುತ್ತಲ ಹೋಬಳಿಯ ಅಕ್ಕೂರ ಗ್ರಾಮದ ವ್ಯಾಪ್ತಿಯಲ್ಲಿ ಬರುವ 98/2ಇ ಸರ್ವೆ ನಂಬರಿನ 146 ಎಕರೆ 20 ಗುಂಟೆಯ ಜಮೀನು ಸರ್ಕಾರಿ ಜಮೀನಾಗಿದ್ದು, ಅನೇಕರು ಉಳುಮೆ ಹಾಗೂ ಅಕ್ರಮವಾಗಿ ಕಲ್ಲು ಗಣಿಗಾರಿಕೆಯಲ್ಲಿ ತೊಡಗಿದ್ದರು. ಹೀಗಾಗಿ ಸರ್ಕಾರಿ ಜಮೀನಿನ ರಕ್ಷಣೆಗೆ ಮುಂದಾದ ತಹಸೀಲ್ದಾರ್ ಶಂಕರ ಜಿ.ಎಸ್., ಬುಧವಾರ ಜಮೀನಿಗೆ ಭೇಟಿ ನೀಡಿ, ಅಕ್ಕ ಪಕ್ಕದ ಜಮೀನುಗಳಲ್ಲಿದ್ದ ರೈತರಿಗೆ ಹಾಗೂ ಕೂಲಿ ಕಾರ್ವಿುಕರಿಗೆ ಸಾರ್ವಜನಿಕರು ಸರ್ಕಾರಿ ಜಮೀನನ್ನು ಅತಿಕ್ರಮಿಸುವುದು, ಕಲ್ಲು ಗಣಿಗಾರಿಕೆ ಮಾಡುವವರ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಿದರು. ಅಲ್ಲದೆ, ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

    ಜಮೀನುಗಳಲ್ಲಿ ಎಚ್ಚರಿಕೆ ಹಾಗೂ ಸೂಚನ ಫಲಕಗಳನ್ನು ಅಳವಡಿಸಲಾಯಿತು.

    ಉಪ ತಹಸೀಲ್ದಾರ್ ಎಂ.ಡಿ. ಕಿಚಡೇರ, ಪಿಎಸ್​ಐ ಎಂ.ಇ. ಮಣ್ಣಣ್ಣನವರ, ಕಂದಾಯ ನಿರೀಕ್ಷಕ ಆರ್.ಎನ್. ಮಲ್ಲಾಡದ, ಗ್ರಾಮ ಲೆಕ್ಕಿಗ ಬಸಯ್ಯ ಮಠಪತಿ, ಕಾನ್​ಸ್ಟೇಬಲ್​ಗಳಾದ ಮಾಲತೇಶ ದೊಡ್ಡಮನಿ, ಬಸವರಾಜ ಗೋನಾಳ, ಹೊಸರಿತ್ತಿ ಗ್ರಾಪಂ ಮಾಜಿ ಉಪಾಧ್ಯಕ್ಷ ಹಾವೇರಿಮಠ, ಐ.ಜಿ. ಕೋರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts