More

    ಸಂವಿಧಾನ ದೇಶದ ಪವಿತ್ರ ಗ್ರಂಥ


    ಯಾದಗಿರಿ: ಜೀವನಪೂರ್ತಿ ಅವಮಾನ, ಶೋಷಣೆಗಳ ಮಧ್ಯದಲ್ಲೇ ಸ್ವಾಭಿಮಾನದಿಂದ ಬದುಕು ರೂಪಿಸಿಕೊಂಡು, ದೇಶಕ್ಕೆ ಪವಿತ್ರವಾದ ಸಂವಿಧಾನ ಗ್ರಂಥ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಪ್ರಾಥಃಸ್ಮರಣೀಯರು ಎಂದು ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ., ಅಭಿಪ್ರಾಯಪಟ್ಟರು.


    ಸಂವಿಧಾನ ಸಮರ್ಪಣಾ ದಿನದ ನಿಮಿತ್ತ ಭಾನುವಾರ ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬಾಬಾ ಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿ, ಬಡತನದಲ್ಲೇ ಜನಿಸಿದ ಡಾ.ಭೀಮರಾವ್ ಜನಾಂಗವನ್ನು ದೇಶದ ಮೇಲ್ಜಾತಿಯ ವರ್ಗ ಅತ್ಯಂತ ನಿಷ್ಕರ್ಷವಾಗಿ ಕಾಣುತ್ತಿತ್ತು. ಆದರೂ ಅವರು ಎದೆಗುಂದದೆ ತನ್ನ ಜನರನ್ನು ಶೋಷಣೆ, ಅವಮಾನಗಳಿಂದ ಮುಕ್ತಗೊಳಿಸಲು ಶಿಕ್ಷಣದ ಅಸ ಪ್ರಯೋಗಿಸಿದರು ಎಂದರು.

    ಸಂವಿಧಾನದಲ್ಲಿನ ಮೌಲ್ಯಗಳು ಜೀವನದ ಮೌಲ್ಯಗಳಾಗಿ ಅಂತರ್ಗತವಾದಾಗ ಮಾತ್ರ ಈ ದಿನಕ್ಕೆ ನಿಜವಾದ ಅರ್ಥ ಬರುತ್ತದೆ. ಸಂವಿಧಾನ ಓದುವುದರ ಜತೆಗೆ ಕರ್ತವ್ಯ ಮತ್ತು ಹಕ್ಕುಗಳನ್ನು, ಮೌಲ್ಯಗಳನ್ನು ನಿಷ್ಠೆ, ಪ್ರಾಮಾಣಿಕತೆಯಿಂದ ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶಿಕ್ಷಣ ಹುಲಿಯ ಹಾಲಿದ್ದಂತೆ, ಅದನ್ನು ಕುಡಿದವರು ಘರ್ಜಿಸಲೇಬೇಕು ಎಂದು ಡಾ.ಅಂಬೇಡ್ಕರ್ ಹೇಳಿದ್ದಾರೆ ಎಂದು ಸ್ಮರಿಸಿದರು.

    ಬಾಬಾ ಸಾಹೇಬರು ಸಾಕಷ್ಟು ಬಡತನದ ಮಧ್ಯದಲ್ಲೂ ವಿದೇಶದಲ್ಲಿ ವ್ಯಾಸಂಗ ಮಾಡಿ, 14 ಪದವಿಗಳನ್ನು ಪಡೆದು ಸಂವಿಧಾನ ರಚಿಸಿದ್ದಾರೆ. ಅಲ್ಲದೆ, ಆಳುವ ವರ್ಗದ ಆಯ್ಕೆ ಜನರಿಂದಲೇ ಆಗಬೇಕು ಎಂಬ ಕಾರಣದಿಂದ ಮತದಾನ ಎಂಬ ಅಸ ಸಹ ನಮಗೆ ನೀಡಿದ್ದಾರೆ. ಈ ದೇಶದಲ್ಲಿ ಆಥರ್ಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಎಲ್ಲರಿಗೂ ಸಂವಿಧಾನ ಅಮೃತವಾಗಿದೆ ಎಂದು ಬಣ್ಣಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts