More

    ಸಂವಿಧಾನ ರಥಯಾತ್ರೆ ಸಂಚಾರ ಯಶಸ್ವಿಗೆ ಕೈಜೋಡಿಸಿ

    ತಾಳಿಕೋಟೆ: ಯುವಜನತೆಯಲ್ಲಿ ಸಂವಿಧಾನದ ಮೂಲ ಆಶಯದ ತಿಳಿವಳಿಕೆ ಮೂಡಿಸಲು 19 ರಿಂದ 22 ರವರೆಗೆ ತಾಲೂಕಿನಾದ್ಯಂತ ಸಂವಿಧಾನ ಜಾಗೃತಿ ಜಾಥಾ ಸ್ತಬ್ದಚಿತ್ರ ರಥ ಸಂಚರಿಸಲಿದ್ದು, ಎಲ್ಲರೂ ಇದಕ್ಕೆ ಕೈಜೋಡಿಸಬೇಕು ಎಂದು ತಹಸೀಲ್ದಾರ್ ಕೀರ್ತಿ ಚಾಲಕ ಹೇಳಿದರು.

    ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಸಭಾಭವನದಲ್ಲಿ ಸಂವಿಧಾನ ರಥಯಾತ್ರೆಯ ಪೂರ್ವಸಿದ್ಧತೆಯ 2ನೇ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಶುಕ್ರವಾರ ಅವರು ಮಾತನಾಡಿದರು.

    ಜಾಥಾ ಯಶಸ್ವಿಗಾಗಿ ಈಗಾಗಲೇ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಈ ಕಾರ್ಯಕ್ರಮ ಪಂಚಾಯಿತಿ ಮಟ್ಟದಲ್ಲಿಯೂ ನಡೆಯಲಿದೆ. 19ಕ್ಕೆ ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮಕ್ಕೆ ರಥ ಪ್ರವೇಶ ಮಾಡಲಿದ್ದು 20 ರಂದು ಪಟ್ಟಣಕ್ಕೆ ಆಗಮಿಸಲಿದೆ. ಇದರ ಅದ್ದೂರಿ ಸ್ವಾಗತಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು. ದಲಿತ ಮುಖಂಡರಾದ ಬಸವರಾಜ ಕಟ್ಟಿಮನಿ, ಜೈಭೀಮ ಮುತ್ತಗಿ ಮಾತನಾಡಿ ಸಲಹೆ ಸೂಚನೆಗಳನ್ನು ನೀಡಿದರು.

    ತಾಪಂ ಇಒ ಬಿ.ಆರ್.ಬಿರಾದಾರ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್. ಸಾವಳಗಿ, ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ, ಬಿಸಿಎಂ ಅಧಿಕಾರಿ ಶಿವಲೀಲಾ ಕೊಣ್ಣೂರ, ಇಸಿಒ ಎಸ್.ಎಸ್. ಹಿರೇಮಠ, ಪಿಎಸ್‌ಐ ಆರ್.ಡಿ.ಲಕ್ಷ್ಮಣ, ಶಿರಸ್ತೆದಾರ ಜೆ.ಆರ್.ಜೈನಾಪುರ, ಪಶು ವೈದ್ಯಾಧಿಕಾರಿ ರಾಥೋಡ, ಪುರಸಭೆ ಸದಸ್ಯರಾದ ಎಂ.ಕೆ. ಪಟ್ಟಣಶೆಟ್ಟಿ, ಮುಸ್ತಾ ಚೌಧರಿ, ಪರಶುರಾಮ ತಂಗಡಗಿ, ಮಾಜಿ ಸದಸ್ಯ ಪ್ರಕಾಶ ಹಜೇರಿ, ಮಾಜಿ ಅಧ್ಯಕ್ಷೆ ನೀಲಮ್ಮ ಪಾಟೀಲ, ಮಂಜುನಾಥ ಶೆಟ್ಟಿ, ಮಹೇಶ ಚಲವಾದಿ, ಗೋಪಾಲ ಕಟ್ಟಿಮನಿ, ಸಿಆರ್‌ಸಿಗಳಾದ ರಾಜು ವಿಜಾಪೂರ, ಜೆ.ಎ.ಎಕೀನ, ಇಬ್ರಾಹಿಂ ಆಲಮೇಲ, ಕೃಷಿ ಅಧಿಕಾರಿ ಮಹಿಬೂಬ ಬೀಳಗಿ, ಸಮಾಜ ಕಲ್ಯಾಣ ಇಲಾಖೆಯ ನಿಲಯ ಪಾಲಕರಾದ ಎಂ.ಬಿ. ಜಾಯವಾಡಗಿ, ಎಸ್‌ಎಂ ಕಲಬುರ್ಗಿ, ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು, ದಲಿತಪರ, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಪಟ್ಟಣದ ಗಣ್ಯರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts