More

    ಸರ್ಕಾರಿ ಆಸ್ಪತ್ರೆಯಲ್ಲಿ ಕ್ಯಾಂಟೀನ್ ಆರಂಭ

    ಮುಂಡರಗಿ: ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಪ್ರಾರಂಭಗೊಂಡಿರುವ ಉಪಾಹಾರ ಮತ್ತು ಭೋಜನಾಲಯದಲ್ಲಿ ಉತ್ತಮ ಆಹಾರ ಒದಗಿಸಬೇಕು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.

    ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಶನಿವಾರ ನಾಗರಿಕ ಸೌಲಭ್ಯಗಳ ಸಂಕೀರ್ಣ ಮಳಿಗೆಯಲ್ಲಿ ಅರುಂಧತಿ ಫೌಂಡೇಷನ್ ಟ್ರಸ್ಟ್ ಪ್ರಾರಂಭಿಸಿರುವ ಅರುಂಧತಿ ಭೋಜನಾಲಯ ಉದ್ಘಾಟಿಸಿ ಅವರು ಮಾತನಾಡಿದರು.

    ಆಸ್ಪತ್ರೆ ಹಾಗೂ ಉಪಹಾರ ಗೃಹಗಳನ್ನು ಸದಾ ಸ್ವಚ್ಛವಾಗಿಟ್ಟುಕೊಳ್ಳಬೇಕು, ಸಿಬ್ಬಂದಿಯ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಯಾವ ಲೋಪ ದೋಷ ಉಂಟಾಗದಂತೆ ಉಪಹಾರ ಮತ್ತು ಭೋಜನಾಲಯವನ್ನು ನಿರ್ವಹಿಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.

    ಸರ್ಕಾರಿ ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷ ಡಾ.ಕುಮಾರಸ್ವಾಮಿ ಹಿರೇಮಠ ಮಾತನಾಡಿ, ಆಸ್ಪತ್ರೆಗೆ ಬರುವ ರೋಗಿಗಳಿಗೆ ರಿಯಾಯಿತಿ ದರದಲ್ಲಿ ಉತ್ತಮ ಆಹಾರ ಪೂರೈಸುವ ಉದ್ದೇಶದಿಂದ ಉಪಾಹಾರ ಗೃಹ ಸ್ಥಾಪಿಸಲಾಗಿದೆ. 5 ರೂ.ಗೆ ಉಪಾಹಾರ ಮತ್ತು 10 ರೂ.ಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.

    ವೀರಭದ್ರೇಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ, ಎಪಿಎಂಸಿ ಅಧ್ಯಕ್ಷ ರವೀಂದ್ರ ಉಪ್ಪಿನಬೆಟಗೇರಿ, ಬಿಜೆಪಿ ಮುಂಡರಗಿ ಮಂಡಳ ಅಧ್ಯಕ್ಷ ಹೇಮಗಿರೀಶ ಹಾವಿನಾಳ, ತಾ.ಪಂ. ಸದಸ್ಯ ರುದ್ರಗೌಡ ಪಾಟೀಲ, ಎಸ್.ವಿ. ಪಾಟೀಲ, ರಜನಿಕಾಂತ ದೇಸಾಯಿ, ರಮೇಶ ಹುಳಕಣ್ಣವರ, ಮೈಲಾರಪ್ಪ ಕಲಕೇರಿ, ಸಂಜಯ ಚವಡಾಳ, ಪವನ ಮೇಟಿ, ಕೊಪ್ಪಣ್ಣ ಕೊಪ್ಪಣ್ಣವರ, ದೇವು ಹಡಪದ, ನಿಂಗರಾಜ ಹಾಲಿನವರ, ವೈದ್ಯಾಧಿಕಾರಿಗಳಾದ ಡಾ.ಬಸವರಾಜ ಕೆ, ಡಾ.ಕೀರ್ತಿಹಾಸ, ಪುರಸಭೆ ಮುಖ್ಯಾಧಿಕಾರಿ ಎಸ್.ಎಚ್.ನಾಯ್ಕರ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts