More

    ಸಕಾಲಕ್ಕೆ ಧನಸಹಾಯ ವಿತರಣೆಗೆ ಆಗ್ರಹ

    ಮುಂಡರಗಿ: ಕಾಯಂ ನಿರೀಕ್ಷಕರ ನೇಮಕ, ಕಾರ್ವಿುಕ ಇಲಾಖೆಯ ತಾಲೂಕು ಕಚೇರಿ ಸ್ಥಳಾಂತರ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪಟ್ಟಣದ ಸೆಂಟ್ರಿಂಗ್ ಮತ್ತು ಬಾರ್ ಬೆಂಡಿಂಗ್ ಕಾರ್ವಿುಕರ ಸಂಘದ ನೇತೃತ್ವದಲ್ಲಿ ಕಾರ್ವಿುಕರು ಮಂಗಳವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಆಶಪ್ಪ ಪೂಜಾರಿ ಅವರಿಗೆ ಮನವಿ ಸಲ್ಲಿಸಿದರು.

    ಕಾರ್ವಿುಕ ಮುಖಂಡ ನಾಗರಾಜ ಕೊರ್ಲಹಳ್ಳಿ ಮಾತನಾಡಿ, ಪಟ್ಟಣದಲ್ಲಿ ಕಾಟಾಚಾರಕ್ಕೆ ಕಾರ್ವಿುಕ ಇಲಾಖೆಯ ಕಚೇರಿಯನ್ನು ತೆರೆಯಲಾಗಿದೆ. ಅಲ್ಲಿ ಸಿಬ್ಬಂದಿಯಿಲ್ಲದೇ ಯಾವ ಕೆಲಸ ಕಾರ್ಯಗಳು ಆಗುತ್ತಿಲ್ಲ. ಇರುವ ಕೆಲ ಸಿಬ್ಬಂದಿ ಕಾರ್ವಿುಕರ ಕೆಲಸಗಳನ್ನು ಮಾಡಿಕೊಡದೆ ಸತಾಯಿಸುತ್ತಿದ್ದಾರೆ’ ಎಂದು ದೂರಿದರು. ಸೆಂಟ್ರಿಂಗ್ ಮತ್ತು ಬಾರ್ ಬೆಂಡಿಂಗ್ ಸಂಘದ ಅಧ್ಯಕ್ಷ ಗ್ಯಾನಪ್ಪ ಶೀರಿ ಮಾತನಾಡಿ, ಸಹಾಯಧನ ಸೇರಿದಂತೆ ಕಾರ್ವಿುಕರ ಮಕ್ಕಳಿಗೆ ಸಕಾಲಕ್ಕೆ ಶೈಕ್ಷಣಿಕ ಧನಸಹಾಯ, ಮದುವೆ ಧನ ಸಹಾಯ, ಅನಾರೋಗ್ಯ ಧನ ಸಹಾಯ, ಮರಣ ಹೊಂದಿದ ಕುಟುಂಬಕ್ಕೆ ಧನ ಸಹಾಯ ನೀಡಬೇಕು. ಕಾರ್ವಿುಕ ಕಚೇರಿಯನ್ನು ಮಿನಿ ವಿಧಾನಸೌಧಕ್ಕೆ ಸ್ಥಳಾಂತರಿಸಬೇಕು. ಈ ಎಲ್ಲ ಬೇಡಿಕೆಗಳನ್ನು 15 ದಿನದೊಳಗೆ ಈಡೇರಿಸದಿದ್ದರೆ ತಹಸೀಲ್ದಾರ್ ಕಚೇರಿ ಮುಂದೆ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದರು.

    ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್. ಗೌಡರ ಮಾತನಾಡಿ, ಅಧಿಕಾರಿಗಳು ಪಟ್ಟಣದ ನೋಂದಾಯಿತ ಕಾರ್ವಿುಕರಿಗೆ ಸರ್ಕಾರದಿಂದ ಕೊಡಲ್ಪಡುವ 5 ಸಾವಿರ ರೂ. ಸಹಾಯಧನ ಮತ್ತಿತರ ಸೌಲಭ್ಯಗಳನ್ನು ನೀಡದೆ ಕಾರ್ವಿುಕರಿಗೆ ಅನ್ಯಾಯ ಮಾಡುತ್ತಿದ್ದಾರೆ. ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಕಾರ್ವಿುಕರು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. 5 ಸಾವಿರ ರೂ.ಸಹಾಯ ಧನಕ್ಕಾಗಿ ತಾಲೂಕಿನ ಸಾವಿರಾರು ಕಾರ್ವಿುಕರು ಅರ್ಜಿ ಸಲ್ಲಿಸಿದ್ದರು. ಆದರೆ, ಇದುವರೆಗೆ ಕೆಲವೇ ಕಾರ್ವಿುಕರಿಗೆ ಮಾತ್ರ ಪರಿಹಾರ ಧನ ಮಂಜೂರಾಗಿದೆ ಎಂದು ದೂರಿದರು.

    ತಹಸೀಲ್ದಾರ್ ಪರವಾಗಿ ಉಪ ತಹಸೀಲ್ದಾರ್ ಎಸ್.ಎಸ್. ಬಿಚ್ಚಾಲಿ ಮನವಿ ಸ್ವೀಕರಿಸಿದರು. ಮುದುಕಪ್ಪ ಕುಂಬಾರ, ಪ್ರಕಾಶ ಹಲವಾಗಲಿ, ರಾಜಾಬಕ್ಷೀ ಬೆಟಗೇರಿ, ಶರಣಪ್ಪ ಮುದ್ದಿ, ಸುಭಾಸ ಕುಂಬಾರ, ತಿಪ್ಪಣ್ಣ ಕಟ್ಟಿಮನಿ, ಕೃಷ್ಣಾ ರಾಮೇನಹಳ್ಳಿ, ವೀರಪ್ಪ ಕುಂಬಾರ, ಮಹೇಶ ಅಬ್ಬಿಗೇರಿ, ರವಿ ಬಡಿಗೇರ, ಕೇಶಪ್ಪ ರಾಯದುರ್ಗ, ಎಂ.ಸಿ. ಪತ್ತಾರ, ಷಣ್ಮುಖಪ್ಪ ಕಮ್ಮಾರ, ಹುಸೇನಸಾಬ್ ಬೆಳಗಟ್ಟಿ, ಮಂಜುಳಾ ವಾರದ, ರೇಣುಕಾ ಕೋರಿಶೆಟ್ಟರ್, ಗೌರಮ್ಮ ಹಮ್ಮಿಗಿ, ಶೋಭಾ ಕಪ್ಪತನವರ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts